ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆ ದಿನಂಪ್ರತಿ ಹೆಚ್ಚುತ್ತಿರುವ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ಪ್ರೀಮಿಯಂ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ(Ather Energy) ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸುಮಾರು ಹತ್ತು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ಕಂಪನಿಯು ಮೈಸೂರಿನಲ್ಲೂ ಹೊಸ ಶೋರೂಂ ಆರಂಭಿಸಿದ್ದು, ಇದೀಗ ರಾಜಧಾನಿ ದೆಹಲಿಯಲ್ಲಿ ಎರಡು ಹೊಸ ಶೋರೂಂಗಳ ಮೂಲಕ ಮಾರಾಟಕ್ಕೆ ಚಾಲನೆ ನೀಡಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಎಥರ್ ಕಂಪನಿಯು ಇದುವರೆ ಸುಮಾರು 22 ಹೊಸ ಶೋರೂಂಗಳಿಗೆ ಚಾಲನೆ ನೀಡಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ತೆರೆಯುವ ಗುರಿಹೊಂದಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಕರ್ನಾಟಕದಲ್ಲಿ ಇದುವರೆಗೆ ಕಂಪನಿಯು ಮೂರು ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಕೂಡಾ ಶೋರೂಂ ತೆರೆಯುವ ಸುಳಿವು ನೀಡಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಸದ್ಯ ಕಂಪನಿಯು 2ನೇ ಹಂತದಲ್ಲಿ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದ್ದು, 2ನೇ ಹಂತದ ಮಾರಾಟ ಮಳಿಗೆಗಳ ವಿಸ್ತರಣೆ ನಂತರ ಮತ್ತೆ ಹೊಸ ಯೋಜನೆಯಡಿಯಲ್ಲಿ ಟೈರ್ 1 ಮತ್ತು ಟೈರ್ 2 ನಗರಗಳನ್ನು ಗುರುತಿಸಿ ಮಾರಾಟ ಮಳಿಗೆಗಳನ್ನು ತೆರೆಯುವ ಸಿದ್ದತೆಯಲ್ಲಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯು ಚುರುಕುಗೊಂಡಿರುವುದರಿಂದ ವಿವಿಧ ನಗರಗಳಲ್ಲಿ ಮತ್ತಷ್ಟು ಹೊಸ ಶೋರೂಂಗಳನ್ನು ತೆರೆಯುವ ಸಿದ್ದತೆಯಲ್ಲಿರುವ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳೊಂದಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಸ್ಟ್ಯಾಂಡರ್ಡ್ 450ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸಬ್ಸಡಿ ನಂತರ 450ಎಕ್ಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,44,500 ಮತ್ತು 450 ಪ್ಲಸ್ ಬೆಲೆಯನ್ನು ರೂ. 1,25,490 ನಿಗದಿಪಡಿಸಲಾಗಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಪ್ರೀಮಿಯಂ ಜೊತೆಗೆ ಬಜೆಟ್ ಬೆಲೆಯ ಸ್ಕೂಟರ್‌ಗಳನ್ನು ಸಹ ಪರಿಚಯಸಲು ಸಿದ್ದವಾಗಿರುವ ಎಥರ್ ಕಂಪನಿಯು ಹೊಸ ಹೊಸ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಹೊಸ ಎಥರ್ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಯೆಂತೆ ಹೊಸ ಸ್ಕೂಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಕಳೆದ ಒಂದು ವರ್ಷದ ಅವಧಿಯ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ಹೊಸ ಇವಿ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡದುಕೊಂಡಿವೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

ಗ್ರಾಹಕರ ಬೇಡಿಕೆಯೆಂತೆ ಹೊಸ ಶೋರೂಂಗಳ ಆರಂಭಕ್ಕೆ ವೇಗ ನೀಡಿದ Ather Energy

ಎಥರ್ ಮುಂಬರುವ ಸ್ಕೂಟರ್ ಮಾದರಿಯು ರೂ. 1 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಅಳವಡಿಸಲಿದೆ.

More from DriveSpark

Article Published On: Thursday, October 21, 2021, 8:45 [IST]
English summary
Ather energy now has 22 experience centers across india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+