450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ದೀಪಾವಳಿ ವಿಶೇಷವಾಗಿ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದ್ದು, ಹೊಸ ಮತ್ತು ಅಸ್ತಿತ್ವದಲ್ಲಿರುವ ತನ್ನ ಇವಿ ಸ್ಕೂಟರ್ ಮಾಲೀಕರಿಗೆ ಕನೆಕ್ಟೆಡ್ ಫೀಚರ್ಸ್ ಸೌಲಭ್ಯವನ್ನು ಉಚಿತವಾಗಿ ಘೋಷಣೆ ಮಾಡಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕನೆಕ್ಟೆಡ್ ಫೀಚರ್ಸ್ ಸೌಲಭ್ಯವನ್ನು ಜೋಡಣೆ ಮಾಡುತ್ತಿದೆ. ಕನೆಕ್ಟೆ ಫೀಚರ್ಸ್ ಸೌಲಭ್ಯಕ್ಕೆ ಪ್ರತ್ಯೇಕ ಚಂದಾದಾರಿಕೆ ಪಾವತಿ ಮಾಡಬೇಕಿದ್ದು, ಒಂದೇ ಸೂರಿನಡಿ ಹಲವಾರು ತಾಂತ್ರಿಕ ಸೌಲಭ್ಯಗಳ ಮಾಹಿತಿ ನೀಡುವ ಕನೆಕ್ಟೆಡ್ ಫೀಚರ್ಸ್ ಚಂದಾದಾರಿಕೆಯನ್ನು ಕಂಪನಿಯು ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಕನೆಕ್ಟೆಡ್ ಫೀಚರ್ಸ್ ಮಹತ್ವ ಮತ್ತು ಕಾರ್ಯನಿರ್ವಹಣೆಯನ್ನು ಪರಿಚಯಿಸುವ ಸಂಬಂಧ ಕಂಪನಿಯು ದೀಪಾವಳಿ ವಿಶೇಷವಾಗಿ ಬೋನಸ್ ರೂಪದಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿದ್ದು, ಮುಂದಿನ ಆರು ತಿಂಗಳು ಕಾಲ ಉಚಿತವಾಗಿ ಬಳಕೆ ಮಾಡಲು ಅವಕಾಶವಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಕನೆಕ್ಟೆಡ್ ಫೀಚರ್ಸ್ ಮೂಲಕ ನ್ಯಾವಿಗೇಷನ್, ಜಿಯೋ ಫೆನ್ಸ್, ಸರ್ವಿಸ್ ರಿಮೆಂಡರ್, ಆಂಟಿ ಥೆಪ್ಟ್ ಅಲಾರಾಂ, ಲಾಸ್ಟ್ ಪಾರ್ಕಿಂಗ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟರಿಂಗ್, ಮ್ಯೂಸಿಕ್, ರೈಡಿಂಗ್ ಹಿಸ್ಟರಿ ಜೊತೆ ಚಾರ್ಜಿಂಗ್ ಪಾಯಿಂಟ್ ಲಭ್ಯತೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಆ್ಯಪ್ ಮೂಲಕವೇ ಪಡೆದುಕೊಳ್ಳುವುದ ಜೊತೆಗೆ ಹಲವು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದ್ದು, ಕನೆಕ್ಟೆಡ್ ಫೀಚರ್ಸ್ ಅಳವಡಿಕೆಗೆ ಬಳಕೆದಾರರು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಇಂತಿಷ್ಟು ಚಂದಾದಾರಿಕೆ ಪಾವತಿ ಮಾಡಬೇಕಾಗುತ್ತದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಆದರೆ ಹೊಸ ಕನೆಕ್ಟೆಡ್ ಫೀಚರ್ಸ್ ಬಳಕೆಗೆ ಚಂದಾದಾರಿಕೆ ಪಾವತಿ ಅವಶ್ಯವಿರುವುದಿಂದ ಅನೇಕ ವಾಹನ ಮಾಲೀಕರು ಸ್ಕೂಟರ್‌ಗೆ ಅಗತ್ಯವಾಗಿರುವ ಫೀಚರ್ಸ್ ಅನ್ನು ಕೈಬಿಡುತ್ತಿರುವುದಿಂದ ಅದರ ಮಹತ್ವವನ್ನು ತಿಳಿಸಲು ಮುಂದಾಗಿರುವ ಎಥರ್ ಕಂಪನಿಯು ಉಚಿತವಾಗಿ ಆರು ತಿಂಗಳ ಕಾಲ ಕನೆಕ್ಟೆಡ್ ಫೀಚರ್ಸ್ ಬಳಕೆಗೆ ಅವಕಾಶ ನೀಡುತ್ತಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಹೊಸದಾಗಿ ಖರೀದಿ ಮಾಡುತ್ತಿರುವ ಇವಿ ಸ್ಕೂಟರ್ ಮಾಲೀಕರಿಗೆ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಎಲ್ಲಾ ಸ್ಕೂಟರ್ ಮಾಲೀಕರಿಗೆ ಹೊಸ ಫೀಚರ್ಸ್ ಅನ್ನು ಉಚಿತವಾಗಿ ಅಳಡಿಕೆಗೆ ಅವಕಾಶ ನೀಡಿದ್ದು, ಆರು ತಿಂಗಳ ಕಾಲ ಕನೆಕ್ಟೆಡ್ ಫೀಚರ್ಸ್ ಬಳಕೆ ಮಾಡಿದ ನಂತರ ಹೊಸ ಫೀಚರ್ಸ್ ಮುಂದುವರಿಸುವ ಬಗೆಗೆ ಮಾಲೀಕರು ನಿರ್ಧರಿಸಬಹುದಾಗಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಇನ್ನು ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆ ದಿನಂಪ್ರತಿ ಹೆಚ್ಚುತ್ತಿರುವ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ಪ್ರೀಮಿಯಂ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸುಮಾರು ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಇದುವರೆ ಸುಮಾರು 22 ಹೊಸ ಶೋರೂಂಗಳಿಗೆ ಚಾಲನೆ ನೀಡಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ತೆರೆಯುವ ಗುರಿಹೊಂದಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಕರ್ನಾಟಕದಲ್ಲಿ ಇದುವರೆಗೆ ಕಂಪನಿಯು ಬೆಂಗಳೂರಿನಲ್ಲಿ ಎರಡು ಮತ್ತು ಮೈಸೂರಿನಲ್ಲಿ ಒಂದು ಮಾರಾಟ ಮಳಿಗೆ ತೆರೆದಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಕೂಡಾ ಶೋರೂಂ ತೆರೆಯುವ ಸುಳಿವು ನೀಡಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಸದ್ಯ ಕಂಪನಿಯು 2ನೇ ಹಂತದಲ್ಲಿ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದ್ದು, 2ನೇ ಹಂತದ ಮಾರಾಟ ಮಳಿಗೆಗಳ ವಿಸ್ತರಣೆ ನಂತರ ಮತ್ತೆ ಹೊಸ ಯೋಜನೆಯಡಿಯಲ್ಲಿ ಟೈರ್ 1 ಮತ್ತು ಟೈರ್ 2 ನಗರಗಳನ್ನು ಗುರುತಿಸಿ ಮಾರಾಟ ಮಳಿಗೆಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

450 ಪ್ಲಸ್ ಮತ್ತು 450 ಎಕ್ಸ್ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಘೋಷಿಸಿದ ಎಥರ್ ಎನರ್ಜಿ

ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯು ಚುರುಕುಗೊಂಡಿರುವುದರಿಂದ ವಿವಿಧ ನಗರಗಳಲ್ಲಿ ಮತ್ತಷ್ಟು ಹೊಸ ಶೋರೂಂಗಳನ್ನು ತೆರೆಯುವ ಸಿದ್ದತೆಯಲ್ಲಿರುವ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳೊಂದಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

More from DriveSpark

Article Published On: Friday, November 5, 2021, 9:25 [IST]
English summary
Ather energy announced connectivity features will be free for next 6 months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+