ಯಮಹಾ ವೈಝಡ್ಎಫ್ ಆರ್6 ಬೈಕಿನ 20ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ
ಯಮಹಾ ಆಸ್ಟ್ರಿಯಾ ರೇಸಿಂಗ್ ಟೀಂ ವೈಝಡ್ಎಫ್ ಆರ್6 ಬೈಕಿನ 20ನೇ ಆನಿವರ್ಸರಿ ಪ್ರಯುಕ್ತ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ವೈಝಡ್ಎಫ್ ಆರ್6 ಬೈಕ್ 20 ವರ್ಷಗಳ ಪೂರ್ಣಗೊಂಡ ನೆನಪಿಗಾಗಿ ಕಳೆದ ವರ್ಷ ಜಪಾನ್‌ನಲ್ಲಿ ಈ ಸ್ಪೆಷಲ್ ಎಡಿಷನ್ ಅನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದರು.

ಆಸ್ಟೀಯಾದಲ್ಲಿ ಬಿಡುಗಡೆಗೊಳಿಸಿದ ಸ್ಪೆಷಲ್ ಎಡಿಷನ್ ಮಾದರಿಯ ಬೆಲೆಯು ಸರಿ ಸುಮಾರು ರೂ.16.91 ಲಕ್ಷಗಳಾಗಿದೆ. ಇದು ಸ್ಟ್ಯಾಂಡರ್ಡ್ ಮಾದರಿಯ ಮೇಲೆ ಬೃಹತ್ ಪ್ರೀಮಿಯಂ ಮಾದರಿ ಕೂಡ ಆಗಿದೆ. ಮೊದಲ ತಲೆಮಾರಿನ ಯಮಹಾ ವೈಝಡ್ಎಫ್ ಆರ್6 ಬೈಕನ್ನು 1999ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ನಂತರ ಅದೇ ಸರಣಿಯ ವೈಝಡ್ಎಫ್ ಆರ್1 ಮಾದರಿಯನ್ನು ಬಿಡುಗಡೆಗೊಳಿಸಿದ್ದರು.

ಹೋಂಡಾ ಸಿಬಿಆರ್ 600 ಎಫ್ ಗಿಂತ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿತ್ತು, ಇದರಿಂದ ಈ ಬೈಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿತ್ತು. ಆ ಸಮಯದಲ್ಲಿ ವೈಝಡ್ಎಫ್ ಆರ್6 ಬೈಕ್ ಮಿಡ್ ಸೈಜ್ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಪಾರುಪತ್ಯವನ್ನು ಸಾಧಿಸಿತ್ತು.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕುಗಳು

20 ವರ್ಷಗಳಾದರೂ ಈ ಪವರ್ ಫುಲ್ ಬೈಕಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದೇ ಜನಪ್ರಿಯತೆಯನ್ನು ಹೊಂದಿದೆ. ಈ ಬೈಕ್ 169 ಕೆಜಿ ತೂಕವಿತ್ತು. ವೈಝಡ್ಎಫ್ ಆರ್6 ಬೈಕ್ 13,000 ಆರ್‌ಪಿಎಂನಲ್ಲಿ 120 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತಿತ್ತು. ಇದು ತನ್ನ ವಿಭಾದಲ್ಲಿ ಅತಿ ಹೆಚ್ಚು ಪವರ್ ಅನ್ನು ಉತ್ಪಾದಿಸುತಿತ್ತು.

ಇದೀಗ ಬಿಡುಗಡೆಗೊಳಿಸಿದ ಆನಿವರ್ಸರಿ ಸ್ಪೆಷಲ್ ಎಡಿಷನ್ ಕೆಂಪು ಮತ್ತು ಬಿಳಿ ಬಣ್ಣವನ್ನು ಹೊಂದಿದೆ. ಈ ಆನಿವರ್ಸರಿ ಸ್ಪೆಷಲ್ ಎಡಿಷನ್ ಅನ್ನು ವಿಶೇಷವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಇನ್ನು ಕೆಲವು ಇತರ ಅಂಶಗಳು ಸಮಾನ್ಯ ಯಮಹಾ ವೈಝಡ್ಎಫ್ ಆರ್6 ಬೈಕಿಗೆ ಹೋಲುತ್ತದೆ. ಹೊಸ ವೈಝಡ್ಎಫ್ ಆರ್6 ಬೈಕಿನಲ್ಲಿ 599 ಸಿಸಿ, ಲಿಕ್ವಿಡ್-ಕೂಲ್ಡ್, ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 14,500 ಆರ್‌ಪಿಎಂನಲ್ಲಿ 11,500 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ಬೈಕ್ 190 ಕೆಜೆ ತೂಕವಿದೆ. ಈ ಹೊಸ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ರೈಡ್-ಬೈ-ವೈರ್ ಥ್ರೊಟಲ್, ಆರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಬೈಕ್ ಮೂರು ರೈಡಿಂಗ್ ಮೋಡ್‌ಗಳು ಮತ್ತು ಎಲ್‌ಸಿಡಿ ಇನ್ಸ್ ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿ ಕೆಲವು ಆಯ್ದ ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಯಮಹಾ ಕಂಪನಿಯು ತನ್ನ ವೈಝಡ್ಎಫ್-ಆರ್15, ಎಂಟಿ-15. ಎಫ್‍ಝಡ್ 15 ಮತ್ತು ಎಫ್‍ಝಡ್ಎಸ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಯಮಹಾ ವೈಝಡ್ಎಫ್ ಆರ್6 ಪವರ್ ಫುಲ್ ಬೈಕ್ ಇನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಬಿಡುಗಡೆಯಾಗುವುದು ಅನುಮಾನವಾಗಿದೆ.


Click it and Unblock the Notifications