Just In
- 27 min ago Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- 43 min ago Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- 55 min ago Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- 1 hr ago ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
Don't Miss!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಧಿಕೃತ ವೆಬ್ಸೈಟ್ನಲ್ಲಿ ಎಪ್ರಿಲಿಯಾ ಎಸ್ಎಕ್ಸ್ಆರ್ 125 ಬೆಲೆ ಮಾಹಿತಿ ಬಹಿರಂಗ
ಎಪ್ರಿಲಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರೀಮಿಯಂ ಸ್ಕೂಟರ್ ಮಾದರಿಗಳ ಸರಣಿಯನ್ನು ಹೆಚ್ಚಿಸುತ್ತಿದ್ದು, ಎಸ್ಎಕ್ಸ್ಆರ್ ಸರಣಿಯಲ್ಲಿ ಹೊಸದಾಗಿ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.
ಭಾರತದಲ್ಲಿ ಪ್ರೀಮಿಯಂ ಸ್ಕೂಟರ್ಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ವಿವಿಧ ಆಟೋ ಕಂಪನಿಗಳು ವಿದೇಶಿ ಮಾರುಕಟ್ಟೆಗಳಲ್ಲಿರುವ ತಮ್ಮ ಜನಪ್ರಿಯ ಮ್ಯಾಕ್ಸಿ ಸ್ಕೂಟರ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುತ್ತಿವೆ. ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ಕೂಡಾ ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ಕೂಡಾ ತನ್ನ ಹೊಸ ಸ್ಕೂಟರ್ ಮಾದರಿಯಾದ ಎಸ್ಎಕ್ಸ್ಆರ್ 125 ಬಿಡುಗಡೆ ಮಾಡುತ್ತಿದೆ.
ಎಸ್ಎಕ್ಸ್ಆರ್ ಸರಣಿಯಲ್ಲಿ ಈಗಾಗಲೇ ಹೊಸದಾಗಿ 160 ಆವೃತ್ತಿಯನ್ನು ಕೆಲ ತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿರುವ ಎಪ್ರಿಲಿಯಾ ಕಂಪನಿಯು ಇದೀಗ ಎಸ್ಎಕ್ಸ್ಆರ್ 125 ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್ ಮುಂದಿನ ಕೆಲವೇ ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಎಸ್ಎಕ್ಸ್ಆರ್ 125 ಸ್ಕೂಟರ್ ಮಾಹಿತಿಯು ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು ಎಕ್ಸ್ಶೋರೂಂ ಪ್ರಕಾರ ರೂ. 1,14,994 ಬೆಲೆ ಹೊಂದಿದೆ.
ಎಸ್ಎಕ್ಸ್ಆರ್ 160 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಖರೀದಿಗಾಗಿ ಎಪ್ರಿಲಿಯಾ ಕಂಪನಿಯು ಈಗಾಗಲೇ ರೂ. 5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದ್ದು, ಹೊಸ ಸ್ಕೂಟರ್ ಮಾದರಿಯು ಎಸ್ಎಕ್ಸ್ಆರ್ 160 ಸ್ಕೂಟರ್ಗಿಂತಲೂ ರೂ.9 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದೆ.
ಮಾಕ್ಸಿ ಸ್ಕೂಟರ್ ಆವೃತ್ತಿಯಾಗಿರುವ ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಮಾದರಿಯು ಸದ್ಯ ಪುಣೆ ಎಕ್ಸ್ಶೋರೂಂ ಪ್ರಕಾರ ರೂ. 1.26 ಲಕ್ಷ ಬೆಲೆ ಪಡೆದುಕೊಂಡಿದ್ದು, 160 ಮಾದರಿಗೂ 125 ಮಾದರಿಗೂ ರೂ.9 ಸಾವಿರ ಮಾತ್ರ ವ್ಯತ್ಯಾಸವಿದೆ.
ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ಗಿಂತಲೂ ತುಸು ಕಡಿಮೆ ವೀಲ್ಹ್ಬೆಸ್ ಹೊಂದಿದ್ದು, ಎಸ್ಎಕ್ಸ್ಆರ್ 160 ಮಾದರಿಯಲ್ಲಿ 160ಸಿಸಿ ಎಂಜಿನ್ ಆಯ್ಕೆ ಹೊಂದಿದ್ದರೆ ಎಸ್ಎಕ್ಸ್ಆರ್ 125 ಮಾಕ್ಸಿ ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ನೀಡಲಾಗಿದೆ.
ಮೇಲಿನ ಪ್ರಮುಖ ಎರಡು ವ್ಯತ್ಯಾಸಗಳನ್ನು ಹೊರತುಪಡಿಸಿ ಎರಡು ಸ್ಕೂಟರ್ ಆವೃತ್ತಿಗಳಲ್ಲೂ ಸ್ಪೀಟ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಡಿಆರ್ಎಲ್ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ವೀಂಡ್ ಸ್ಕ್ರೀನ್, ಆರಾಮದಾಯಕವಾದ ಸಿಂಗಲ್ ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯದೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದ್ದು, ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವ ಒಂದೇ ಸೂರಿನಡಿ ನಿಯಂತ್ರಿಸುವ ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿವೆ.
ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನಲ್ಲಿ ಮೈಲೇಜ್ ಇಂಡಿಕೇಟರ್, ಆರ್ಪಿಎಂ ಮೀಟರ್, ಅರೇಜ್ ಮತ್ತು ಟಾಪ್ ಸ್ಪೀಡ್ ಮೀಟರ್, ಫ್ಯೂಲ್ ಇಂಡಿಕೇಟರ್ ಜೊತೆ ಕನೆಕ್ಟೆಡ್ ಫೀಚರ್ಸ್ಗಳನ್ನು ಸಹ ಜೋಡಿಸಬಹುದು.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ
ಆಸಕ್ತ ಗ್ರಾಹಕರಿಗೆ ಹೊಸ ಸ್ಕೂಟರ್ಗಳಲ್ಲಿ ಕನೆಕ್ಟೆಡ್ ಫೀಚರ್ಸ್ಗಳನ್ನು ಹೆಚ್ಚುವರಿ ಮೊತ್ತಕ್ಕೆ ಅಳವಡಿಸಕೊಳ್ಳಬಹುದಾಗಿದ್ದು, ಕನೆಕ್ಟೆಡ್ ಫೀಚರ್ಸ್ ಇದ್ದಲ್ಲಿ ಸ್ಕೂಟರ್ ಮಾಲೀಕರು ಸ್ಮಾರ್ಟ್ ಫೋನ್ ಮೂಲಕವೇ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಅಪ್ಲೀಕೆಷನ್ನಲ್ಲೇ ನಿಯಂತ್ರಣ ಮಾಡಬಹುದಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ನೊಂದಿಗೆ 10.5-ಬಿಎಚ್ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ನೊಂದಿಗೆ 9.3-ಬಿಎಚ್ಪಿ, 9.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!
ಗ್ರಾಹಕರು ಹೊಸ ಸ್ಕೂಟರ್ಗಳನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಗ್ಲಾಸಿ ರೆಡ್, ಮ್ಯಾಟೆ ಬ್ಲ್ಯೂ, ಗ್ಲಾಸಿ ವೈಟ್ ಮ್ಯಾಟೆ ಬ್ಲ್ಯಾಕ್ ಬಣ್ಣ ಹೊಂದಿದೆ. ಸದ್ಯ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯ ಬುಕ್ಕಿಂಗ್ ಆರಂಭಿಸಿರುವ ಎಪ್ರಿಲಿಯಾ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ವಿತರಣೆ ಆರಂಭಿಸಿದೆ.