ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಅಮೆರಿಕ ಮೂಲದ ಜನಪ್ರಿಯ ಐಷಾರಾಮಿ ಬೈಕ್ ನಿರ್ಮಾಣ ಸಂಸ್ಥೆಯಾದ ಇಂಡಿಯನ್ ಮೋಟಾರ್‌ಸೈಕಲ್ ಭಾರತದಲ್ಲಿ ತನ್ನ ಬಹುನೀರಿಕ್ಷಿತ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲಾಗಿದೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಇಂಡಿಯನ್ ಮೋಟಾರ್‌ಸೈಕಲ್ ಸಂಸ್ಥೆಯು ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ಎಸ್ ರೇಸ್ ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಬೈಕಿನ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.99 ಲಕ್ಷಕ್ಕೆ ಮತ್ತು ರೇಸ್ ಎಡಿಷನ್ ಮಾದರಿಯ ಬೆಲೆಯನ್ನು ರೂ. 15.49 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಸದ್ಯ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆಗೊಳಿಸಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡಿರುವ ಇಂಡಿಯನ್ ಮೋಟಾರ್‌ಸೈಕಲ್ ಸಂಸ್ಥೆಯು ಇದಕ್ಕಾಗಿ ರೂ. 2 ಲಕ್ಷ ನಿಗದಿ ಮಾಡಿದ್ದು, ಇದೀಗ ಬುಕ್ಕಿಂಗ್ ಮಾಡಿದರೆ ಮುಂಬರುವ 2019ರ ಎಪ್ರಿಲ್‌ನಿಂದ ಹೊಸ ಬೈಕ್ ವಿತರಣೆಯಾಗಲಿವೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಎಫ್‌ಟಿಆರ್ 1200 ಎಸ್ ಬೈಕ್ ಮಾದರಿಗಳು ಈ ಹಿಂದಿನ ಎಫ್‌ಟಿಆರ್ 750 ಪ್ರೇರಣೆ ಹೊಂದಿದ್ದರೂ ಸಹ ತಾಂತ್ರಿಕ ಹೊಸ ಬೈಕ್‌ಗಳು ಬಲಿಷ್ಠವಾಗಿದ್ದು, ಬೈಕ್‌ಗಳ ಆಕರ್ಷಣೆಗಾಗಿ ಎಫ್‌ಟಿಆರ್ 1200 ಎಸ್ ಬೈಕಿನಲ್ಲಿ ಬ್ಲ್ಯಾಕ್ ಫ್ರೇಮ್ ಮತ್ತು ಎಫ್‌ಟಿಆರ್ 1200 ಎಸ್ ರೇಸ್ ಎಡಿಷನ್‌ನಲ್ಲಿ ರೆಡ್ ಫ್ರೇಮ್ ಬಳಕೆ ಮಾಡಲಾಗಿದೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಬೆಲೆಗಳಿಗೆ ಅನುಗುಣವಾಗಿ ಸುಧಾರಿತ ಮಾದರಿಯ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ಎಸ್ ರೇಸ್ ಎಡಿಷನ್ ಬೈಕ್‌ಗಳು 4.3 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟಲ್ ಡಿಸ್‌ ಪ್ಲೇ, ಬಿಲ್ಟ್ ಇನ್ ಬ್ಲೂಟೂಥ್, ಯುಎಸ್‌ಬಿ ಫಾಸ್ಟ್ ಚಾರ್ಜಿಂಗ್ ಫೋರ್ಟ್ ಇದರಲ್ಲಿದೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಇದಲ್ಲದೇ ಬೈಕ್ ಸವಾರಿಗೆ ಅನುಕೂಲಕರವಾಗುವ ಸ್ಟ್ಯಾಂಡಂರ್ಡ್, ಸ್ಪೋರ್ಟ್ ಮತ್ತು ರೈನ್ ಎನ್ನುವ ಮೂರು ರೈಡಿಂಗ್ ಮೊಡ್‌ಗಳು ಇದರಲ್ಲಿದ್ದು, ಟ್ರಾಕ್ಷನ್ ಕಂಟ್ರೋಲ್, ವೀಲ್ಹ್ ಕಂಟ್ರೋಲ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸೌಲಭ್ಯಗಳನ್ನು ಹೊಂದಿದೆ.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಎಂಜಿನ್ ಸಾಮರ್ಥ್ಯ

ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ಎಸ್ ರೇಸ್ ಎಡಿಷನ್ ಬೈಕ್‌ಗಳು 1,203ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿದ್ದು, ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 120-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಇನ್ನು ಹೊಸ ಬೈಕ್‌ಗಳಲ್ಲಿ ಡೌನ್‌ಲಾಪ್ ಡಿಟಿ3-ಆರ್ ರೆಡಿಯಲ್ ಟೈರ್ ಬಳಕೆ ಮಾಡಲಾಗಿದ್ದು, ಮುಂಭಾಗದಲ್ಲಿ 120/70 ಆರ್19 ಮತ್ತು ಹಿಂಭಾಗದಲ್ಲಿ 150/80 18ಆರ್ ಟೈರ್‌ನೊಂದಿಗೆ ವಿವಿಧ ಮಾದರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ 43-ಎಂಎಂ ಇನ್‌ರ್ವಟೆಡ್ ಟೆಲಿಸ್ಕೋಪಿಕ್ ಫೋಕ್ಸ್ ಸೆಟ್‌ಅಪ್ ಪಡೆದಿದೆ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಹಾಗೆಯೇ ಹೊಸ ಬೈಕ್‌ಗಳಲ್ಲಿ ಸುರಕ್ಷೆತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 265ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವಿದೆ. ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವು ಸಹ ಇದ್ದು, ನಿಮಗೆ ಅಗತ್ಯವಿದ್ದಾಗ ಆನ್ ಮತ್ತು ಬೇಡವಾದ್ರೆ ಎಬಿಎಸ್ ಆಫ್ ಮಾಡಬಹುದು.

ಇಂಡಿಯನ್ ಎಫ್‌ಟಿಆರ್ 1200 ಎಸ್ ಬೈಕ್ ಬಿಡುಗಡೆ- ಬೆಲೆ ಕೇವಲ ರೂ. 14.99 ಲಕ್ಷ..!

ಒಟ್ಟಿನಲ್ಲಿ ವಿಶ್ವದರ್ಜೆ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ಎಸ್ ರೇಸ್ ಎಡಿಷನ್ ಬೈಕ್‌ಗಳು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಬಿಎಂಡಬ್ಲ್ಯು ಮತ್ತು ಹಾರ್ಲೆ ಡೇವಿಡ್ಸನ್ ಬೈಕ್‌ಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Indian FTR 1200 Launched In India. Read in Kannada.
Story first published: Tuesday, December 11, 2018, 20:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X