ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಹೊಸ ನೇಕೆಡ್ ಸ್ಟ್ರೀಟ್ ಬೈಕಿನ ಬಗ್ಗೆ ಸುಳಿವು ನೀಡಿದೆ. ಇನ್ಸ್ಟಾಗ್ರಾಮ್ ಮೂಲಕ ಟೀಸರ್ ಚಿತ್ರವನ್ನು ಶೇರ್ ಮಾಡುವ ಮೂಲಕ ಕಂಪನಿಯು ಹೊಸ ಬೈಕ್ ಮಾದರಿಯ ಬಗ್ಗೆ ಸುಳಿವು ನೀಡಿದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಜನಪ್ರಿಯ ಎನ್‌ಎಸ್ ಸರಣಿಯ ಕ್ವಾರ್ಟರ್ ಲೀಟರ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಕಂಪನಿಯು ಈ ಹಿಂದೆಯೇ ನಿರ್ಧರಿಸಿತ್ತು. ಇದರಿಂದ ಹೊಸ ಟೀಸರ್ ಮುಂಬರುವ ಎನ್ಎಸ್ 250 ಮಾದರಿಯನ್ನು ಸೂಚಿಸುತ್ತದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಟೀಸರ್ ಚಿತ್ರದಲ್ಲಿ ಬಿಳಿ ರಿಮ್ ಸ್ಟಿಕ್ಕರ್‌ಗಳಂತೆ ಕಾಣುವ ಕಪ್ಪು ವ್ಹೀಲ್ ವಿನ್ಯಾಸವು ಎನ್ಎಸ್ ಸರಣಿಯನ್ನು ಹೋಲುತ್ತದೆ. ಎನ್ಎಸ್ ಸರಣಿ ಬೈಕ್'ಗಳು ಎಂಜಿನ್ ಅಂಡರ್ ಗಾರ್ಡ್ ಹಾಗೂ ಹಿಂಭಾಗದ ನಂಬರ್ ಪ್ಲೇಟ್ ಹೋಲ್ಡರ್ ವಿನ್ಯಾಸದಲ್ಲಿ ವೈಟ್ ಅಸೆಂಟ್ ಅನ್ನು ಸಹ ಹೊಂದಿವೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಬೈಕ್ ಇತ್ತೀಚೆಗೆ ಬಿಡುಗಡೆಯಾದ ಎನ್‌ಎಸ್‌ 125 ಬೈಕಿನ ನವೀಕರಿಸಿದ ಆವೃತ್ತಿಯೂ ಆಗಿರಬಹುದು. ಈ ಬೈಕ್ ಪೂರ್ತಿ ಬೂದು ಬಣ್ಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಎನ್ಎಸ್ ಸರಣಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಕಾರಣಕ್ಕೆ ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಮಾದರಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಬಜಾಜ್ 250 ಸಿಸಿ ಬೈಕಿನ ಟೆಸ್ಟ್ ರನ್ ಅನ್ನು ಆರಂಭಿಸಿದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಬಜಾಜ್ ಕಂಪನಿಯು ಹೊಸ ತಲೆಮಾರಿನ ಪಲ್ಸರ್ ಸರಣಿಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಎನ್‌ಎಸ್‌ 250 ಹಾಗೂ ಆರ್‌ಎಸ್‌ 250 ಬೈಕುಗಳು ಬಿಡುಗಡೆಯಾಗಲಿವೆ ಎಂದು ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಹಾಗಾದರೆ ಹೊಸ ಟೀಸರ್ ಎನ್‌ಎಸ್‌ 125 ಬೈಕಿನ ಹೊಸ ಮಾದರಿಯಾಗಿರಬಹುದು. ಬಜಾಜ್ ಪಲ್ಸರ್ ಎನ್ಎಸ್ 250 ಪರೀಕ್ಷಾ ಮೂಲ ಮಾದರಿಯು ಈಗಿರುವ ಎನ್ಎಸ್ 200 ಬೈಕಿಗಿಂತ ಹೆಚ್ಚಿನ ವಿನ್ಯಾಸ ವಿವರಗಳನ್ನು ತೋರಿಸುತ್ತದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಈ ಬೈಕ್ ವಿಭಿನ್ನ ಸ್ಟೈಲಿಂಗ್ ಅಂಶ, ಲೋ ಪೊಸಿಷನ್ ಹೆಡ್‌ಲ್ಯಾಂಪ್ ಹಾಗೂ ಅಗ್ರೇಸಿವ್ ಆದ ಟೇಲ್ ಸೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿರುವ ಎಂಜಿನ್'ನಲ್ಲಿ ಲಿಕ್ವಿಡ್ ಕೂಲ್ ಬದಲು ಏರ್ / ಆಯಿಲ್ ಕೂಲ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ.

ಹೊಸ ಬೈಕಿನ ಟೀಸರ್ ಚಿತ್ರ ಬಿಡುಗಡೆಗೊಳಿಸಿದ ಬಜಾಜ್ ಆಟೋ

ಹೊಸ 250 ಸಿಸಿ ಮಾದರಿ ಬೈಕ್'ಗಳು ಪಲ್ಸರ್ 220 ಎಫ್ ಹಾಗೂ ಡಾಮಿನೇಟರ್ 250 ಬೈಕುಗಳ ನಡುವೆ ಇರಲಿವೆ. ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಿದರೂ ಯಮಹಾ ಕಂಪನಿಯು ತನ್ನ ಎಫ್‌ಝಡ್ 25 ಬೈಕಿನ ಬೆಲೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಬಜಾಜ್‌ ಕಂಪನಿಗೆ ಹಿನ್ನಡೆಯಾಗಬಹುದು.

Most Read Articles

Kannada
English summary
Bajaj Auto releases new teaser image for upcoming bike in Instagram. Read in Kannada.
Story first published: Friday, July 2, 2021, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X