ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಲಾಕ್‌ಡೌನ್ ಹಿನ್ನಲೆಯಲ್ಲಿ ತನ್ನ ದ್ವಿಚಕ್ರ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ಹೆಚ್ಚಿಸಿದ್ದು, ಲಾಕ್‌ಡೌನ್ ಅವಧಿಯಲ್ಲಿ ಮುಗಿದುಹೋಗಿರುವ ವಾರಂಟಿಗಳನ್ನು ಮುಂದಿನ ಎರಡು ತಿಂಗಳ ಅವಧಿಗೆ ವಿಸ್ತರಿಸಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಳ್ಳಲಿರುವ ವಾಹನಗಳ ವಾರಂಟಿ ಅವಧಿಯನ್ನು ಬಹುತೇಕ ವಾಹನ ತಯಾಕರ ಕಂಪನಿಗಳು ವಿಸ್ತರಣೆ ಮಾಡಿದ್ದು, ಹೊಸ ವಾಹನಗಳ ನಿಗದಿತ ಅವಧಿಯ ಸೇವೆಗಳನ್ನು ಪಡೆಯಲು ಲಾಕ್‌ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಆದರೆ ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳಲಿರುವ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಆಫರ್ ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ಬಜಾಜ್ ಆಟೋ ಸೇರಿದಂತೆ ಬಹುತೇಕ ವಾಹನ ತಯಾರಕ ಕಂಪನಿಗಳು ವಾರಂಟಿ ವಿಸ್ತರಿಸಿ ಮಹತ್ವದ ನಿರ್ಧಾರ ಪ್ರಕಟಿಸಿವೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವುದನ್ನು ತಪ್ಪಿಸಲು ಗ್ರಾಹಕರಿಗೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ವಾರಂಟಿ ಅವಧಿಯನ್ನು ಘೋಷಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯಗೊಳ್ಳಬೇಕಿರುವ ಹೊಸ ಕಾರುಗಳ ವಾರಂಟಿ ಅವಧಿಯನ್ನು ಜುಲೈ 31ರ ತನಕ ಮುಂದೂಡಲಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾರಂಟಿ ಮುಕ್ತಾಯಗೊಳ್ಳುವುದನ್ನು ತಪ್ಪಿಸಲು ವಾರಂಟಿ ವಿಸ್ತರಿಸಲಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ವಾರಂಟಿ ಅವಧಿ ವಿಸ್ತರಣೆಯಾಗಿರುವುದರಿಂದ ವಾರಂಟಿ ಪ್ಯಾಕೇಜ್‌ನಲ್ಲಿರುವ ಸೇವೆಗಳನ್ನು ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಪಡೆದುಕೊಳ್ಳಬಹುದಾಗಿದ್ದು, ವಾರಂಟಿ ಅವಧಿಯನ್ನು ವಿಸ್ತರಿಸಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಜೊತೆಗೆ ಕೋವಿಡ್ 2ನೇ ಅಲೆ ಹೊಡೆತಕ್ಕೆ ದೇಶಾದ್ಯಂತ ದಿನಂಪ್ರತಿ ಸಾವಿರಾರು ಜನ ಪ್ರಾಣಕಳೆದುಕೊಳ್ಳುತ್ತಿದ್ದು, ದುಡಿಯುವ ಮನೆ ಯಜಮಾನನ್ನು ಕಳೆದಕೊಂಡಿರುವ ಅದೆಷ್ಟು ಕುಟುಂಬಗಳು ಅಕ್ಷರಶಃ ಅನಾಥವಾಗಿವೆ. ಹೀಗಿರುವಾಗ ಬಜಾಜ್ ಆಟೋ ಕಂಪನಿಯು ತನ್ನ ಉದ್ಯೋಗಿಗಳ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಜೀವ ಮತ್ತು ಜೀವನ ಭದ್ರತೆ ಪ್ರತಿಯೊಬ್ಬರಿಗೂ ಮುಖ್ಯವಾಗಿರುವಾಗ ದುಡಿವ ಸ್ಥಳಗಳಲ್ಲಿ ವೈರಸ್ ಹರಡುವಿಕೆಯಿಂದ ಅದೆಷ್ಟೋ ಜೀವಗಳು ಬಲಿಯಾಗಿದ್ದು, ಬಜಾಜ್ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸಾವಿರಾರು ಉದ್ಯೋಗಿಗಳಿಗೂ ಕೋವಿಡ್ ಹರಡಿಕೊಳ್ಳುತ್ತಿದೆ. ಕೋವಿಡ್‌ನಿಂದಾಗಿ ಬಹುತೇಕ ಉದ್ಯೋಗಿಗಳು ಗುಣಮುಖರಾದರೂ ಕೆಲವು ಉದ್ಯೋಗಿಗಳು ಪ್ರಾಣಕಳೆದುಕೊಂಡಿದ್ದು, ಮನೆ ಯಜಮಾನನ್ನು ಕಳೆದುಕೊಂಡಿರುವ ಕುಟುಂಬಗಳು ಇದೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಇದರಿಂದ ಪ್ರಾಣಕಳೆದುಕೊಂಡಿರುವ ಉದ್ಯೋಗಿಗಳ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿರುವ ಟಿವಿಎಸ್ ಕಂಪನಿಯು ಆರ್ಥಿಕ ಸಂಕಷ್ಟದ ನಡುವೆಯೂ ಮೃತ ಉದ್ಯೋಗಿಗಳ ಸಂಬಳವನ್ನು ನಿಲ್ಲಿಸದೆ ಮುಂದಿನ ಎರಡು ವರ್ಷಗಳ ಕಾಲ ಅವರ ಕುಟುಂಬಗಳಿಗೆ ನೆರವು ನೀಡಲಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಜೊತೆಗೆ ಮೃತರ ಕುಟಂಬದಲ್ಲಿನ ಮಕ್ಕಳ ಶಿಕ್ಷಣಕ್ಕೂ ಸಹಕಾರ ನೀಡುವುದಾಗಿ ಹೇಳಿಕೊಂಡಿರುವ ಕಂಪನಿಯು ಪ್ರತಿ ವರ್ಷ ಪ್ರತಿ ಮಗುವಿಗೆ ರೂ. 1 ಲಕ್ಷ ನೆರವು ಘೋಷಣೆ ಮಾಡಿದ್ದು, ನೆರವಿನ ಹಸ್ತವನ್ನು ಖಾಯಂ ಉದ್ಯೋಗಿಗಳಿಗೆ ಅನ್ವಯವಾಗುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಲಾಕ್‌ಡೌನ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳ ವಾರಂಟಿ ವಿಸ್ತರಿಸಿದ ಬಜಾಜ್ ಆಟೋ

ಇದಲ್ಲದೆ ಬಜಾಜ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಉದ್ಯೋಗಿಗೂ ಸಂಕಷ್ಟ ಸಂದರ್ಭದಲ್ಲಿ ಗರಿಷ್ಠ ಪರಿಹಾರ ಒಳಗೊಂಡ ಜೀವ ವಿಮೆ ವಿತರಿಸಿದ್ದು, ಕೋವಿಡ್ ಸೋಂಕು ತಗುಲಿದ ಉದ್ಯೋಗಿಗಳಿಗೆ ಎಲ್ಲಾ ರೀತಿಯ ನೆರವುಗಳನ್ನು ತುರ್ತುಗಾಗಿ ನೀಡಿ ಸಹಕರಿಸುತ್ತಿದೆ.

Article Published On: Wednesday, May 19, 2021, 13:09 [IST]
English summary
Bajaj Auto Extends Free Service Period In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+