ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಬಹುನಿರೀಕ್ಷಿತ ಹೊಸ ಏರಾಕ್ಸ್ 155 ಸ್ಕೂಟರ್ ಅನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಕೂಟರಿಗೆ ಎಂಜಿನ್ ಅನ್ನು ಭಾರತದಲ್ಲಿ ಮಾರಾಟವಾಗುವ ಯಮಹ ವೈಝಡ್ಎಫ್ ಆರ್ 15 ವಿ3 ಮಾದರಿಯಿಂದ ಎರವಲು ಪಡೆದುಕೊಂಡಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಇದರಿಂದ ಆಗಿ ಹೊಸ ಸ್ಕೂಟರ್ ಹೆಚ್ಚು ಪವರ್ ಫುಲ್ ಆಗಿರುತ್ತದೆ. ಯಮಹಾ ಏರಾಕ್ಸ್ 155 ಸ್ಕೂಟರ್ ವಿನ್ಯಾಸ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಏರಾಕ್ಸ್ 155 ಸ್ಕೂಟರ್ ಡಿಆರ್ಎಲ್ ಗಳೊಂದಿಗೆ ನಯವಾಗಿ ಕಾಣುವ ಡ್ಯುಯಲ್-ಪಾಡ್ ಎಲ್ಇಡಿ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದು ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ ಸಣ್ಣ ವಿಸರ್ ಅನ್ನು ಹೊಂದಿದೆ. ಇದು ರೇಡ್ ಝಡ್ಆರ್ 125 ಅನ್ನು ಹೋಲುತ್ತದೆ.

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಸ್ಕೂಟರ್ ಸೀಟ್ ಪ್ಯಾನೆಲ್ ಅಡಿಯಲ್ಲಿ ಎಕ್ಸ್ ಆಕಾರದ, ಉದ್ದ ಮತ್ತು ಕೋನೀಯ ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ. ಏರೋಕ್ಸ್‌ನ ಸ್ಪೋರ್ಟಿ ವಿನ್ಯಾಸದೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಎಲ್ಸಿಡಿ ಡಿಸ್ ಪ್ಲೇಯನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಸ್ಕೂಟರ್ ನಲ್ಲಿ ರಿಮೋಟ್ ಲಾಕಿಂಗ್ ಸಿಸ್ಟಮ್, ಕೀಲೆಸ್ ಇಗ್ನಿಷನ್, ಹಜಾರ್ಡ್ ಲೈಟ್ ಸ್ವಿಚ್ ಮತ್ತು ಎಂಜಿನ್ ಕಿಲ್ ಸ್ವಿಚ್ ಅನ್ನು ಹೊಂದಿದೆ. ಇನ್ನು ಈ ಯಮಹಾ ಏರಾಕ್ಸ್ 155 ಸ್ಕೂಟರ್ ಸ್ಟೋರೇಜ್ ಸ್ಪೇಸ್ ವಿಶಾಲವಾದ 25 ಲೀಟರ್ ನಷ್ಟು ದೊಡ್ಡದಾಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ 4.6-ಲೀಟರ್ ನಿಂದ 5.5 ಲೀಟರ್ ವರೆಗೆ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸ್ಕೂಟರ್ ವಿಭಿನ್ನವಾದ ಗ್ರಾಫಿಕ್ಸ್ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಈ ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 155 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.ಆರ್ 15 ನಂತೆ ಈ ಸ್ಕೂಟರ್ ಎಂಜಿನ್ ವೇರಿಯಬಲ್ ವಾಲ್ವ್ ಆಕ್ಟಿವೇಷನ್ (ವಿವಿಎ) ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಎಂಜಿನ್ 8,000 ಆರ್‌ಪಿಎಂನಲ್ಲಿ 15.15 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 13.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಪವರ್ ಉತ್ಪಾದನೆಯು ಹೆಚ್ಚಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಯಮಹಾ ಕಂಪನಿಯು ತನ್ನ ಬಹುನಿರೀಕ್ಷಿತ ಬಿಡಬ್ಲ್ಯೂಎಸ್ 125 ಅನ್ನು ವಿಯೆಟ್ನಾಂನಲ್ಲಿ ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಈ ಹೊಸ ಯಮಹಾ ಬಿಡಬ್ಲ್ಯೂಎಸ್ 125 ಸ್ಕೂಟರ್ ಆಡ್ವೆಂಚರ್ ಮಾದರಿಯಾಗಿದೆ. ಇದು 125 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್

ಯಮಹಾ ಏರಾಕ್ಸ್ 155 ಸ್ಕೂಟರ್ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ. ಆದರೆ ಈ ಯಮಹಾ ಏರಾಕ್ಸ್ 155 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

Most Read Articles

Kannada
Read more on ಯಮಹಾ yamaha
English summary
Yamaha R15-based New Aerox 155 Scooter Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X