ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಎಂಟಿ-09 ಮಿಡಲ್ ವೇಟ್ ಸ್ಟ್ರೀಟ್‌ಫೈಟರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಈ 2021ರ ಯಮಹಾ ಎಂಟಿ-09 ಬೈಕಿನ ಟೀಸರ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಟೀಸರ್ ವೀಡಿಯೋದಲ್ಲಿ ಹೊಸ ಯಮಹಾ ಎಂಟಿ-09 ಬೈಕಿನ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ. ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬುದನ್ನು ಮಾತ್ರ ತಿಳಿಸಲಾಗಿದೆ. ಈ ಹೊಸ ಯಮಹಾ ಎಂಟಿ-09 ಬೈಕ್ ಪರ್ಫಾಮೆನ್ಸ್ ಮತ್ತು ದೊಡ್ಡ ಕಾಸ್ಮೆಟಿಕ್ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ. ಟೀಸರ್ ವೀಡಿಯೋದಲ್ಲಿ ಹೊಸ ಯಮಹಾ ಎಂಟಿ-09 ಬೈಕ್ ಹೊಚ್ಚ ಹೊಸ ಆಲ್-ಎಲ್ಇಡಿ ಸೆಟಪ್ ಪಡೆಯುತ್ತದೆ ಎಂಬುದು ಸ್ಪಷ್ಟವಾಗಿದೆ.

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಇನ್ನು ಈ ಹೊಸ ಎಂಟಿ-09 ಮಿಡಲ್ ವೇಟ್ ಸ್ಟ್ರೀಟ್‌ಫೈಟರ್ ಬೈಕ್ ಹೊಸ ಬಣ್ಣಗಳ ಆಯ್ಕೆಯನ್ನು ಕೂಡ ಪಡೆಯಬಹುದು. ಇನ್ನು ಈ ಬೈಕಿನ ಚಾಸಿಸ್ ಮತ್ತು ಸ್ವಿಂಗಾರ್ಮ್ ಸಹ ಹೊಚ್ಚ ಹೊಸದಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಹೊಸ ಯಮಹಾ ಎಂಟಿ-09 ಬೈಕಿನಲ್ಲಿ ಟೈಲ್ ಸೆಕ್ಷನ್, ವ್ಹೀಲ್ ಗಳು ಮತ್ತು ಫ್ಯೂಲ್ ಟ್ಯಾಂಕ್ ವಿನ್ಯಾಸವೂ ಹೊಸದಾಗಿ ಕಾಣುತ್ತದೆ. ಇದೇ ರೀತಿ ಈ ಹೊಸ ಯಮಹಾ ಎಂಟಿ-09 ಬೈಕಿನಲ್ಲಿ ಹಲವಾರು ನವೀಕರಣಗಳನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಇನ್ನು ಬೈಕಿನ ಹೃದಯ ಭಾಗ ಎಂದೇ ಕರೆಯಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಯಮಹಾ ಎಂಟಿ-09 ಬೈಕಿನಲ್ಲಿ 890ಸಿಸಿ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಹಿಂದಿನ ಮಾದರಿ 114 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ನವೀಕರಿಸಿದ ಈ ಎಂಜಿನ್ 118 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ಅನ್ನು ಕಂಪನಿಯು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಇನ್ನು ಈ ಎಂಜಿನ್ ಎಷ್ಟು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಗೇರ್ ಬಾಕ್ಸ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಶೀಘ್ರದಲ್ಲೇ ಈ ಹೊಸ ಯಮಹಾ ಎಂಟಿ-09 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಇನ್ನು ಯಮಹಾ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಎಂಟಿ-25 ಬೈಕನ್ನು ಮಲೇಷಿಯಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಎಂಟಿ-25 ಯಮಹಾ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಇದು ಒಂದಾಗಿದೆ. ಯಮಹಾ ಕಂಪನಿಯು ಈ ಎಂಟಿ-25 ಬೈಕನ್ನು ಮುಂದಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಯಮಹಾ ಎಂಟಿ-09 ಬೈಕ್ ಟೀಸರ್ ವೀಡಿಯೋ ಬಿಡುಗಡೆ

ಹೊಸ ಯಮಹಾ ಎಂಟಿ-09 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಯಮಹಾ ಎಂಟಿ-09 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ನಂತಹ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಯಮಹಾ ಎಂಟಿ-09 ಬೈಕ್ ಮುಂದಿನ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಯಮಹಾ yamaha
English summary
New Yamaha MT-09 teased. Read In Kannada.
Story first published: Friday, October 23, 2020, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X