ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

Royal Enfield ಕಂಪನಿಯ Classic 350, Meteor, Bullet, Electra ಹಾಗೂ Honda ಕಂಪನಿಯ CB350 ಬೈಕುಗಳು ದೇಶಿಯ ಮಾರುಕಟ್ಟೆಯ 350 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಾಗಿವೆ. ಈ ಸೆಗ್ ಮೆಂಟಿನಲ್ಲಿ Jawa ಹಾಗೂ Benelli ಕಂಪನಿಯ ಬೈಕುಗಳ ಸಹ ಮಾರಾಟವಾಗುತ್ತವೆ. ಆದರೆ ಆ ಬೈಕುಗಳ ಮಾರಾಟ ಸಂಖ್ಯೆ ಅಷ್ಟೊಂದು ಉತ್ತಮವಾಗಿಲ್ಲ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

350 ಸಿಸಿ ಬೈಕ್ ಸೆಗ್ ಮೆಂಟಿನ ಕಳೆದ ತಿಂಗಳ ಮಾರಾಟದ ಅಂಕಿ ಅಂಶಗಳ ಬಗ್ಗೆ ಹೇಳುವುದಾದರೆ, ಕಳೆದ ತಿಂಗಳು ಈ ಸೆಗ್ ಮೆಂಟಿನಲ್ಲಿ 25,709 ಯುನಿಟ್‌ 350 ಸಿಸಿ ಬೈಕುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಈ ಸೆಗ್ ಮೆಂಟಿನಲ್ಲಿ 53,442 ಯುನಿಟ್ ಬೈಕ್ ಗಳನ್ನು ಮಾರಾಟ ಮಾಡಲಾಗಿತ್ತು. ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ 51.89% ನಷ್ಟು ಇಳಿಕೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

ಪ್ರತಿ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ನೋಡುವುದಾದರೆ, ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಸೆಗ್ ಮೆಂಟಿನಲ್ಲಿ 36,543 ಯುನಿಟ್ ಬೈಕುಗಳು ಮಾರಾಟವಾಗಿದ್ದವು. ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳ ಮಾರಾಟದಲ್ಲಿ 29.65% ನಷ್ಟು ಇಳಿಕೆಯಾಗಿದೆ. ಕಳೆದ ತಿಂಗಳು ಯಾವ ಯಾವ ಬೈಕುಗಳು ಎಷ್ಟು ಸಂಖ್ಯೆಯಲ್ಲಿ ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

1. Royal Enfield Classic 350

Royal Enfield Classic 350 ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು Royal Enfield ಕಂಪನಿಯು ಈ ಬೈಕಿನ 13,751 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಕಂಪನಿಯು 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಬೈಕಿನ 38,827 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಬೈಕಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಬಾರಿ 64.58% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

2. Royal Enfield Meteor 350

Royal Enfield ಕಂಪನಿಯು Meteor 350 ಬೈಕ್ ಅನ್ನು 2020ರ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಕಳೆದ ತಿಂಗಳು ಈ ಬೈಕಿನ ಒಟ್ಟು 6,184 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಪ್ರತಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಆಗಸ್ಟ್ ತಿಂಗಳಿನಲ್ಲಿ ಈ ಬೈಕಿನ 6,381 ಯುನಿಟ್‌ಗಳು ಮಾರಾಟವಾಗಿದ್ದವು. ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಬೈಕಿನ ಮಾರಾಟ ಪ್ರಮಾಣವು 3.09% ನಷ್ಟು ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

3. Honda H'ness CB350

ಈ ಪಟ್ಟಿಯಲ್ಲಿ Honda ಕಂಪನಿಯ H'ness CB 350 ಬೈಕ್ ಮೂರನೇ ಸ್ಥಾನದಲ್ಲಿದೆ. ಈ ಬೈಕ್ ಅನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬೈಕಿನ 2,995 ಯುನಿಟ್‌ಗಳು ಮಾರಾಟವಾಗಿವೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಬೈಕಿನ 1,047 ಯುನಿಟ್‌ಗಳು ಮಾರಾಟವಾಗಿವೆ. ಈ ಮೂಲಕ ಈ ಬೈಕಿನ ಮಾರಾಟ ಪ್ರಮಾಣವು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ 186.06% ನಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

4. Royal Enfield Bullet 350

Royal Enfield ಕಂಪನಿಯು ಕಳೆದ ತಿಂಗಳು Bullet 350 ಬೈಕಿನ 2,107 ಯುನಿಟ್ ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಈ ಬೈಕಿನ ಒಟ್ಟು 8,883 ಯುನಿಟ್‌ಗಳು ಮಾರಾಟವಾಗಿದ್ದವು. ಈ ಬೈಕಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಬಾರಿ 76.28% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

5. Royal Enfield Electra 350

Royal Enfield ಕಂಪನಿಯು ಸೆಪ್ಟೆಂಬರ್ ತಿಂಗಳಲ್ಲಿ Electra 350 ಬೈಕಿನ 672 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು ಈ ಬೈಕಿನ 5,732 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಬೈಕಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಬಾರಿ 88.28% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

ಇನ್ನು Royal Enfield ಕಂಪನಿಯು 2021ರ ಸೆಪ್ಟೆಂಬರ್ ತಿಂಗಳಿನಲ್ಲಿ 33,529 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ವಾಹನಗಳಿಗಿಂತ 40% ನಷ್ಟು ಕಡಿಮೆಯಾಗಿದೆ. ಚೆನ್ನೈ ಮೂಲದ Royal Enfield ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 60,331 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

ಕಳೆದ ತಿಂಗಳು ದಾಖಲಾದ 33,529 ಯುನಿಟ್ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾದ ಹಾಗೂ ವಿದೇಶಗಳಿಗೆ ರಫ್ತು ಮಾಡಲಾದ ದ್ವಿಚಕ್ರ ವಾಹನಗಳನ್ನು ಒಳಗೊಂಡಿದೆ. ಕಂಪನಿಯು ಕಳೆದ ತಿಂಗಳು 27,233 ಯುನಿಟ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, 6,296 ಯುನಿಟ್ ಬೈಕುಗಳನ್ನು ರಫ್ತು ಮಾಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿದ 350 ಸಿಸಿ ಬೈಕುಗಳ ಮಾರಾಟ

ಕಳೆದ ತಿಂಗಳು ಮಾರಾಟವಾದ Royal Enfield ಬೈಕ್‌ಗಳ ಒಟ್ಟು ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿಯೇ 81.22% ನಷ್ಟಾಗಿದೆ. ಅದೇ ರೀತಿ Royal Enfield ಕಂಪನಿಯ ಒಟ್ಟು ಮಾರಾಟವನ್ನು 350 ಸಿಸಿ ಹಾಗೂ 350 ಸಿಸಿಗಿಂತ ಕಡಿಮೆ ಎಂದು ವಿಂಗಡಿಸಬಹುದು. Royal Enfield ಕಂಪನಿಯು 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

Article Published On: Wednesday, October 20, 2021, 16:37 [IST]
English summary
350 cc bike segment sales declines in september 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+