ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‍ದಿಂದ ಆಟೋಮೊಬೈಲ್ ಕ್ಷೇತ್ರಕ್ಕೂ ಪಾರಿಣಾಮಬೀರಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಕರೋನಾ ವೈರಸ್ ಪಾರಿಣಾಮದಿಂದ ಸಾವಿರಾರು ಕೋಟಿ ನಷ್ಟವಾಗಿದೆ.

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಬೈಕುಗಳ ಮಾರಾಟದ ಮೇಲೆಯು ಕರೋನಾ ವೈರಸ್ ಪಾರಿಣಾಮ ಬೀರಿದೆ. ಜನಪ್ರಿಯ ಬೈಕು ಉತ್ಪಾದನಾ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಮಾರಾಟದ ಮೇಲೆಯು ಕರಿನೆರಳು ಬೀರಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ರಾಯಲ್ ಎನ್‍ಫೀಲ್ಡ್ 91 ಯುನಿಟ್ ಗಳು ಮಾರಾಟವಾಗಿವೆ. ಮಾರಾಟದ ಮೇಲೆ ಪಾರಿಣಾಮ ಬೀರಲು ಕಾರಣ ಅಂದರೆ ಕರೋನಾ ಭೀತಿಯಿಂದ ದೇಶಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿತ್ತು.

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿ ಇದ್ದ ಕಾರಣ ರಾಯಲ್ ಎನ್‍ಫೀಲ್ಡ್ ಕಂಪನಿಯ ಉತ್ಪಾದನೆ, ಮಾರಾಟ ಮತ್ತು ಸರ್ವಿಸ್ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕಂಪನಿಯ ತಿರುವೊಟ್ಟಿಯೂರ್, ಒರಗಡಮ್ ಮತ್ತು ಚೆನ್ನೈನ ವಲ್ಲಂ ವಡಗಲ್ ಸ್ಥಾವರಗಳು, ಮತ್ತು ಇತರ ಡೀಲರ್‍ ಶಿಪ್ ಗಳು ಕೂಡ ತಿಂಗಳಿನಾದ್ಯಂತ ಸ್ಥಗಿತಗೊಳಿಸಲಾಗಿದೆ.

MOST READ: ಲಾಕ್‌ಡೌನ್ ನಡುವೆಯೂ ಭರ್ಜರಿ ಮಾರಾಟ ಕಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‍ಫೀಲ್ಡ್ ಕಂಪನಿಯು ಪ್ರಸ್ತುತ ಪರಿಸ್ಥಿತಿ ಮತ್ತು ಮುಂದಿನ ಬೆಳವಣಿಗೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಸರಣಿಯ ಬೈಕುಗಳ ರಫ್ತು ಮಾಡುವುದರಲ್ಲಿ ಶೇ.33 ಬೆಳವಣಿಗೆಯನ್ನು ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ರಾಯಲ್ ಎನ್‍ಫೀಲ್ಡ್ ಬೈಕಿನ 2,397 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ರಾಯಲ್ ಎನ್‍ಫೀಲ್ಡ್ ಬೈಕಿನ 3,184 ಯುನಿಟ್‌ಗಳನ್ನು ರಫ್ತು ಮಾಡಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಟ್ವಿನ್ ಬೈಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳು ಮಾರಾಟವಾಗಿವೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಟ್ವಿನ್ ಬೈಕುಗಳ ಒಟ್ಟು 20,188 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಹೊಸ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿದೆ.

MOST READ: 25 ಸಾವಿರ ಗಡಿ ದಾಟಿದ ಯಮಹಾ ಎಂಟಿ-15 ಬೈಕಿನ ಮಾರಾಟ

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕಿನಲ್ಲಿ ವೃತ್ತಕಾರದ ಹೆಡ್ ಲ್ಯಾಂಪ್, ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಟ್ ಅನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಥಂಡರ್‍‍ಬರ್ಡ್ ಎಕ್ಸ್ 350 ಬೈಕಿನ ಬದಲಾಗಿ ಹೊಸ ಮೆಟಿಯೋರ್ 350 ಬೈಕನ್ನು ಬಿಡುಗಡೆಗೊಳಿಸುತ್ತಿದೆ.

ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಕರೋನಾದಿಂದಾಗಿ ಜನಪ್ರಿಯ ಬೈಕು ಉತ್ಪಾದನಾ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಮಾರಾಟದ ಮೇಲೆಯು ಪರಿಣಾಮ ಬೀರಿದೆ. ಆದರೆ ಈ ತಿಂಗಳಲ್ಲಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿರುವುದರಿಂದ ನಿಧಾನವಾಗಿ ಬೈಕು ಮಾರಾಟದಲ್ಲಿ ಚೇತರಿಕೆ ಕಾಣಬಹುದು.

Most Read Articles

Kannada
English summary
Royal Enfield Registers 91 Units In Sales During April 2020. Read in Kannada.
Story first published: Monday, May 4, 2020, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X