Just In
- 49 min ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 10 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 12 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
- 13 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್ಲಿಫ್ಟ್
Don't Miss!
- News
ಸಮೀಕ್ಷೆ: ಕೇರಳದಲ್ಲಿ ಮತ್ತೆ LDF ಸರ್ಕಾರ, ಬಿಜೆಪಿಗೆ ಉಪ್ಪು ಖಾರ
- Sports
ಐಎಸ್ಎಲ್: ಲೀಗ್ ವಿನ್ನರ್ಸ್ ಶೀಲ್ಡ್ ಗಾಗಿ ಮುಂಬೈ ಮತ್ತು ಮೋಹನ್ ಬಾಗನ್ ಸೆಣಸು
- Lifestyle
ದಿನ ಭವಿಷ್ಯ: ಭಾನುವಾರದ ರಾಶಿಫಲ ಹೇಗಿದೆ ನೋಡಿ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎಂಟಿ-25 ಬೈಕ್
ಯಮಹಾ ಕಂಪನಿಯು ತನ್ನ 2021ರ ಎಂಟಿ-25 ಬೈಕನ್ನು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಎಂಟಿ-25 ಸ್ಟ್ರೀಟ್‌ಫೈಟರ್ ಬೈಕನ್ನು ನವೀಕರಿಸಿದ ಬಾಡಿವರ್ಕ್ ಅನ್ನು ಪಡೆದುಕೊಂಡಿದೆ.

2021ರ ಯಮಹಾ ಎಂಟಿ-25 ಬೈಕಿನಲ್ಲಿ ಎಂಟಿ ಗ್ರಾಫಿಕ್ಸ್, ಹೊಸ ಟ್ಯಾಂಕ್ ಕವರ್ ಮತ್ತು ಎರಡೂ ಬದಿಗಳಲ್ಲಿ ಏರ್ ಸ್ಕೂಪ್‌ಗಳನ್ನು ಒಳಗೊಂಡಿದೆ.ಹೊಸ ಯಮಹಾ ಎಂಟಿ-25 ಆಲ್-ಎಲ್ಇಡಿ ಲೈಟಿಂಗ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನವೀಕರಿಸಿದೆ, ಈ ಕ್ಲಸ್ಟರ್ ದೊಡ್ಡ ಅಕ್ಷರಗಳೊಂದಿಗೆ ಶಿಫ್ಟ್ ಲೈಟ್ ಪಡೆಯುತ್ತದೆ. ಈ 2021ರ ಯಮಹಾ ಎಂಟಿ-25 ಮಾದರಿಯು ಇನ್ನಷ್ಟು ಆಕರ್ಷಕ ಲುಕ್ ಅನ್ನು ಪಡೆದುಕೊಂಡಿದೆ.

ಇನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮ್ಯಾಟ್ ಗ್ರೇ, ಮೆಟಾಲಿಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕು ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಯಮಹಾ ಎಂಟಿ-03 ಅನ್ನು ಹೋಲುತ್ತದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, 2021ರ ಯಮಹಾ ಎಂಟಿ-25 ಬೈಕಿನಲ್ಲಿ 250ಸಿಸಿ ಪ್ಯಾರಲೆಲ್-ಟ್ವಿನ್ ಡಿಒಹೆಚ್‌ಸಿ, ಲಿಕ್ವಿಡ್ ಕೋಲ್ಡ್, ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 12,000 ಆರ್‌ಪಿಎಂನಲ್ಲಿ 35.5 ಬಿಹೆಚ್‍ಪಿ ಪವರ್ ಮತ್ತು 10,000 ಆರ್‌ಪಿಎಂನಲ್ಲಿ 23.6 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಟಿ-25 ಯಮಹಾ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಇದು ಒಂದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಯಮಹಾ ಎಂಟಿ-25 ಟೂಬಲರ್ ಡೈಮೆಂಡ್ ಫ್ರೇಮ್ ನಲ್ಲಿ ನಿರ್ಮಿಸಲಾಗಿರುವ, ಎಂಟಿ -25ನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಅಪ್ ಸೈಡ್-ಡೌನ್ 37ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿರುತ್ತದೆ

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಯಮಹಾ ಎಂಟಿ-25 ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್, ಎಲ್ಇಡಿ ಟೈಲೈಟ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್ಸ್ ಹೊಂದಿದೆ. ಸ್ಟೈಲಿಂಗ್ ವಿಷಯದಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಸ್ಟೆಪ್-ಅಪ್ ಸ್ಯಾಡಲ್, ಸ್ಪ್ಲಿಟ್-ಸ್ಟೈಲ್ ಅಲಾಯ್ ವ್ಹೀಲ್ ಮತ್ತು ಎಂಜಿನ್ ಕೌಲ್ ಒಳಗೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯು ಹೊಸ ಎಂಟಿ-25 ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಆದರೆ ಯಮಹಾ ಕಂಪನಿಯು ಮುಂಬರುವ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರೀಮಿಯಂ ಬೈಕುಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