ಎರಡು ಹೊಸ ಮಾದರಿಗಳಲ್ಲಿ ಬರಲಿರುವ ಎಫ್‍ಟಿಆರ್1200
ಇಂಡಿಯನ್ ಮೋಟಾರ್ ಸೈಕಲ್ ಎರಡು ಹೊಸ ಮಾದರಿಗಳನ್ನು ತನ್ನ ಎಫ್‍ಟಿಆರ್ ವೇರಿಯಂಟ್ ನಲ್ಲಿ ಬಿಡುಗಡೆ ಮಾಡಲಿದೆ. ಇಂಡಿಯನ್ ಮೋಟಾರ್‍ಸೈಕಲ್ ಎಫ್‍ಟಿಆರ್1200 ಅನ್ನು ಕಳೆದ ವರ್ಷ ಅನಾವರಣಗೊಳಿಸಲಾಗಿತ್ತು. ಈ ಬೈಕನ್ನು ಡಿಸೆಂಬರ್ 2018ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಇಂಡಿಯನ್ ಮೋಟಾರ್‍ಸೈಕಲ್ ತನ್ನ ಎಫ್‍ಟಿಆರ್1200 ವೇರಿಯಂಟ್ ನ ಎರಡು ಹೊಸ ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು ಹೊಸ ಮಾದರಿಯ ಬೈಕುಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ಇಂಡಿಯನ್ ಎಫ್‍ಟಿಆರ್1200 ಬೈಕಿನ ಅಭಿವೃದ್ಧಿಯು ಇಂಡಿಯನ್ ನಂತಹ ಕಂಪನಿಯ ಬೆಳವಣಿಗೆಗೆ ಸಹಕಾರಿಯಾಗಿರಲಿದೆ.

ಇಂಡಿಯನ್ ಕಂಪನಿಯು ಕ್ರೂಸರ್ ಬೈಕುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಎಫ್‍ಟಿಆರ್1200 ಯಾವುದೇ ಕೋನದಿಂದಲೂ ಕ್ರೂಸರ್ ಗಳಿಗೆ ಸರಿಸಮನಾಗಿಲ್ಲ. ಇಂಡಿಯನ್ ಎಫ್‍ಟಿಆರ್1200 ಬೈಕ್ ಅನ್ನು ಅಮೇರಿಕಾದ ಫ್ಲಾಟ್ ಟ್ರಾಕ್ ಚಾಂಪಿಯನ್‍ಶಿಪ್ ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಇಂಡಿಯನ್ ಎಫ್‍ಟಿಆರ್ 750 ಬೈಕಿನ ಟೆಕ್ನಾಲಜಿ ಬಳಸಿ ಅಭಿವೃದ್ಧಿ ಪಡಿಸಲಾಗಿದೆ.

ಎಫ್‍ಟಿಆರ್1200 ಸ್ಟಾಂಡ್ ಅಲೋನ್ ಮೋಟಾರ್ ಸೈಕಲ್ ಮಾತ್ರವೇ ಆಗಿರದೇ, ಇಂಡಿಯನ್ ಕಂಪನಿಯು ಫ್ಲಾಟ್ ಟ್ರಾಕ್ ಟೆಕ್ನಾಲಜಿಯನ್ನು ಬಳಸಿ ಮತ್ತೆರಡು ಹೊಸ ಮಾದರಿಯ ಬೈಕುಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

