ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ವೆಸ್ಪಾ ಸ್ಕೂಟರ್‌ಗಳು
ವೆಸ್ಪಾ ತನ್ನ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಈ ಬಿಎಸ್-6 ವೆಸ್ಪಾ ಸ್ಕೂಟರ್‌ಗಳ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.93,035 ಗಳಾಗಿದೆ.

ಬಿಡುಗಡೆಯಾಗಿರುವರೆಟ್ರೋ ವಿನ್ಯಾಸದ ಸ್ಕೂಟರ್‌ಗಳು ಎರಡು ರೀತಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ ಈ ಸ್ಕೂಟರ್‌ಗಳು ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಟಾಪ್ ಆಫ್ ಲೈನ್ ವೆಸ್ಪಾ 149 ಎಸ್‌ಎಕ್ಸ್‌ಎಲ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,26,650 ಗಳಾಗಿದೆ. ಈ ಹೊಸ ಸ್ಕೂಟರ್‌ಗಳು 150 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10 ಬಿಹೆಚ್‍ಪಿ ಪವರ್ ಮತ್ತು 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವೆಸ್ಪಾ ಸ್ಕೂಟರ್ ನ 149 ಸಿಸಿ ಎಂಜಿನ್ 10 ಬಿಹೆಚ್‌ಪಿ ಮತ್ತು 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಗಳು ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ವೆಸ್ಪಾ 125 ಸಿಸಿ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಈ ಎಂಜಿನ್ 9.7 ಬಿಹೆಚ್‍ಪಿ ಪವರ್ ಮತ್ತು 9.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಬಿಎಸ್-4 ಮಾದರಿಯು 9.5 ಬಿಹೆಚ್‌ಪಿ ಮತ್ತು 9.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳಲ್ಲಿ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೊಸ ವೆಸ್ಪಾ ಸ್ಕೂಟರ್ ನಲ್ಲಿ ಬಿಎಸ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿರುವುದನ್ನು ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ವೆಸ್ಪಾಆ ಅರ್ಬನ್ ಕ್ಲಬ್ ಸ್ಕೂಟರ್ ವೃತ್ತ ಆಕರಾದ ಹೆಡ್‌ಲೈಟ್ ಅನ್ನು ಹೊಂದಿದೆ. ಈ ಸ್ಕೂಟರ್ ರೆಟ್ರೊ ಲುಕ್ ಅನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‌ಟಿಆರ್ ಬೈಕುಗಳು

ವೆಸ್ಪಾ 125 ಎಸ್‌ಎಕ್ಸ್‌ಎಲ್ ಸ್ಕೂಟರ್, 125 ಸಿಸಿ ವಿಭಾಗದಲ್ಲಿ ಟಾಪ್-ಸ್ಪೆಕ್ ರೂಪಾಂತರವಾಗಿದೆ. ಈ ಸ್ಕೂಟರ್ ಆಯತಾಕಾರದ ಆಕಾರದ ಹೆಡ್‌ಲೈಟ್, ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫೈವ್-ಸ್ಪೋಕ್ ಬ್ಲ್ಯಾಕ್ ಅಲಾಯ್ ವೀಲ್ಸ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ.

ವೆಸ್ಪಾ 149 ಸಿಸಿ ಸ್ಕೂಟರ್‌ಗಳು ವಿಎಕ್ಸ್‌ಎಲ್ ಮತ್ತು ಎಸ್‌ಎಕ್ಸ್‌ಎಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ವಿಎಕ್ಸ್‌ಎಲ್ ಸ್ಕೂಟರ್ ವೃತ್ತ ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ವೀಸರ್ ಅನ್ನು ಒಳಗೊಂಡಿದೆ. ಎಸ್‌ಎಕ್ಸ್‌ಎಲ್ ಆಯತಾಕಾರದ ಆಕಾರದ ಹೆಡ್‌ಲೈಟ್ ಅನ್ನು ಹೊಂದಿದೆ. ಇನ್ನು ಇತರ ಫೀಚರ್ ಗಳು ವಿಎಕ್ಸ್‌ಎಲ್ ರೂಪಾಂತರವನ್ನು ಹೋಲುತ್ತವೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ವೆಸ್ಪಾ ಅರ್ಬನ್ ಕ್ಲಬ್ ಮತ್ತು ಎಲ್ಎಕ್ಸ್ ಮುಂಭಾಗದಲ್ಲಿ 149 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಎಸ್‌ಎಕ್ಸ್‌ಎಲ್ ಮತ್ತು ವಿಎಕ್ಸ್‌ಎಲ್ ರೂಪಾಂತರಗಳು ಮುಂಭಾಗದಲ್ಲಿ 200 ಎಂಎಂ ವೆಂಟಿಲೆಟಡ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್‌ಗಳನ್ನು ಹೊಂದಿವೆ.

ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಕರೋನಾ ಭೀತಿಯ ನಡುವೆ ವೆಸ್ಪಾ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಲಾಗಿದೆ. ಹೊಸ ವೆಸ್ಪಾ ಸ್ಕೂಟರ್‌ಗಳು ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.


Click it and Unblock the Notifications








