ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಪಲ್ಸರ್ ಸರಣಿಯಲ್ಲಿ ಹೊಸದಾಗಿ ಪಲ್ಸರ್ ಎನ್ಎಸ್ 125 ಪ್ರೀಮಿಯಂ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 93,690 ಬೆಲೆ ಹೊಂದಿದೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

125 ಸಿಸಿ ಮಾದರಿಗಳಲ್ಲಿನ ಪ್ರೀಮಿಯಂ ಫೀಚರ್ಸ್‌ಗಳ ಬೇಡಿಕೆ ಆಧಾರದ ಮೇಲೆ ಬಜಾಜ್ ಆಟೋ ಕಂಪನಿಯು ಪಲ್ಸರ್ ಎನ್ಎಸ್ 125 ಬೈಕ್ ಬಿಡುಗಡೆ ಮಾಡಿದ್ದು, ಎನ್ಎಸ್ ಮಾದರಿಗಳು ಪ್ರೀಮಿಯಂ ಬೈಕ್ ಸರಣಿಯಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿರುವುದೇ ಹೊಸ ಬೈಕ್ ಮಾದರಿಯನ್ನು ಎಂಟ್ರಿ ಲೆವಲ್‌ನಲ್ಲೂ ಪರಿಚಯಿಸಲಾಗಿದೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯನ್ನು ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಅಭಿವೃದ್ದಿಪಡಿಸಿರುವ ಬಜಾಜ್ ಆಟೋ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಜೊಡಿಸಿದ್ದು, ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಹೊಸ ಬೈಕ್ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಬೈಕಿನಲ್ಲಿ ಬಜಾಜ್ ಕಂಪನಿಯು ಅತ್ಯುತ್ತಮ ನಿರ್ವಹಣೆ ಮತ್ತು ಸ್ಥಿರತೆಗಾಗಿ ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‌ಗಳಾದ ಪೆರಿಮೀಟರ್ ಫ್ರೆಮ್ ಮತ್ತು ನೈಟ್ರಾಕ್ಸ್ ಮೊನೊ-ಶಾಕ್ ಅಬ್ಸಾರ್ಬರ್‌ನಂತಹ ಪ್ರಮುಖ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ನೈಟ್ರಾಕ್ಸ್ ಮೊನೊ-ಶಾಕ್ ಅಬ್ಸಾರ್ಬರ್‌ ಸೌಲಭ್ಯವು ಹೈ ಸ್ಪೀಡ್ ಸಂದರ್ಭದಲ್ಲೂ ಬೈಕಿಗೆ ಉತ್ತಮ ಸ್ಥಿರತೆ ನೀಡಲಿದ್ದು, ಶಾರ್ಪ್ ಹ್ಯಾಡ್ಲಿಂಗ್ ಮತ್ತು ಉತ್ತಮ ಆಸನ ಸೌಲಭ್ಯವು ಅರಾಮದಾಯಕ ಬೈಕ್ ಸವಾರಿಗೆ ಪೂರಕವಾಗಿವೆ. ಹಾಗೆಯೇ ಹೊಸ ಬೈಕಿನಲ್ಲಿ ಸಿಗ್ನಿಚರ್ ಹೆಡ್‌ಲ್ಯಾಂಪ್ ಜೊತೆ ಟ್ವಿನ್ ಪೈಲೆಟ್ ಲ್ಯಾಂಪ್ಸ್, ಟ್ವಿನ್ ಸ್ಟ್ರೀಪ್ ಎಲ್ಇಡಿ ಟೈಲ್‌ಲ್ಯಾಂಪ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಆಕರ್ಷಕ ಬೆಲ್ಲಿ ಪ್ಯಾನ್ ಪಡೆದುಕೊಂಡಿದೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಎಂಜಿನ್ ಮತ್ತು ಪರ್ಫಾಮೆನ್ಸ್

ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯಲ್ಲಿ ಹೊಸ ಎಮಿಷನ್ ಪ್ರೇರಿತ ಡಿಟಿಎಸ್-ಐ 125 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 12 ಬಿಎಚ್‌ಪಿ ಮತ್ತು 11 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಈ ಮೂಲಕ ಹೊಸ ಬೈಕ್ ಮಾದರಿಯು 125 ಸಿಸಿ ವಿಭಾಗದ ಇತರೆ ಬೈಕ್ ಮಾದರಿಗಳಿಂತಲೂ ಉತ್ತಮ ಎಂಜಿನ್ ಆಯ್ಕೆ ಹೊಂದಿರುವುದು ಖಚಿತವಾಗಿದ್ದು, ಹೊಸ ಬೈಕ್ ಮಾದರಿಯಲ್ಲಿ ಸಾಮಾನ್ಯ ಮಾದರಿಯ 150 ಸಿಸಿ ಬೈಕ್ ಮಾದರಿಯಲ್ಲಿರುವ ಫೀಚರ್ಸ್‌ಗಳಿವೆ.

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಬೈಕ್ ಮೂಲಕ ಬೆಲೆ ಮತ್ತು ಫೀಚರ್ಸ್ ಎರಡು ಕಡೆಗಳಲ್ಲೂ ಗಮನಹರಿಸಿರುವ ಬಜಾಜ್ ಕಂಪನಿಯು ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಬೈಕಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಾಲ್ಕು ಬಣ್ಣಗಳ ಆಯ್ಕೆ ನೀಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ವಿನ್ಯಾಸದ ಪಲ್ಸರ್ ಎನ್ಎಸ್ 125 ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯು ಬೀಚ್ ಬ್ಲ್ಯೂ, ಫ್ಲೆರಿ ಆರೇಂಜ್, ರೆಡ್ ಮತ್ತು ಗ್ರೆ ಬಣ್ಣಗಳಲ್ಲಿ ಲಭ್ಯವಿದ್ದು, ಸ್ಪೋರ್ಟಿ ವಿನ್ಯಾಸ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಹೊಸ ಬೈಕ್ ಮಾದರಿಯು ಕೆಟಿಎಂ 125 ಡ್ಯೂಕ್ ಮಾದರಿಗಿಂತಲೂ ರೂ.50 ಸಾವಿರ ಕಡಿಮೆ ಬೆಲೆ ಹೊಂದಿದೆ.

Most Read Articles

Kannada
English summary
Bajaj Auto launches the new Pulsar NS 125. Read in Kannada.
Story first published: Tuesday, April 20, 2021, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X