ಭಾರತದಲ್ಲಿ ಅಗ್ಗದ ಬೆಲೆಯ ನಾರ್ಟನ್ ಬೈಕ್‌ಗಳನ್ನು ಪರಿಚಯಿಸಲಿದೆ ಟಿವಿಎಸ್ ಮೋಟಾರ್
ಭಾರತದ ಜನಪ್ರಿಯ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಈಗಾಗಲೇ ಹಲವಾರು ಅಂತರಾಷ್ಟ್ರೀಯ ಬೈಕ್ ಬ್ರಾಂಡ್‌ಗಳನ್ನು ಸಹಭಾಗಿತ್ವದ ಯೋಜನೆ ಅಡಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ನಾರ್ಟನ್ ಮೋಟಾರ್‌ಸೈಕಲ್ ಕಂಪನಿ ಜೊತೆಗೂಡಿ ಹೊಸ ಮಾದರಿಯ ಕಫೆ ರೇಸರ್ ಬೈಕ್ ಬಿಡುಗಡೆಗೆ ಸಿದ್ದವಾಗಿದೆ.

ಬ್ರಿಟಿಷ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ನಾರ್ಟನ್ ಮೋಟಾರ್‌ಸೈಕಲ್ ಈಗಾಗಲೇ ವಿಶ್ವದ ಪ್ರಮುಖ 21 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲವನ್ನು ಹೊಂದಿದ್ದು, ಭಾರತದಲ್ಲೂ ಇದೀಗ ಅಧಿಕೃತವಾಗಿ ಟಿವಿಎಸ್ ಜೊತೆಗೂಡಿ ಬೈಕ್ ಮಾರಾಟ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಅಂತಿಮ ಹಂತದ ಒಪ್ಪಂದಕ್ಕೆ ಸಹಿ ಹಾಕಿರುವ ಎರಡು ಬೈಕ್ ಕಂಪನಿಗಳು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಯ ಹೊಸ ಕಫೆ ರೇಸರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿವೆ.

1898ರಲ್ಲೇ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಇದೀಗ ಮೊದಲ ಬಾರಿಗೆ ಭಾರತದಲ್ಲೂ ಬೈಕ್ ಮಾರಾಟವನ್ನು ಆರಂಭಿಸುತ್ತಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಈ ಮೊದಲು ಹಲವು ಎಂಟ್ರಿ ಲೆವಲ್ ಕಫೆ ರೇಸರ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ನಾರ್ಟನ್ ಕಂಪನಿಯು ಇದೀಗ ಐಷಾರಾಮಿ ಫೀಚರ್ಸ್‌ವುಳ್ಳ ಕಫೆ ರೇಸರ್ ಬೈಕ್ ಮಾದರಿಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸದ್ಯ ಮಾರಾಟವಾಗುತ್ತಿರುವ ನಾರ್ಟನ್ ಬೈಕ್ ಮಾದರಿಗಳಲ್ಲಿ ಆರಂಭಿಕ ಬೈಕ್ ಮಾದರಿಗಳೇ 800ಸಿಸಿ ಎಂಜಿನ್ ಹೊಂದಿವೆ.

ಆದರೆ ಭಾರತದಲ್ಲಿ ಮಧ್ಯಮ ಕ್ರಮಾಂಕದ ಐಷಾರಾಮಿ ಫೀಚರ್ಸ್‌ವುಳ್ಳ ಬೈಕ್ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಸುಳಿವು ನೀಡಿದೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಮಾಹಿತಿ ಪ್ರಕಾರ, ಟಿವಿಎಸ್ ಕಂಪನಿಯು ಆರಂಭಿಕವಾಗಿ 500 ಸಿಸಿ ಕಫೆ ರೇಸರ್ ಬೈಕ್‌ಗಳನ್ನು ನಾರ್ಟನ್ ಜೊತೆಗೂಡಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳ ಬೆಲೆ ಇಳಿಕೆಗಾಗಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ.

ಸದ್ಯ ಸಿಕೆಡಿ ಆಮದು ನೀತಿಯಡಿ ಭಾರತದಲ್ಲಿ ಮಾರಾಟವಾಗುತ್ತಿರುವ ನಾರ್ಟನ್ ನಿರ್ಮಾಣದ ಕಮಾಂಡೋ 961 ಮತ್ತು ಡೊಮಿನಾಟರ್ ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಅನುಕ್ರಮವಾಗಿ ರೂ.20.99 ಲಕ್ಷ ಮತ್ತು 23.70 ಲಕ್ಷ ಬೆಲೆ ಹೊಂದಿವೆ.

ಈ ಎರಡು ಬೈಕ್‌ಗಳಲ್ಲೂ 961 ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಟಿವಿಎಸ್ ಕಂಪನಿಯು ಕಮಾಂಡೋ 961 ಮತ್ತು ಡೊಮಿನಾಟರ್ ಮಾದರಿಯಲ್ಲೇ 500ಸಿಸಿ ಬೈಕ್‌ಗಳನ್ನು ಸಿದ್ದಪಡಿಸಲಿದೆ.

ಹೊಸ ಎಂಜಿನ್ ಪ್ರೇರಿತ ನಾರ್ಟನ್ ಮೋಟಾರ್‌ಸೈಕಲ್ ಬೈಕ್‌ಗಳು ಮುಂಬರುವ 2021ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ 500 ಬೈಕ್‌ಗಳ ಬೆಲೆಯು ರೂ. 5 ಲಕ್ಷದಿಂದ ರೂ.7 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications