Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟರ್ಬೋ ಚಾರ್ಜ್ ಎಂಜಿನ್‍ಗಳಿಗಾಗಿ ಪೇಟೆಂಟ್ ಪಡೆದ ಯಮಹಾ
ಟರ್ಬೋ ಚಾರ್ಜ್ ಯಮಹಾ ಮೋಟಾರ್ ಸೈಕಲ್ ಗಳು ಅತೀ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಟರ್ಬೋ ಮೋಟಾರ್ ಸೈಕಲ್ ನ ಪೇಟೆಂಟ್ ಗಾಗಿ ಸಲ್ಲಿಸಿದ್ದ ಚಿತ್ರಗಳಿಂದ ಯಮಹಾ, ಟರ್ಬೋ ಚಾರ್ಜ್ ಎಂಜಿನ್ ಅಭಿವೃದ್ಧಿಗಾಗಿ ಹೆಚ್ಚು ಸಮಯ ಮತ್ತು ಸಂಪನ್ಮೂಲವನ್ನು ವಿನಿಯೋಗಿಸಿರುವುದು ಕಂಡು ಬರುತ್ತದೆ. ಆದರೆ ಮೋಟರ್ ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಟರ್ಬೋ ಚಾರ್ಜ್ ಮೋಟಾರ್ ಸೈಕಲ್ ವು ಜಗತ್ತಿಗೆ ಹೊಸತೇನಲ್ಲ. ಜಪಾನಿನ ನಾಲ್ಕು ದೊಡ್ಡ ಕಂಪನಿಗಳಾದ ಯಮಹಾ, ಕವಸಾಕಿ, ಹೊಂಡಾ, ಸುಜುಕಿ 1980ರ ದಶಕದಲ್ಲಿಯೇ ಟರ್ಬೋ ಚಾರ್ಜ್ ಮೋಟಾರ್ ಸೈಕಲ್ ಗಳನ್ನು ಉತ್ಪಾದನೆ ಮಾಡಿದ್ದವು. ಆದರೆ ಕಿರಿಕಿರಿಯುಕ್ತವಾಗಿದ್ದ ಮೋಟಾರ್ ಬೈಕ್ ಗಳ ಟರ್ಬೋ ಲಾಗಿನ ಟೆಕ್ನಾಲಜಿಯಿಂದ ಈ ಯೋಜನೆ ಯಶಸ್ವಿಯಾಗಿರಲಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳ ಅಲಭ್ಯತೆಯಿಂದಾಗಿ ಮತ್ತು ಚಿಕ್ಕ ಸಾಮರ್ಥ್ಯದ ಟರ್ಬೋ ಚಾರ್ಜರ್ ಗಳಿಗೆ ಸರಿಯಾಗಿ ಹೊಂದಿ ಕೊಳ್ಳುವ ವಸ್ತುಗಳು ಸಿಗದ ಕಾರಣ ಈ ತಂತ್ರಜ್ಞಾನ ಯಶಸ್ವಿಯಾಗಿರಲಿಲ್ಲ.

ಆದ ಕಾರಣ ಬೈಕ್ ತಯಾರಕರು ನ್ಯಾಚುರಲ್ ತಂತ್ರಜ್ಞಾನದ ಎಂಜಿನ್ ಗಳ ಮೊರೆ ಹೋಗಿ ಅವುಗಳನ್ನು ಅಭಿವೃದ್ಧಿ ಪಡಿಸಿದರು. ಸದ್ಯ ಚಾಲ್ತಿಯಲ್ಲಿರುವ ನ್ಯಾಚುರಲ್ ತಂತ್ರಜ್ಞಾನದ ಲೀಟರ್ ಕ್ಲಾಸಿನ ಮೋಟಾರ್ ಸೈಕಲ್ ಗಳು 180 ಬಿಹೆಚ್‍ಪಿ ಯಿಂದ 215 ಬಿಹೆಚ್‍ಪಿ ವರೆಗೆ ಉತ್ಪಾದಿಸುತ್ತವೆ.

