75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಆಂಪಿಯೆರ್ ಎಲೆಕ್ಟ್ರಿಕ್ ಕಂಪನಿಯು ಸುಧೀರ್ಘ ಅವಧಿಯ ಪ್ರಯಾಣದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ತನ್ನ ವಾಹನ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಪ್ರಸ್ತುತ ಮಾರುಕಟ್ಟೆಯಲ್ಲಿ 190 ನಗರಗಳಲ್ಲಿ ತನ್ನ ಮಾರಾಟ ಜಾಲ ಹೊಂದಿರುವ ಆಂಪಿಯೆರ್ ಕಂಪನಿಯು ಬರೋಬ್ಬರಿ 300 ಮಾರಾಟ ಮಳಿಗೆಗಳ ಮೂಲಕ ಗ್ರಾಹಕರ ತಲುಪಲು ಯಶಸ್ವಿಯಾಗಿರುವ ಕಂಪನಿಯು ಇದುವರೆಗೆ 75 ಸಾವಿರ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದೊಂದಿಗೆ ಹೊಸ ಗುರಿಸಾಧನೆಗೆ ಪಾತ್ರವಾಗಿದೆ. ಕಳೆದ 13 ವರ್ಷಗಳಲ್ಲಿ ಮೊದಲ ಬಾರಿಗೆ ಕಳೆದ ಎರಡು ವರ್ಷಗಳಿಂದ ಇವಿ ವಾಹನಗಳ ಮಾರಾಟ ಹೆಚ್ಚಳವಾಗಿದ್ದರೂ ಪೆಟ್ರೋಲ್ ವಾಹನಗಳ ಅಬ್ಬರದ ನಡುವೆಯು ಪರಿಸರ ಸ್ನೇಹಿ ಮಾರಾಟದಲ್ಲಿ ಬದ್ದತೆ ಪ್ರದರ್ಶಿಸುವ ಮೂಲಕ ಹೊಸ ಸಾಧನೆಯತ್ತ ಮುನ್ನುಗ್ಗುತ್ತಿದೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ವೆರಿಯೆಂಟ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯ, ಹೆಚ್ಚಿನ ಮಟ್ಟದ ಲೋಡಿಂಗ್ ಸಾಮಾರ್ಥ್ಯವನ್ನು ನೀಡಲಾಗಿದ್ದು, ಹೊಸ ವೆರಿಯೆಂಟ್‌ಗಳನ್ನು ರಿಯೋ, ವಿ48, ಮ್ಯಾಗ್ನಸ್ 60 ಮತ್ತು ಜೀಲ್ ಮಾದರಿಗಳಲ್ಲಿ ಪರಿಚಯಿಸಲಾಗಿದೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ರಿಯೋ ಪ್ಲಸ್, ರಿಯೋ ಎಲೈಟ್, ವಿ48 ಪ್ಲಸ್, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ಮತ್ತು ಜೀಲ್ ಇಎಕ್ಸ್ ಮಾದರಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಇವಿ ಸ್ಕೂಟರ್ ವೆರಿಯೆಂಟ್‌ಗಳಲ್ಲಿ ಮೈಲೇಜ್ ಹೆಚ್ಚಳಕ್ಕಾಗಿ ಲೀಥಿಯಂ ಮತ್ತು ಲೀಡ್ ಆ್ಯಸಿಡ್ ಬ್ಯಾಟರಿ ಮಾದರಿಗಳ ಆಯ್ಕೆ ನೀಡಲಾಗಿದೆ. ಪ್ರತಿ ಚಾರ್ಜ್‌ಗೆ ವಿವಿಧ ಸ್ಕೂಟರ್‌ಗಳು ಬ್ಯಾಟರಿ ಆಯ್ಕೆಯ ಆಧಾರದ ಮೇಲೆ ಕನಿಷ್ಠ 65 ಕಿ.ಮೀ ನಿಂದ 90 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿವೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಮುಖವಾಗಿ ಪರ್ಫಾಮೆನ್ಸ್ ಮತ್ತು ಎಕಾನಮಿ ಮಾದರಿಗಳಾಗಿ ಮಾರಾಟಗೊಳ್ಳುತ್ತಿದ್ದು, ಆರಂಭಿಕ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 34 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ. 74 ಸಾವಿರ ಬೆಲೆ ಹೊಂದಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಅಪ್‌ಗ್ರೇಡ್ ಮಾದರಿಗಳಲ್ಲಿ ಶೇ.10 ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದೆ.

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಇನ್ನು ಕರೋನಾ ವೈರಸ್ ಪರಿಣಾಮ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, ವೈರಸ್ ಭೀತಿಯಿಂದ ಬಹುತೇಕರು ಸ್ವಂತ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಯು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ನಿಗದಿತ ಅವಧಿಗಾಗಿ ರೆಂಟಲ್ ವಾಹನಗಳ ಮೂಲಕ ಇಂತಿಷ್ಟು ಅವಧಿಗೆ ಮಾಲೀಕತ್ವ ಪಡೆದುಕೊಳ್ಳುವ ಪ್ರಕ್ರಿಯೆ ಹೆಚ್ಚುತ್ತಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

75 ಸಾವಿರ ಯುನಿಟ್ ಮಾರಾಟದೊಂದಿಗೆ 300 ಮಾರಾಟ ಮಳಿಗೆಗಳ ಗುರಿತಲುಪಿದ ಆಂಪಿಯರ್

ಸೆಲ್ಫ್ ಡ್ರೈವ್ ಮತ್ತು ಸೆಲ್ಫ್ ರೈಡ್ ವಾಹನಗಳಿಗೆ ಮಹಾನಗರಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತಿದ್ದು, ಇಬೈಕ್‌ಗೊ ಎನ್ನುವ ಕಂಪನಿಯು ಕೂಡಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮೂಲಕ ರೆಂಟಲ್ ಪ್ರಕ್ರಿಯೆಯನ್ನು ಹೆಚ್ಚಿಸುತ್ತಿದೆ. ಇದಕ್ಕಾಗಿ ಆಂಪಿಯೆರ್ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಜೊತೆಗೂಡಿರುವ ಇಬೈಕ್‌ಗೊ ಕಂಪನಿಯು ಸುಮಾರು 2 ಸಾವಿರ ಹೈ ರೆಂಜ್ ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರೆಂಟಲ್ ಮಾದರಿಯಾಗಿ ಬಳಕೆ ಮಾಡುತ್ತಿದೆ.

More from DriveSpark

Article Published On: Friday, January 22, 2021, 20:57 [IST]
English summary
Ampere Electric Achieves 75,000 Sales Milestone In India, And Reaches 300 EV Dealerships.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+