500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು 350 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟಗಾರರನ್ನು ಹಾಗೂ 165 ಎಲೆಕ್ಟ್ರಿಕ್ ರಿಕ್ಷಾ ಮಾರಾಟಗಾರರನ್ನು ಹೊಂದಿದೆ. ಈ ಮೂಲಕ ಆಂಪಿಯರ್ ಎಲೆಕ್ಟ್ರಿಕ್ 500 ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದೆ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತದೆ. ಆದರೂ ಆಂಪಿಯರ್ ಎಲೆಕ್ಟ್ರಿಕ್ ವಾಹನಗಳು ರಿಟೇಲ್ ಹಾಗೂ ಸಗಟು ಖರೀದಿಯಲ್ಲಿ ನಿರ್ದಿಷ್ಟ ಬಳಕೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಕಂಪನಿಯು ಪ್ರತಿ ತಿಂಗಳು ಎಲೆಕ್ಟ್ರಿಕ್ ರಿಕ್ಷಾಗಳನ್ನು ಸಹ ಗಣನೀಯ ಸಂಖ್ಯೆಯಲ್ಲಿ ಮಾರಾಟ ಮಾಡುತ್ತದೆ. ಕಂಪನಿಯ ಟಚ್ ಪಾಯಿಂಟ್'ಗಳ ಸಂಖ್ಯೆ ಈಗ 500 ರ ಗಡಿ ದಾಟಿದೆ ಎಂದು ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಯ್ ಕುರಿಯನ್ ಹೇಳಿದ್ದಾರೆ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಈ ಬಗ್ಗೆ ಮಾತನಾಡಿರುವ ಅವರು, ನಾವು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಮಾರಾಟ ಮಾಡುತ್ತೇವೆ. ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಹಣಕಾಸು ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರು, ರಿಟೇಲ್ ಗ್ರಾಹಕರು ಹಾಗೂ ಹಣಕಾಸು ಸಂಸ್ಥೆಗಳಿಗೆ ಗುಣಮಟ್ಟದ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಪಾಲುದಾರರಿಗೆ ಸದಾ ಬೆಂಬಲ ನೀಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಹಗುರವಾದ ಲಿಥಿಯಂ ಐರನ್ ಬ್ಯಾಟರಿ ಪ್ಯಾಕ್ ಅನ್ನು ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒದಗಿಸಲಾಗಿದೆ. ಈ ಬ್ಯಾಟರಿ ಗ್ರಾಹಕರನ್ನು ಆಕರ್ಷಿಸುತ್ತದೆ. ಈ ಬ್ಯಾಟರಿಗೆ ಜೀವನ ಪರ್ಯಂತ ವಾರಂಟಿ ನೀಡಲಾಗುತ್ತದೆ ಎಂಬುದು ಗಮನಾರ್ಹ ಸಂಗತಿ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಚಾಲನೆಗೆ ಪ್ರತಿ 1 ಕಿ.ಮೀಗೆ ಸರಾಸರಿ 15 ಪೈಸೆ ವೆಚ್ಚವಾಗಬಹುದು. ಮಾರಾಟವನ್ನು ಹೆಚ್ಚಿಸಲು ಆಂಪಿಯರ್ ಎಲೆಕ್ಟ್ರಿಕ್, ಇ-ಸ್ಕೂಟರ್‌ಗಳಿಗೆ ಕಸ್ಟಮೈಸ್ ಆಯ್ಕೆಯನ್ನು ಸಹ ನೀಡುತ್ತದೆ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ವೆಹಿಕಲ್ಸ್ ಕಂಪನಿಯು ಇವಿ ತಂತ್ರಜ್ಞಾನ, ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸುವುದರಲ್ಲಿ ಹಾಗೂ ಉತ್ಪಾದಿಸುವಲ್ಲಿ ಹನ್ನೆರಡು ವರ್ಷಗಳ ಅನುಭವವನ್ನು ಹೊಂದಿದೆ.

500ಕ್ಕೂ ಹೆಚ್ಚು ಟಚ್ ಸೆಂಟರ್'ಗಳನ್ನು ಹೊಂದಿದ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ಸುಮಾರು 75000 ಗ್ರಾಹಕರನ್ನು ಹೊಂದಿರುವ ಗ್ರೀವ್ಸ್‌ ಕಾಟನ್ ಲಿಮಿಟೆಡ್'ನ ಭಾಗವಾಗಿದೆ. ಆಂಪಿಯರ್, ಗ್ರೀವ್ಸ್‌ ಕಂಪನಿಯ ಕೊನೆಯ ಮೈಲಿ ಇ-ಮೊಬಿಲಿಟಿ ದಾರಿಯಲ್ಲಿ ಮುನ್ನಡೆಯುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸೆಗ್ ಮೆಂಟಿನ ಬಿ 2 ಸಿ ಹಾಗೂ ಬಿ 2 ಬಿ ವಿಭಾಗಗಳಲ್ಲಿ ಆಂಪಿಯರ್ ವೇಗವಾಗಿ ಬೆಳೆಯುತ್ತಿರುವ ಕಂಪನಿಯಾಗಿದೆ.

Most Read Articles

Kannada
English summary
Ampere electric has 500 plus touchpoints across the country. Read in Kannada.
Story first published: Tuesday, July 27, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X