ಮಹಾರಾಷ್ಟ್ರದಲ್ಲಿ ಎಥರ್ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ರೂ.22 ಸಾವಿರ ಸಬ್ಸಡಿ
ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯ ತಿದ್ದುಪಡಿಯ ಮೂಲಕ ಇವಿ ದ್ವಿಚಕ್ರ ವಾಹನಗಳಿಗೆ ಭರ್ಜರಿ ಸಬ್ಸಡಿ ನೀಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆ ಘೋಷಣೆ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಸಹ ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಳ್ಳುವ ಮೂಲಕ ಇವಿ ವಾಹನಗಳಿಗೆ ಉತ್ತೇಜನ ನೀಡುತ್ತಿದೆ.

ಇಂಧನಗಳ ಬೆಲೆ ಏರಿಕೆ ಮತ್ತು ಮಾಲಿನ್ಯ ಹೆಚ್ಚಳದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಸಬ್ಸಡಿ ಯೋಜನೆಯೊಂದಿಗೆ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜೊತೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಲಭ್ಯವಾಗಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ಗುಜರಾತ್ ಸರ್ಕಾರವು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಂಡಿದೆ. ಇದೀಗ ಮಹಾರಾಷ್ಟ್ರ ಸರ್ಕಾರವು ಸಹ ಹೊಸ ಇವಿ ವಾಹನ ನೀತಿ ಮೂಲಕ ಇವಿ ವಾಹನಗಳನ್ನು ಖರೀದಿಸುವವರಿಗಾಗಿ ಭಾರೀ ಪ್ರಮಾಣದ ಸಬ್ಸಡಿ ಆರಂಭಿಸಿದೆ.

ಮಹಾರಾಷ್ಟ್ರ ಸರ್ಕಾರವು 2021ರ ಕೊನೆಯಲ್ಲಿ ರಾಜ್ಯಾದ್ಯಂತ ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶ ಹೊಂದಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನ ಮತ್ತು ಕಾರು ಮಾದರಿಗಳಿಗೆ ಗರಿಷ್ಠ ಪ್ರಮಾಣದ ಸಬ್ಸಡಿ ನೀಡಲು ಚಾಲನೆ ನೀಡಿದೆ.

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ದ್ವಿಚಕ್ರ ವಾಹನಗಳಿಗಾಗಿ ಗರಿಷ್ಠ ರೂ.44 ಸಾವಿರ, ತ್ರಿ ಚಕ್ರ ವಾಹಗಳಿಗಾಗಿ ಗರಿಷ್ಠ ರೂ. 90 ಸಾವಿರ ಮತ್ತು ಎಲೆಕ್ಟ್ರಿಕ್ ಕಾರುಗಳಿಗಾಗಿ ಗರಿಷ್ಠ ರೂ. 2.75 ಲಕ್ಷ ಸಬ್ಸಡಿ ನೀಡುತ್ತಿದೆ.

ಹೊಸ ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು 2021ರ ಡಿಸೆಂಬರ್ 31ರ ಒಳಗಾಗಿ ಖರೀದಿಸಿದ್ದಲ್ಲಿ ಹೆಚ್ಚಿನ ಮಟ್ಟದ ಸಬ್ಸಡಿ ದೊರೆಯಲಿದ್ದು, 2022ರ ಜನವರಿ 1ರಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಡಿ ಲಭ್ಯವಿದ್ದರೂ ಪ್ರಸ್ತುತ ವರ್ಷದ ಸಬ್ಸಡಿ ಪ್ರಮಾಣಕ್ಕಿಂತಲೂ ತುಸು ಕಡಿಮೆಯಾಗಲಿದೆ.

2022ರ ಜನವರಿ 1ರಿಂದ ಖರೀದಿ ಮಾಡಲಾಗುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ. 29 ಸಾವಿರ ಸಬ್ಸಡಿ, ತ್ರಿ ಚಕ್ರ ವಾಹನಗಳಿಗೆ ರೂ. 57 ಸಾವಿರ ಮತ್ತು ಇವಿ ಕಾರುಗಳಿಗೆ ರೂ. 1.75 ಲಕ್ಷ ಸಬ್ಸಡಿ ಲಭ್ಯವಿರಲಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಮಾಹಾರಾಷ್ಟ್ರ ಸರ್ಕಾರ ಡಿಸೆಂಬರ್ 31ರ ಒಳಗಾಗಿ ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಘೋಷಣೆ ಮಾಡಿದ್ದು, ಹೊಸ ಸಬ್ಸಡಿ ಯೋಜನೆಗಾಗಿ ಕನಿಷ್ಠ ಪ್ರಮಾಣ ಬ್ಯಾಟರಿ ಸಾಮರ್ಥ್ಯವನ್ನು ನಿಗದಿಪಡಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರದ ಹೊಸ ಇವಿ ಪಾಲಿಸಿ ಜಾರಿ ನಂತರ ಎಥರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆ ಅಡಿಯಲ್ಲಿ ರೂ. 15 ಸಾವಿರ ಬೆಲೆ ಕಡಿತ ಮಾಡಿದ್ದ ಎಥರ್ ಕಂಪನಿಯು ಇದೀಗ ಮಾಹಾರಾಷ್ಟ್ರ ಸರ್ಕಾರದ ಸಬ್ಸಡಿ ಯೋಜನೆ ಅಡಿಯಲ್ಲಿ ಇದೀಗ ಮತ್ತೆ ರೂ.22 ಸಾವಿರ ತನಕ ಬೆಲೆ ಕಡಿತ ಮಾಡಿದೆ.

ಹೊಸ ಸಬ್ಸಡಿ ಯೋಜನೆಯಡಿ ಎಥರ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಒಟ್ಟು ರೂ.22 ಸಾವಿರ ಸಬ್ಸಡಿ ದೊರಲಿದ್ದು, ಮಹಾರಾಷ್ಟ್ರ ಸರ್ಕಾರದ ಸಬ್ಸಡಿ ಹೊರತುಪಡಿಸಿ ಕೇಂದ್ರ ಸರ್ಕಾರದ ಸಬ್ಸಡಿಯಲ್ಲಿ ಎಥರ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ. 15 ಸಾವಿರ ಸಬ್ಸಡಿ ಲಭ್ಯವಿರಲಿದೆ.

ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ಈಗಾಗಲೇ ಲಭ್ಯವಿರುವ ಸಬ್ಸಡಿ ಪ್ರಮಾಣವನ್ನು ದ್ವಿಚಕ್ರ ವಾಹನಗಳಿಗಾಗಿ ಶೇ.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಎಥರ್ ಕಂಪನಿಯು ಹೊಸ ಸಬ್ಸಡಿ ಮಾರ್ಗಸೂಚಿಯೆಂತೆ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತೆ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ. 15 ಸಾವಿರದಷ್ಟು ಇಳಿಕೆ ಮಾಡಿದೆ.

ಬೆಲೆ ಪರಿಷ್ಕರಣೆ ನಂತರ ಎಥರ್ 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಬೆಲೆಯು ಮುಂಬೈನಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.03 ಲಕ್ಷ ಮತ್ತು ರೂ. 1.22 ಲಕ್ಷಕ್ಕೆ ನಿಗದಿಯಾಗಿದ್ದು, ಕೇಂದ್ರ ಸರ್ಕಾರದ ಹೊಸ ನಿರ್ಧಾರವನ್ನು ಸ್ವಾಗತಿಸಿರುವ ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ಮತ್ತಷ್ಟು ಹೊಸ ಇವಿ ಮಾರಾಟ ಮಳಿಗೆಗಳೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.


Click it and Unblock the Notifications








