ಶೀಘ್ರದಲ್ಲೇ ಬಜೆಟ್ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ Ather Energy
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ(Ather Energy) ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಎಲೆಕ್ಟ್ರಿಕ್ ಉತ್ಪನ್ನಗಳಿಗಾಗಿ ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಪೇಟೆಂಟ್ ದಾಖಲಿಸಿದೆ.

ಎಥರ್ ಎನರ್ಜಿ(Ather Energy) ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ 450 ಪ್ಲಸ್(450 Plus) ಮತ್ತು 450ಎಕ್ಸ್(450X) ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆಯಲ್ಲಿ ಮಾರಾಟಗೊಳ್ಳುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಪ್ರೀಮಿಯಂ ಜೊತೆಗೆ ಬಜೆಟ್ ಬೆಲೆಯ ಸ್ಕೂಟರ್‌ಗಳನ್ನು ಸಹ ಪರಿಚಯಸಲು ಸಿದ್ದವಾಗಿರುವ ಎಥರ್ ಕಂಪನಿಯು ಹೊಸ ಹೊಸ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಹೊಸ ಎಥರ್ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಯೆಂತೆ ಹೊಸ ಸ್ಕೂಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಕಳೆದ ಒಂದು ವರ್ಷದ ಅವಧಿಯ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ಹೊಸ ಇವಿ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡದುಕೊಂಡಿವೆ.

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

450 ಪ್ಲಸ್ ಮತ್ತು 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳನ್ನು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರಾಟ ಮಾಡಲಿರುವ ಎಥರ್ ಕಂಪನಿಯು ಬಜೆಟ್ ಬೆಲೆಯ ಇವಿ ಸ್ಕೂಟರ್‌ಗಳನ್ನು ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಉತ್ತಮ ಮೈಲೇಜ್ ಹೊಂದಿರುವ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ.

ಎಥರ್ ಮುಂಬರುವ ಸ್ಕೂಟರ್ ಮಾದರಿಯು ರೂ. 1 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಅಳವಡಿಸಲಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಓಲಾ ಮತ್ತು ಸಿಂಪಲ್ ಎನರ್ಜಿ ಕಂಪನಿಗಳು ಎಥರ್ ಕಂಪನಿಗೆ ಪೈಪೋಟಿಯಾಗಿ ಆಕರ್ಷಕ ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ 120 ಕಿ.ಮೀ 230 ಕಿ.ಮೀ ಮೈಲೇಜ್ ಪ್ರೇರಿತ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಎಥರ್ ಕಂಪನಿಯು ಸಹ ಪ್ರತಿ ಸ್ಪರ್ಧಿ ಮಾದರಿಗಳಿಗೆ ಪೈಪೋಟಿ ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಸ್ಟ್ಯಾಂಡರ್ಡ್ 450ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಸಬ್ಸಡಿ ಒಳಗೊಂಡು 450ಎಕ್ಸ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.44 ಲಕ್ಷಕ್ಕೆ ಮತ್ತು 450 ಪ್ಲಸ್ ಬೆಲೆಯನ್ನು ರೂ. 1.25 ಲಕ್ಷ ಬೆಲೆ ಹೊಂದಿವೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಥರ್ ಕಂಪನಿಯು ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಿದ್ದು, ಹೊಸ ಸ್ಕೂಟರ್ ಗುಣಮಟ್ಟ ಮತ್ತು ಅತ್ಯುತ್ತಮ ಗ್ರಾಹಕರ ಸೇವೆಗಳೊಂದಿಗೆ ಪ್ರೀಮಿಯಂ ಸ್ಕೂಟರ್ ಬಳಕೆದಾರರ ಆಯ್ಕೆ ಅಗ್ರಸ್ಥಾನ ಪಡೆದುಕೊಂಡಿವೆ.

ಆದರೆ ಹೊಸದಾಗಿ ಬಿಡುಗಡೆಯಾಗಿರುವ ಓಲಾ ಮತ್ತು ಸಿಂಪಲ್ ಎನರ್ಜಿ ಕಂಪನಿಯು ಇವಿ ಸ್ಕೂಟರ್‌ಗಳು ಎಥರ್ ಕಂಪನಿಯ ಸ್ಕೂಟರ್‌ಗಳ ಮಾರಾಟಕ್ಕೆ ಹೊಡೆತ ನೀಡುವ ಎಲ್ಲಾ ಸಾಧ್ಯತೆಗಳಿದ್ದು, ಎಥರ್ ಕಂಪನಿಯು ಸಹ ಇದೀಗ ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಫೀಚರ್ಸ್ ಮತ್ತು ಮೈಲೇಜ್ ಅಳವಡಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ.

ಹೀಗಾಗಿ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಅತ್ಯಧಿಕ ಮೈಲೇಜ್ ಮತ್ತು ಬಜೆಟ್ ಬೆಲೆಯಲ್ಲಿ ಅಳವಡಿಸಿಕೊಳ್ಳಬಹುದಾದ ಫೀಚರ್ಸ್‌ಗಳೊಂದಿಗೆ ಹೊಸ ಇವಿ ಸ್ಕೂಟರ್ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದು, ಎಥರ್ ಹೊಸ ಇವಿ ಉತ್ಪನ್ನಗಳಲ್ಲಿ ಇವಿ ಬೈಕ್, ಇವಿ ಮ್ಯಾಕ್ಸಿ ಸ್ಕೂಟರ್‌ಗಳನ್ನು ನೀರಿಕ್ಷೆ ಮಾಡಲಾಗಿದೆ.


Click it and Unblock the Notifications