ಇದಕ್ಕಿಂತ ಹೆಚ್ಚು ಉತ್ಪಾದನೆಯನ್ನು ಟರ್ಬೋ ಚಾರ್ಜಿಂಗ್ ಅಥವಾ ಸೂಪರ್ ಚಾಜಿಂಗ್ ಇಲ್ಲದೇ ಉತ್ಪಾದಿಸುವುದು ಅಸಾಧ್ಯದ ಕೆಲಸ, ಅದು ತಯಾರಕರಿಗೂ ಗೊತ್ತು.ಆದ ಕಾರಣ ಪರ್ಫಾಮೆನ್ಸ್ ಮೋಟಾರ್ ಸೈಕಲ್ ತಯಾರಕರೂ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ತಯಾರಕರೂ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ಪಾದನೆಯತ್ತ ಒಲವು ತೋರುತ್ತಿದ್ದಾರೆ.

ಆದರೂ ಹಳೆ ಮಾದರಿಯ ನ್ಯಾಚುರಲ್ ಎಂಜಿನ್ ಮತ್ತು ಗ್ರೀನ್ ಎಲೆಕ್ಟ್ರಿಕ್ ಮೋಟಾರ್ ಎಂಜಿನ್ ಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಈ ಅಂತರವನ್ನು ತಗ್ಗಿಸುವ ಹಾಗೂ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಂಜಿನ್‍ಗಳಿಂದ ಹೆಚ್ಚು ಪರ್ಫಾಮೆನ್ಸ್ ಪಡೆಯುವ ಹೊಣೆಗಾರಿಕೆ ತಯಾರಕರ ಮೇಲಿದೆ. ಎಂಜಿನ್ ಗಳ ಸಾಮರ್ಥ್ಯವನ್ನು ತಗ್ಗಿಸಿದರೆ ಅದು ಹೆಚ್ಚು ಕಾರ್ಯದಕ್ಷತೆ ಹೊಂದಿ ಪರಿಸರ ಸ್ನೇಹಿಯಾಗುತ್ತದೆ. ಕಾರ್ಯದಕ್ಷತೆ ಹೆಚ್ಚಬೇಕಾದರೆ ಎಂಜಿನ್ಅನ್ನು ಟರ್ಬೊ ಚಾರ್ಜ್ ಅಥವಾ ಸೂಪರ್ ಚಾರ್ಜ್ ಮಾಡಬೇಕಾಗುತ್ತದೆ.

ಸದ್ಯಕ್ಕೆ ಕವಸಾಕಿ ಸೂಪರ್ ಚಾರ್ಜ್ ಮೋಟಾರ್ ಸೈಕಲ್ ಗಳನ್ನು ಉತ್ಪಾದಿಸುತ್ತಿದೆ. 1.0 ಲೀಟರಿನ ಸೂಪರ್ ಚಾರ್ಜ್ ಎಂಜಿನ್ ಹೊಂದಿರುವ ಕವಸಾಕಿ ನಿಂಜಾ ಹೆಚ್ 2, ಹೆಚ್2 ಆರ್, ಹೆಚ್ 2 ಎಸ್ಎಕ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ದಕ್ಷತೆಯನ್ನು ಹೊಂದಿವೆ.

ಹೋಂಡಾ ಕಂಪನಿಯು ಟರ್ಬೊ ಚಾರ್ಜ್ ಎಂಜಿನ್ ಗಳನ್ನು ಪಡೆಯಲು ಹಲವಾರು ಪೇಟೆಂಟ್ ಗಳನ್ನು ಸಲ್ಲಿಸಿದೆ. ಸುಜುಕಿ ಸಹ ಟರ್ಬೋ ಚಾರ್ಜಿನ ಪ್ಯಾರಲೆಲ್ ಟ್ವಿನ್ ಮತ್ತು ಇನ್‍ಲೈನ್ 4 ಎಂಜಿನ್ ಅಭಿವೃದ್ಧಿ ಪಡಿಸುತ್ತಿದೆ. ಈಗ ಯಮಹಾ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿರುವ ಚಿತ್ರಗಳು ದೊರಕಿವೆ.

ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಉತ್ಪಾದನೆಯಾಗಿಯೇ ಬಿಡುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಈ ಪೇಟೆಂಟ್ ಚಿತ್ರಗಳನ್ನು ನೋಡಿದರೆ ಯಮಹಾ ಟರ್ಬೊಚಾರ್ಜಿಂಗ್ ಅನ್ನು ಬೇರೆ ಯೋಜನೆಗಳ ತರಹ ನೋಡದೇ, ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿ ಪಡಿಸಲು ಚಿಂತಿಸುತ್ತಿರುವುದರ ಬಗ್ಗೆ ಕಾಣಬಹುದು.

ಯಮಹಾ ಎರಡು ಪೇಟೆಂಟ್ ಗಳನ್ನು 2 ವಿಭಿನ್ನ ಟರ್ಬೋ ಚಾರ್ಜ್ ಪ್ಯಾರಲೆಲ್ ಟ್ವಿನ್ ಎಂಜಿನ್ ಡಿಸೈನ್ ಗಳಿಗಾಗಿ ಸಲ್ಲಿಸಿದೆ. ಮೊದಲನೆಯದು ಸಾಂಪ್ರಾದಾಯಿಕ ರೀತಿಯ ಟರ್ಬೊ ಚಾರ್ಜಿಂಗ್ ಮೋಟಾರ್ ಸೈಕಲ್ ಗಳಿಗಾಗಿ, ಇದರಲ್ಲಿ ಟರ್ಬೋಚಾರ್ಜರ್ ಅನ್ನು ಎಂಜಿನ್ ಹೆಡ್ ನ ಕೆಳಭಾಗದಲ್ಲಿ ಅಳವಡಿಸಲಾಗಿದೆ.
MUST READ: ಎಲೆಕ್ಟ್ರಿಕ್ ಬೈಕ್‍ಗಳಿಗೆ ಪೇಟೆಂಟ್ ಪಡೆದ ಕವಾಸಕಿ

2 ಸಿಲಿಂಡರ್ ಗಳ ಎಕ್ಸಾಸ್ಟ್ ಹೆಡರ್ ಗಳು ಎಕ್ಸಾಸ್ಟ್ ಮ್ಯಾನಿ ಫೋಲ್ದ್ ಸೈಡಿನಿಂದ ಹೊರ ಬಂದು ಒಂದೇ ಪೈಪಿನ ಒಳಗೆ ಮರ್ಜ್ ಆಗಿ ನಂತರ ಟರ್ಬೋ ಚಾರ್ಜರ್ ನ ಒಳಗೆ ಹೋಗುತ್ತವೆ. ನಂತರ ಟರ್ಬೋನಲ್ಲಿರುವ ಕಂಪ್ರೆಸ್ದ್ ಏರ್ ಇಂಟರ್ ಕೂಲರ್ ನ ಮುಖಾಂತರ ಇನ್ ಟೇಕ್ ಮ್ಯಾನಿಫೋಲ್ಡ್ ಗೆ ಕಳುಹಿಸಲಾಗುತ್ತದೆ. ಎರಡನೇ ಡಿಸೈನ್ ಅಸಂಪ್ರಾದಾಯಿಕ ಮತ್ತು ವಿಭಿನ್ನವಾಗಿದೆ.

ಎರಡನೇ ಪೇಟೆಂಟ್ ಡಿಸೈನ್ ನಲ್ಲಿ ಟರ್ಬೋ ಚಾರ್ಜರ್ ಇನ್ವರ್ಟ್ ಆಗಿದ್ದು, ಎಂಜಿನ್ ಹೆಡ್ ನ ಬಲಭಾಗದಲ್ಲಿ ಇಡಲಾಗಿದೆ. ಈ ರೀತಿಯಾಗಿ ಅದು ಹೆಚ್ಚು ಜಾಗವನ್ನು ಬಳಸದೇ ಇಂಟರ್ ಕೂಲರ್ ಮತ್ತು ಕ್ಯಾಟಲಿಕ್ಟ್ ಕನ್ವರ್ಟರ್ ಗಳನ್ನು ಟರ್ಬೋದ ಕೆಳಗೆ ಇಡುತ್ತದೆ. ಈ ಕಾನ್ಫಿಗರೇಷನ್ ಎಕ್ಸಾಸ್ಟ್ ಇರುವ ಮೋಟಾರ್ ಸೈಕಲ್ ಗಳಿಗೆ ಹೇಳಿ ಮಾಡಿಸಿದ್ದು, ಚಳಿಗಾಲದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ, ಕ್ಯಾಟಲಿಕ್ ಕನ್ವರ್ಟರ್ ಮೊದಲಿಗಿಂತ ಬೇಗ ಆವಿಯಾಗುತ್ತದೆ ಮತ್ತು ಕಾಂಪ್ಯಾಕ್ಟ್ ಡಿಸೈನ್ ನ ಜೊತೆಯಲ್ಲಿರುತ್ತದೆ.

