ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ದೇಶಾದ್ಯಾಂತ ಎಲೆಕ್ಟ್ರಿಕ್ ವಾಹನ ಮಾರಾಟವು ತೀವ್ರವಾಗಿ ಬೆಳವಣಿಗೆ ಕಾಣುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಬಜಾಜ್ ಆಟೋ ಕಂಪನಿಯು ಕೂಡಾ ಚೇತಕ್ ಎಲೆಕ್ಟ್ರಿಕ್ ಮಾದರಿಯೊಂದಿಗೆ ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಶೀಘ್ರದಲ್ಲೇ ಮತ್ತೊಂದು ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಹೊಸ ಹೆಸರನ್ನು ನೊಂದಣಿ ಮಾಡಲಾಗಿದ್ದು, ಹೊಸ ಇವಿ ಬೈಕ್ ಮಾದರಿಯನ್ನು ಫ್ರೀರೈಡರ್ ಎಂದು ಉಲ್ಲೇಖಿಸಲಾಗಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಬಜಾಜ್ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರೂ. 1.10 ಲಕ್ಷದಿಂದ ರೂ. 1.30 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ 120ರಿಂದ 150 ಕಿ.ಮೀ ಹಿಂದಿರುಗಿಸಬಹುದಾಗಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಹೊಸ ಬೈಕ್ ಮಾದರಿಯನ್ನು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅಭಿವೃದ್ದಿಗೊಳಿಸಲಾಗುತ್ತಿದ್ದು, ಸದ್ಯ ಉತ್ಪಾದನಾ ಹಂತದಲ್ಲಿರುವ ಹೊಸ ಬೈಕ್ ಮಾದರಿಯನ್ನು ಕಂಪನಿಯು ಶೀಘ್ರದಲ್ಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಹೀರೋ ಎಲೆಕ್ಟ್ರಿಕ್ ಮತ್ತು ಒಕಿನಾವ ನಡುವೆ ಉತ್ತಮ ಪೈಪೋಟಿಯಿದ್ದು, ಚೇತಕ್ ಇವಿ ಮಾದರಿಯೊಂದಿಗೆ ಬಜಾಜ್ ಕಂಪನಿಯು ಇತ್ತೀಚೆಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಕಳೆದ ವರ್ಷ ಫೆಬ್ರವರಿಯಲ್ಲೇ ಬಿಡುಗಡೆಗೊಂಡಿದ್ದ ಬಜಾಜ್ ಚೇತಕ್ ಇವಿ ಸ್ಕೂಟರ್ ಮಾದರಿಯು ಕಾರಣಾಂತರಗಳಿಂದ ಮಧ್ಯಂತರ ಅವಧಿಯಲ್ಲಿ ಸ್ಥಗಿತಗೊಂಡು ಪುನಃ ಮಾರಾಟ ಆರಂಭವಾಯಿತು. ಸೀಮಿತ ಸಂಖ್ಯೆಯಲ್ಲಿ ಮಾರಾಟ ಹೊಂದಿದ್ದ ಹೊಸ ಸ್ಕೂಟರ್ ಈ ವರ್ಷದ ಆರಂಭದಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಮಾರ್ಚ್ ಅವಧಿಯಲ್ಲಿ ಕೇವಲ 90 ಯುನಿಟ್ ಮಾರಾಟಗೊಂಡಿದ್ದ ಚೇತಕ್ ಇವಿ ಮಾದರಿಯು ಏಪ್ರಿಲ್‌ನಲ್ಲಿ 508 ಯುನಿಟ್ ಮಾರಾಟಗೊಳ್ಳುವ ಮೂಲಕ ಬಿಡುಗಡೆ ನಂತರ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಹೊಸ ಚೇತಕ್ ಇವಿ ಮಾದರಿಯು ಅರ್ಬೈನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಶೋರೂಂ ಪ್ರಕಾರ ರೂ. 1.42 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ.1.44 ಲಕ್ಷ ಬೆಲೆ ಹೊಂದಿದ್ದು, ಕಳೆದ ವಾರವಷ್ಟೇ ಹೊಸ ಸ್ಕೂಟರ್ ಬೆಲೆ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ತುಸು ಹೊರೆಎನ್ನಿಸಲಿದೆ.

ಚೇತಕ್ ಇವಿ ನಂತರ ಮತ್ತೊಂದು ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದವಾದ ಬಜಾಜ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಚೇತಕ್ ಇವಿ ಸ್ಕೂಟರ್‌ನಲ್ಲಿ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದ್ದು, ಈ ಆ್ಯಪ್‍ ಮೂಲಕ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್ ಬಳಕೆ ಮಾಡಿಕೊಳ್ಳಬಹುದಾಗಿದೆ.

Article Published On: Thursday, June 24, 2021, 14:57 [IST]
English summary
Bajaj Trademark Filed For New Electric Motorcycle. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+