ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ(Ather Energy) ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಣೆ ಮಾಡುತ್ತಿದ್ದು, ಇತ್ತೀಚೆಗೆ ಕಂಪನಿಯು ಹೊಸದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಮೊದಲ ಮಾರಾಟ ಮಳಿಗೆಗೆ ಚಾಲನೆ ನೀಡಿತು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಎಥರ್ ಎನರ್ಜಿ ಕಂಪನಿಯು ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿರುವುದಾಗಿ ಭರವಸೆ ನೀಡಿದ್ದು, ಇದುವರೆಗೆ ಕಂಪನಿಯು ಒಟ್ಟು 20 ಮಾರಾಟ ಮಳಿಗೆಗಳನ್ನು ಸೇವೆಗೆ ಮುಕ್ತಗೊಳಿಸಿದೆ. ಶೀಘ್ರದಲ್ಲೇ ಇನ್ನುಳಿದ ಶೋರೂಂಗಳು ಕೂಡಾ ಗ್ರಾಹಕ ಸೇವೆಗಳನ್ನು ಆರಂಭಿಸಲಿದ್ದು, ಕರ್ನಾಟಕದಲ್ಲಿ ಇದುವರೆಗೆ ಕಂಪನಿಯು ಮೂರು ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ನಮ್ಮ ಬೆಂಗಳೂರಿನ ಇಂದಿರಾನಗರದಲ್ಲಿ ಮತ್ತು ಜೆಪಿ ನಗರದ 5ನೇ ಹಂತದಲ್ಲಿ ತಲಾ ಒಂದೊಂದು ಮಾರಾಟ ಮಳಿಗೆಗಳನ್ನು ತೆರೆದಿರುವ ಎಥರ್ ಕಂಪನಿಯು ಇದೀಗ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಹೊನ್ನಸಿರಿ ಎನರ್ಜಿ ಪ್ರೈವೆಟ್ ಲಿಮಿಟೆಡ್ ಜೊತೆಗೂಡಿ ಮೂರನೇ ಮಾರಾಟ ಮಳಿಗೆ ತೆರೆದಿದ್ದು, ಶೀಘ್ರದಲ್ಲೇ ಕಂಪನಿಯು ಹುಬ್ಬಳ್ಳಿಯಲ್ಲೂ ಕೂಡಾ ಮಾರಾಟ ಮಳಿಗೆ ತೆರೆಯುವ ಸಿದ್ದತೆಯಲ್ಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಎಥರ್ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಸೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿನ ಇವಿ ಸ್ಕೂಟರ್ ಬೆಲೆ ಮಾಹಿತಿಯನ್ನು ಈಗಾಗಲೇ ಹಂಚಿಕೊಳ್ಳಲಾಗಿದ್ದು, ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಹುಬ್ಬಳ್ಳಿಯಲ್ಲಿ ಖರೀದಿಗೆ ಪ್ರಕ್ರಿಯೆ ಆರಂಭಿಸಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಹೊಸ ವಾಹನ ಮಾರಾಟ ಮಳಿಗೆಗಳನ್ನು ಎಥರ್ ಎನರ್ಜಿ ಕಂಪನಿಯು ವಿಶೇಷವಾಗಿ 'ಎಕ್ಸ್ಪಿರೆನ್ಸ್ ಸೆಂಟರ್' ಎಂದು ಕರೆಯಲಿದ್ದು, ಎಕ್ಸ್ಪಿರೆನ್ಸ್ ಸೆಂಟರ್‌ನಲ್ಲಿ ಕೇವಲ ವಾಹನ ಖರೀದಿ ಮಾಡುವುದು ಅಷ್ಟೇ ಅಲ್ಲ ನೀವು ಖರೀದಿ ಮಾಡುವ ವಾಹನದ ಕುರಿತಾದ ಇಂಚಿಂಚು ಮಾಹಿತಿಯನ್ನು ಸಹ ನೀವು ಈ ವಾಹನ ಮಾರಾಟ ಮಳಿಗೆಗಳಲ್ಲಿ ತಿಳಿದುಕೊಳ್ಳಬಹುದು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಹೊಸ ವಾಹನ ತಾಂತ್ರಿಕ ಅಂಶಗಳು, ವಾಹನ ಉತ್ಪಾದನಾ ಪ್ರಕ್ರಿಯೆ ಸೇರಿದಂತೆ ಗ್ರಾಹಕರಲ್ಲಿನ ಕುತೂಹಲಕಾರಿ ಪ್ರಶ್ನೆಗಳಿಗೆ ಎಕ್ಸ್ಪಿರೆನ್ಸ್ ಸೆಂಟರ್ ಹೊಸ ಅನುಭವ ನೀಡಲಿದ್ದು, ಗ್ರಾಹಕರಿಗೆ ಹೊಸ ವಾಹನ ಖರೀದಿಯನ್ನು ಸುಲಭಗೊಳಿಸುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಾರ್ಷಿಕ 1 ಲಕ್ಷ ಸ್ಕೂಟರ್ ನಿರ್ಮಾಣ ಗುರಿಯೊಂದಿಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿರುವ ಎಥರ್ ಕಂಪನಿಯು ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿದ್ದು, ಇತ್ತೀಚೆಗೆ ಘೋಷಣೆಯಾದ ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯಂತೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿತಗೊಳಿಸಿ ಗ್ರಾಹಕರ ಸೆಳೆಯುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಸ್ಟ್ಯಾಂಡರ್ಡ್ 450ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸಬ್ಸಡಿ ನಂತರ 450ಎಕ್ಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,44,500 ಮತ್ತು 450 ಪ್ಲಸ್ ಬೆಲೆಯನ್ನು ರೂ. 1,25,490 ನಿಗದಿಪಡಿಸಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಎಥರ್ ಕಂಪನಿಯು ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸುತ್ತಿದ್ದು, ಬಳಕೆದಾರರ ಸ್ನೇಹಿಯಾಗಿರುವ ಹೊಸ ಸ್ಕೂಟರ್‌ಗಳು ಹೊಸ ಮಾರಾಟ ಮಳಿಗೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿವೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಎಥರ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಪ್ರಮಾಣದಲ್ಲಿ ಚಾರ್ಜಿಂಗ್ ನಿಲ್ದಾಣಗಳ ಲಭ್ಯವಾಗುವಂತೆ ನಗರದ ಪ್ರಮುಖ ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸುತ್ತಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೆಚ್ಚಿದಂತೆ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆ ಕಂಡುಬರುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಇದರೊಂದಿಗೆ ಇವಿ ವಾಹನ ಬಳಕೆಯನ್ನು ಹೆಚ್ಚಿಸಲು ಹಲವು ಹೊಸ ಪ್ರೊತ್ಸಾಹ ಕ್ರಮಗಳನ್ನು ಪ್ರಕಟಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ತನ್ನ ಇವಿ ಸ್ಕೂಟರ್ ಮಾಲೀಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದೆ. ನಗರದ ಯಾವುದೇ ಭಾಗದಲ್ಲೂ ಮಕ್ತವಾಗಿ ಸಂಚರಿಸಲು ಹೆಚ್ಚಿನ ಸಂಖ್ಯೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದ್ದು, ಇಲ್ಲಿ ಎಥರ್ ಗ್ರಾಹಕರಿಗೆ ಉಚಿತವಾಗಿ ಚಾರ್ಜಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Ather Energy ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭ!

ಈಗಾಗಲೇ ಆಯ್ದ ನಗರಗಳಲ್ಲಿ ಎಥರ್ ಗ್ರಾಹಕರಿಗಾಗಿ ಕಂಪನಿಯು ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದು, ಇದೀಗ ಮಾರಾಟ ಲಭ್ಯವಿರುವ ಎಲ್ಲಾ ನಗರಗಳಲ್ಲೂ ಉಚಿತ ಫಾಸ್ಟ್ ಚಾರ್ಜಿಂಗ್ ಸೇವೆಗಳನ್ನು ಡಿಸೆಂಬರ್ ಕೊನೆಯ ತನಕ ಅನ್ವಯವಾಗುವಂತೆ ಘೋಷಣೆ ಮಾಡಿದೆ.

More from DriveSpark

Article Published On: Monday, October 18, 2021, 14:14 [IST]
English summary
Ather energy opens first experience center in mysore city details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+