ಎಂಜಿನ್ ನ ಬಗ್ಗೆ ಹೇಳುವುದಾದರೆ, ಯಮಹಾ ಸಂಸ್ಥೆಯು ಎಂಜಿನ್ ವಿಶೇಷಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ಎಂಜಿನ್ ಡಿಸೈನ್ ಬಗ್ಗೆ ಹೇಳುವುದಾದರೆ, ಈ ಎಂಜಿನ್ 847ಸಿಸಿ ಗಿಂತ ಕಡಿಮೆಯಿದ್ದು, ಯಮಹಾ ಎಂಟಿ 09 ನಂತೆ 3 ಸಿಲಿಂಡರ್ ಹೊಂದಿದೆ. ಎಂಜಿನ್ ಸಿಲಿಂಡರ್ ಇಲ್ಲದೇ ಇರುವಂತೆ ಕಂಡು ಬರುವುದರಿಂದ ಒಟ್ಟಾರೆಯಾಗಿ 565ಸಿಸಿ ಯ ಅಸುಪಾಸಿನಲ್ಲಿದೆ.

ಟರ್ಬೋ ಚಾರ್ಜ್ ಆದ ಕಾರಣ ಇದು ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಪವರ್ ಅನ್ನು ಕಳೆದುಕೊಳ್ಳುವುದಿಲ್ಲ. ಯಮಹಾದ ಟರ್ಬೋ ಚಾರ್ಜ್ ಪ್ಯಾರಲೆಲ್ ಟ್ವಿನ್ ಎಂಜಿನ್ ಅನ್ನು, ಯಮಹಾದ ಮುಂದಿನ ತಲೆಮಾರಿನ ಯಮಹಾ ಎಂಟಿ09ದಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಇದರ ಉತ್ಪಾದನೆ ಈಗ ಕೇವಲ ಊಹಾಪೋಹಾವಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಆಟೋಮೋಬೈಲ್ ಲೋಕವು ಎಲೆಕ್ಟ್ರಿಕ್ ನತ್ತ ಹೆಜ್ಜೆ ಇಡುತ್ತಿರುವುದರಲ್ಲಿ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಸೂಪರ್ ಬೈಕ್ ಗಳು ಎಲೆಕ್ಟ್ರಿಕ್ ಮಯವಾಗುತ್ತವೆ. ಮೋಟಾರ್ ಸೈಕಲಿಸ್ಟ್ ಗಳಿಗಾಗಿ ಎಲೆಕ್ಟ್ರಿಕ್ ಸೂಪರ್ ಬೈಕ್ ಗಳಿಗಿಂತ ಮುಂಚಿತವಾಗಿ ಬೇರೆ ಬೈಕುಗಳೂ ಸಹ ಬರುತ್ತವೆ. ನಾವು ಟರ್ಬೋ ಚಾರ್ಜ್ ಯುಗವನ್ನು ಎದುರು ನೋಡುತ್ತಿದ್ದು, ಈ ಬಾರಿ ಅಡ್ವಾನ್ಸ್ ಟೆಕ್ನಾಲಜಿ ಇರುವ ಕಾರಣ ಮತ್ತು ಕಾಂಪ್ಯಕ್ಟ್ ಟರ್ಬೋ ಇರುವ ಕಾರಣ ಯಶಸ್ವಿಯಾಗುವ ನಿರೀಕ್ಷೆಯಿದೆ.