ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 2021ರ ಪಲ್ಸರ್ 180 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬಜಾಜ್ ಪಲ್ಸರ್ 180 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

2021ರ ಬಜಾಜ್ ಪಲ್ಸರ್ 180 ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಡೀಲರ್ ಬಳಿ ಕಾಣಿಸಿಕೊಂಡಿರುವ ಹೊಸ ಬಜಾಜ್ ಪಲ್ಸರ್ 180 ಬೈಕ್ ಚಿತ್ರಗಳು ಬಹಿರಂಗವಾಗಿವೆ. ಈ ಹೊಸ ಪಲ್ಸರ್ 180 ಬೈಕನ್ನು ಸೆಮಿ -ಫೇರ್ಡ್ 180ಎಫ್ ಬೈಕಿನ ಜೊತೆ ಮಾರಾಟ ಮಾಡುವ ಸಾಧ್ಯತೆಗಳಿದೆ. ಹೊಸ ಪಲ್ಸರ್ 180 ಕ್ಲಾಸಿಕ್ ಫ್ಯಾಮಿಲಿ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಹೊಸ ಪಲ್ಸರ್ 180 ಬೈಕಿನಲ್ಲಿ ಫೆನರ್, ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳು, ಟೈಲ್‌ಪೀಸ್ ಮತ್ತು ಬೆಲ್ಲಿ ಪ್ಯಾನ್‌ನಲ್ಲಿ ಅನನ್ಯ ಕಾಂಟ್ರಾಸ್ಟ್ ಡೆಕಲ್‌ಗಳನ್ನು ಪಡೆಯುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಹೆಡ್‌ಲ್ಯಾಂಪ್ ಹೌಸಿಂಗ್ ಅನ್ನು ಸ್ವಲ್ಪಮಟ್ಟಿಗೆ ತಿರುಚಿದಂತೆ ತೋರುತ್ತಿದೆ ಆದರೆ ಗಮನಾರ್ಹವಾದ ಯಾವುದೇ ಬದಲಾವಣೆಗಳಿಲ್ಲ. ಇನ್ನು ಹೊಸ ಬಜಾಜ್ ಪಲ್ಸರ್ ಬೈಕಿನ ಡಿಜಿ-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು 220ಎಫ್ ಮಾದರಿಯಿಂದ ಎರವಲು ಪಡೆಯಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಬ್ಲ್ಯೂ ಬ್ಯಾಕ್‌ಲಿಟ್ ಡಿಜಿಟಲ್ ಡಿಸ್ ಪ್ಲೇ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಬೈಕಿನ ವೇಗ, ಇಂಧನ ದಕ್ಷತೆ, ಇಂಧನ ಎಷ್ಟೂ ದೂರ ಸಾಗಲು ಇದೆ, ಸೈಡ್-ಸ್ಟ್ಯಾಂಡ್ ಅಲರ್ಟ್, ಓಡೋಮೀಟರ್ ಸರ್ವಿಸ್ ರಿಮೈಂಡರ್ ಮತ್ತು ಅನೇಕ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಬಜಾಜ್ ಪಲ್ಸರ್ ಸರಣಿಯಲ್ಲಿರುವ ಮಾದರಿಗಳನ್ನು ನವೀಕರಿಸಲಾಗುತ್ತಿದೆ. ಇನ್ನು 2021ರ ಪಲ್ಸರ್ 180 ಬೈಕಿನ ಎಂಜಿನ್ ನಲ್ಲಿ ವಿಶೇಷಣಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಹೊಸ ಬಜಾಜ್ ಪಲ್ಸರ್ 180 ಬೈಕಿನಲ್ಲಿ 178.6 ಸಿಸಿ ಏರ್-ಕೂಲ್ಡ್, ಇಂಧನ-ಇಂಜೆಕ್ಟ್ ಎಂಜಿನ್‌ ಅನ್ನು ಹೊಂದಿರುತ್ತದೆ. ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 14.52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

2021ರ ಬಜಾಜ್ ಪಲ್ಸರ್ 180 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವದಿಸಲಾಗಿದೆ. ಆದರೆ ಎವಿಎಸ್ ಅನ್ನು ಹೊಂದುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಬಜಾಜ್ ಪಲ್ಸರ್ 180 ಬೈಕ್

ಇನ್ನು ಈ ಬಜಾಜ್ ಪಲ್ಸರ್ 180 ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಇನ್ನು ಈ ಹೊಸ ಬಜಾಜ್ ಪಲ್ಸರ್ 180 ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Image Courtesy: AUTO TRAVEL TECH

Most Read Articles

Kannada
English summary
2021 Bajaj Pulsar 180 At Dealer Showroom. Read In Kannada.
Story first published: Wednesday, February 17, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X