ಮೋಟಾರ್ ಬೈಕ್ ರೈಟರ್ ವರದಿಯ ಪ್ರಕಾರ, ಇಂಡಿಯನ್ ಮೋಟಾರ್ ಸೈಕಲ್ ಕಂಪನಿಯು ಮತ್ತೆ ನಾಲ್ಕು ಹೊಸ ಮಾದರಿಯ ಮೋಟಾರ್ ಸೈಕಲ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಂಡಿಯನ್ ಎಫ್‍ಟಿಆರ್1200 ಅನ್ನು ಅಪೋಲೋ ಕೋಡ್ ಹೆಸರಿನಿಂದ ಕರೆಯಲಾಗುತ್ತದೆ. ಈ ಅವೃತ್ತಿಯಲ್ಲಿ ಬರುತ್ತಿರುವ ಮೊದಲ ಮಾದರಿಗೆ ಅಪೋಲೋ ಟ್ರಾಕರ್ (ಎಫ್‍ಟಿಆರ್1200) ಎಂಬ ಕೋಡ್ ಹೆಸರನ್ನು ಇಡಲಾಗಿದೆ. ನಂತರದ ಮಾದರಿಗಳಿಗೆ ಸ್ಟ್ರೀಟ್ ಎಂದು, ಅದರ ನಂತರದ ಮಾದರಿಗೆ ಅಡ್ವೆಂಚರ್ ಎಂದು ಹೆಸರಿಡಲಾಗಿದೆ.

ಎಂವೈ 2019 ಅಪೋಲೋ ಟ್ರಾಕರ್ ಮಾದರಿಯ ಬೈಕ್ ಅನ್ನು ಎಫ್‍ಟಿಆರ್1200ಎಸ್ ಮತ್ತು ಎಫ್‍ಟಿಆರ್1200ಎಸ್ ರೇಸ್ ರೆಪ್ಲಿಕಾ ಎಂಬ ಎರಡು ಮಾದರಿಗಳಲ್ಲಿ 2018ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮುಂದಿನ ಮಾದರಿಯಾದ ಎಂವೈ 2020 ಸ್ಟ್ರೀಟ್ ಮಾದರಿಯನ್ನು ಶೋ ರೂಂಗಳಲ್ಲಿ 2019ರ ಕೊನೆಯ ಭಾಗದಲ್ಲಿ ಕಾಣಬಹುದು.

ಬಹುಷಃ ಸ್ಟ್ರೀಟ್ ಮಾದರಿಯನ್ನು ಎಫ್‍ಟಿಆರ್ 1200 ಸ್ಪೋರ್ಟ್ ಎಂಬ ಹೆಸರಿನಿಂದ ಮಾರಾಟ ಮಾಡಲಾಗುವುದು. ಈ ಮಾದರಿಯ ಬೈಕ್ ಎಫ್‍ಟಿಆರ್1200 ಬೈಕಿನ ಸ್ಪೋರ್ಟ್ ವರ್ಷನ್ ಆಗಿರಲಿದ್ದು, ಗ್ರಿಪ್ ಸ್ಟ್ರೀಟ್ ಟಯರ್ ಗಳನ್ನು ಹೊಂದಿರಲಿದೆ. ಮಾಹಿತಿಯ ಪ್ರಕಾರ, ಇಂಡಿಯನ್ ಎಫ್‍ಟಿಆರ್1200 ಅಡ್ವೆಂಚರ್ ಅನ್ನು ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದ್ದು, ಅದು ಎಂವೈ 2021ರ ಮಾದರಿಯಾಗಿರಲಿದೆ ಮತ್ತು 2020ರಲ್ಲಿ ಬಿಡುಗಡೆಯಾಗಲಿದೆ. ಅದನ್ನು ಎಫ್‍ಟಿಆರ್1200 ರಾಲಿ ಎಂಬ ಹೆಸರಿನಿಂದ ಮಾರಾಟ ಮಾಡಲಾಗುವುದು ಮತ್ತು ಅದು ಆಫ್ ರೋಡ್ ಮಾದರಿಯಾಗಿರುತ್ತದೆ.

