ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಕಂಪನಿಯು ಈ ವರ್ಷದ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿತ್ತು. ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ನ ವಿತರಣೆಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ತಡವಾಗಿ ಪ್ರಾರಂಭಿಸಿದ್ದರು.

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ 21 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು.ಇನ್ನು ಫೆಬ್ರವರಿ ತಿಂಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ 100 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ಕರೋನಾ ಭೀತಿಯ ನಡುವೆ 91 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಲಾಗಿದೆ.

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಸ್ಕೂಟರ್ ಅನ್ನುಅರ್ಬೈನ್ ಮತ್ತು ಲೆಕ್ಟಿಕ್ ಪ್ರೀಮಿಯಂ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಅರ್ಬೈನ್ ಸ್ಕೂಟ್‍‍ರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1 ಲಕ್ಷಗಳಾದರೆ, ಚೇತಕ್ ಎಲೆಕ್ಟಿಕ್ ಪ್ರೀಮಿಯಂ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.15 ಲಕ್ಷಗಳಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಚೇತಕ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‍‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳಿವೆ.

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಬಜಾಜ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಮೇಲೆ 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ.

ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ. ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Bajaj Auto Sells Over 90 Units Of Chetak Electric Scooter In March 2020. Read in Kannada.
Story first published: Wednesday, April 29, 2020, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X