ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‌ಟಿಆರ್ ಬೈಕುಗಳು
ಅಮೆರಿಕ ಮೂಲದ ಜನಪ್ರಿಯ ಐಷಾರಾಮಿ ಬೈಕ್ ನಿರ್ಮಾಣ ಕಂಪನಿಯಾದ ಇಂಡಿಯನ್ ಮೋಟಾರ್‌ಸೈಕಲ್ ತನ್ನ ಎಫ್‌ಟಿಆರ್ ಕಾರ್ಬನ್ ಬೈಕನ್ನು ಕೆಲವು ದಿನಗಳ ಹಿಂದೆ ಜಾಗತಿಕವಾಗಿ ಅನಾವರಣಗೊಳಿಸಿದರು. ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಯು ಹೊಸ ಎಫ್‌ಟಿಆರ್ ಕಾರ್ಬನ್ ಮತ್ತು ಎಫ್‌ಟಿಆರ್ ರ‍್ಯಾಲಿ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಇಂಡಿಯನ್ ಕಾರ್ಬನ್ ಬೈಕ್ ಫೈಬರ್ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಎಫ್‌ಟಿಆರ್ ಕಾರ್ಬನ್ ಮಾದರಿಯೊಂದಿಗೆ ಎಫ್‌ಟಿಆರ್ ರ‍್ಯಾಲಿ ಮಾದರಿಯ ಹೆಸರನ್ನು ಇತ್ತೀಚೆಗೆ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ. ಈ ಎರಡು ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಇಂಡಿಯನ್ ಕಾರ್ಬನ್ ಬೈಕಿನಲ್ಲಿ ಫ್ರಂಟ್ ಫೆಂಡರ್, ಹೆಡ್‌ಲ್ಯಾಂಪ್ ನೇಸೆಲ್, ಫ್ಯೂಯಲ್ ಟ್ಯಾಂಕ್, ಏರ್‌ಬಾಕ್ಸ್ ಕವರ್, ಪ್ಯಾಸೆಂಜರ್ ಸೀಟ್ ಕೌಲ್ ಎಲ್ಲವೂ ಕಾರ್ಬನ್ ಫೈಬರ್ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಹೊಸ ಶಾಟ್‌ಗನ್ ಶೈಲಿಯ ಟೈಟಾನಿಯಂ ಅಕ್ರಪೋವಿಕ್ ಕವರ್ ಮತ್ತು ಇಂಧನ ಟ್ಯಾಂಕ್‌ನಲ್ಲಿ 'ಎಫ್‌ಟಿಆರ್ ಕಾರ್ಬನ್' ಬ್ರಾಂಡ್ ಪ್ಲೇಟ್ ಅನ್ನು ಸಹ ಒಳಗೊಂಡಿದೆ.
MOST READ: ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍ಗಳೆಷ್ಟು ಗೊತ್ತಾ?

ಇಂಡಿಯನ್ ಕಾರ್ಬನ್ ಬೈಕ್ 1203 ಸಿಸಿ, ವಿ-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 120 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇಂಡಿಯನ್ ಎಫ್‌ಟಿಆರ್ ರ‍್ಯಾಲಿ ಫ್ಲಾಟ್-ಟ್ರ್ಯಾಕ್ ಬೈಕ್ ಗಿಂತ ಸ್ಕ್ರಾಂಬ್ಲರ್ ಮಾದರಿಯಂತೆ ಕಾಣುತ್ತದೆ. ಈ ಬೈಕಿನಲ್ಲಿ 50 ಎಂಎಂ ಎತ್ತರದ ಪ್ರೊಟೇಪರ್ ಹ್ಯಾಂಡಲ್‌ಬಾರ್, ನಾಬಿ ಪೈರೆಲ್ಲಿ ಸ್ಕಾರ್ಪಿಯಾನ್ ರ್ಯಾಲಿ ಎಸ್‌ಟಿಆರ್ ಟಯರ್ ಗಳಲ್ಲಿ ಅಲಾಯ್ ವ್ಹೀಲ್ ಅಳವಡಿಸಲಾಗಿದೆ.
MOST READ: ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಇಂಡಿಯನ್ ಎಫ್‌ಟಿಆರ್ ರ‍್ಯಾಲಿ ಬೈಕಿನಲ್ಲಿ ಅದೇ ಮಾದರಿಯ 1203 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಪವರ್ ಮತ್ತು ಟಾರ್ಕ್ ಅಂಶಗಳು ಕೂಡ ಒಂದೇ ರೀತಿಯಾಗಿದೆ.ಇಂಡಿಯನ್ ಮೋಟಾರ್‌ಸೈಕಲ್ ತನ್ನ ಎಫ್‌ಟಿಆರ್ ಬೈಕುಗಳನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಲಿಲ್ಲ.

ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಲಾಕ್ ಡೌನ್ ಅವಧಿಯು ಮುಗಿದ ಬಳಿಕ ಈ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಬಹುದು. ಇಂಡಿಯನ್ ಎಫ್‌ಟಿಆರ್ ಕಾರ್ಬನ್ ಮತ್ತು ಎಫ್‌ಟಿಆರ್ ರ‍್ಯಾಲಿ ಬೈಕುಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
MOST READ: 25 ಸಾವಿರ ಗಡಿ ದಾಟಿದ ಯಮಹಾ ಎಂಟಿ-15 ಬೈಕಿನ ಮಾರಾಟ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.99 ಲಕ್ಷಗಳಾಗಿದೆ. ಇನ್ನು ಎಫ್‌ಟಿಆರ್ 1200 ರೇಸ್ ರೆಪ್ಲಿಕಾ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.99 ಲಕ್ಷಗಳಾಗಿದೆ.

ಇಂಡಿಯನ್ ಎಫ್‌ಟಿಆರ್ 1200 ಸರಣಿಯ ಬೈಕುಗಳಿಗೆ ಎಫ್‌ಟಿಆರ್ 750 ಸ್ಕೌಟ್ ಫ್ಲಾಟ್-ಟ್ರ್ಯಾಕ್ ರೇಸ್ ಬೈಕ್ ಪ್ರೇರಣೆಯಾಗಿದೆ. ಇಂಡಿಯನ್ ಎಫ್‌ಟಿಆರ್ ಕಾರ್ಬನ್ ಮತ್ತು ಎಫ್‌ಟಿಆರ್ ರ‍್ಯಾಲಿ ಬೈಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಗಳಿಲ್ಲ.


Click it and Unblock the Notifications