ಸ್ಲೈಡ್ ವರದಿಯ ಪ್ರಕಾರ, ಇಂಡಿಯನ್ ಕಂಪನಿಯು ಇಂಡಿಯನ್ ಸ್ಕೌಟ್ ಮಿನಿ ಬಾಲ್ ಮತ್ತು ರಾಫ್ಟರ್ ಎಂಬ ಕೋಡ್ ಹೆಸರನ್ನು ಹೊಂದಿರುವ ಕ್ರೂಸರ್ ಎಂಬ ಎರಡು ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಎಫ್‍ಟಿಆರ್1200 ಇಂಡಿಯನ್ ಕಂಪನಿಯ ಮೊದಲ ಸ್ಟ್ರೀಟ್ ಫೈಟರ್ ಮೋಟಾರ್ ಸೈಕಲ್ ಆಗಿದೆ. 1,203ಸಿಸಿ ವಿ ಟ್ವಿನ್ ಎಂಜಿನ್ ಹೊಂದಿದ್ದು 120 ಬಿಹೆಚ್‍ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡಿನ ಗೇರ್ ಬಾಕ್ಸ್ ಸ್ಲಿಪರ್ ಕ್ಲಚ್ ಮತ್ತು ರೇರ್ ವ್ಹೀಲ್ ಗಳನ್ನು ಹೊಂದಿದೆ.
MUST READ: ಟರ್ಬೋ ಚಾರ್ಜ್ ಎಂಜಿನ್‍ಗಳಿಗಾಗಿ ಪೇಟೆಂಟ್ ಪಡೆದ ಯಮಹಾ

ಸ್ಟಾಂಡರ್ಡ್, ಸ್ಪೋರ್ಟ್ ಮತ್ತು ರೈನ್ ಎಂಬ 3 ರೈಡಿಂಗ್ ಮೋಡ್‍ಗಳಿವೆ. ಇದರಲ್ಲಿರುವ ಇತರ ಫೀಚರ್ ಗಳೆಂದರೆ ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್ ಮತ್ತು ಸಿಕ್ಸ್ ಅಕ್ಸಿಸ್ ನ ಇನ್ನಾರ್ಶಿಯಲ್ ಮೇಷರ್ ಮೆಂಟ್ ಯೂನಿಟ್. ಇಂಡಿಯನ್ ಮೋಟಾರ್ ಸೈಕಲ್ ಕಂಪನಿಯಿಂದ ಹೊರ ಬರುತ್ತಿರುವ ಎರಡು ಹೊಸ ಮಾದರಿಯಲ್ಲೂ ಇದೇ ಎಂಜಿನ್ ಮತ್ತು ರೈಡಿಂಗ್ ಅಂಶಗಳಿವೆ. 4.3 ಇಂಚಿನ ಟಚ್ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಹ ಮುಂಬರುವ ಹೊಸ ಮಾದರಿಗಳಲ್ಲಿ ಇರಲಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎಫ್‍ಟಿಆರ್1200 ಮೋಟಾರ್ ಸೈಕಲ್ ಇಂಡಿಯನ್ ಕಂಪನಿ ಉತ್ಪಾದನೆ ಮಾಡಿರುವ ಕ್ರಾಂತಿಕಾರಕ ಮೋಟಾರ್ ಸೈಕಲ್ ಆಗಿದೆ. ಏಕೆಂದರೆ ಇಂಡಿಯನ್ ಮೋಟಾರ್ ಸೈಕಲ್ ಗಳು ದೊಡ್ಡದಾದ ಮತ್ತು ಕೆಟ್ಟ ಕ್ರೂಸರ್ ಗಳನ್ನು ಹೊಂದಿದ್ದವು. ಕ್ರೂಸರ್ ಗಳ ಮಧ್ಯೆ ಎಫ್‍ಟಿಆರ್1200 ಆಕರ್ಷಕವಾಗಿದ್ದು, ಯುವ ಸಮುದಾಯವನ್ನೆ ಗಮನದಲ್ಲಿಟ್ಟು ತಯಾರಿಸಿರುವ ಮೋಟಾರ್ ಸೈಕಲ್ ಆಗಿದೆ. ಎರಡು ಹೊಸ ಮಾದರಿಯ ಬೈಕುಗಳು ಬರುತ್ತಿದ್ದು, ಯುವ ಗ್ರಾಹಕರನ್ನು ತಮ್ಮತ್ತ ಸೆಳೆಯಲಿವೆ.


Click it and Unblock the Notifications








