ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರ ಹೆಚ್ಚಿರುವುದರಿಂದ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರವು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಹೀಗಾಗಿ ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಯು ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಅತಿ ದೊಡ್ದ ವಾಹನ ಉತ್ಪಾದನಾ ಕಂಪನಿಯಾಗಿರುವ ಬಜಾಜ್ ಆಟೋ ಮಾತೃಸಂಸ್ಥೆಯಾದ ಬಜಾಜ್ ಗ್ರೂಪ್ ಕಂಪನಿಯು ಕೂಡಾ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಹಣಾಕಾಸು ನೆರವು ನೀಡಿದೆ.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

2020ರಲ್ಲಿ ಕೋವಿಡ್ ಹೆಚ್ಚಳ ಸಂದರ್ಭದಲ್ಲೂ ಬರೋಬ್ಬರಿ ರೂ.100 ಕೋಟಿ ದೇಣಿಗೆ ನೀಡಿದ್ದ ಬಜಾಜ್ ಗ್ರೂಪ್ ಇದೀಗ 2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ರೂ.200 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಪಿಎಂ ಕೇರ್ಸ್ ಫಂಡ್(ಪ್ರಧಾನ ಮಂತ್ರಿ ಪರಿಹಾರ ನಿಧಿ)ಗೆ ದೇಣಿಗೆ ನೀಡಲಾಗಿದೆ. ದೇಣಿಗೆಯಲ್ಲಿ ಅರ್ಧದಷ್ಟು ಹಣಕಾಸು ನೆರವು ನೀಡಲಿರುವ ಬಜಾಜ್ ಗ್ರೂಪ್ ಇನ್ನುಳಿದ ಹಣದಲ್ಲಿ ವಿವಿಧ ಎನ್‌ಜಿಎಗಳ ಮೂಲಕ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲಿದೆ.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಎನ್‌ಜಿಓಗಳ ಮೂಲಕ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವು ನೀಡಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಕಳೆದ ಬಾರಿಯು ಕೂಡಾ ಕೂಡಾ ದೇಣಿಗೆ ಹಣದಲ್ಲಿ ಅರ್ಧದಷ್ಟು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಮತ್ತು ಇನ್ನುಳಿದ ಹಣಕಾಸ ನೆರವನ್ನು ಎನ್‌ಜಿಓಗಳ ಮೂಲಕ ಸಾವಿರಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಲಕ್ಷಾಂತರ ಕೂಲಿ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಿತ್ತು.

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಇದೀಗ ಕೋವಿಡ್ 2ನೇ ಅಲೆಯಿಂದಾಗಿ ಇಡೀ ದೇಶವೇ ಮತ್ತೊಮ್ಮೆ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದು, ಆರ್ಥಿಕ ಚಟುವಟಿಕೆಯಿಲ್ಲದೆ ನಷ್ಟ ಅನುಭವಿಸುತ್ತಿದ್ದರೂ ಸಾಮಾಜಿಕ ಜವಾಬ್ದಾರಿ ಅಡಿ ಹಲವು ವಾಹನ ಕಂಪನಿಗಳು ವಿವಿಧ ರೀತಿಯ ಸಹಕಾರ ಘೋಷಿಸಿವೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕೋವಿಡ್ ಸಂಕಷ್ಟ: ವೈದ್ಯಕೀಯ ಸೇವೆಗಳಿಗಾಗಿ ರೂ. 200 ಕೋಟಿ ದೇಣಿಗೆ ನೀಡಿದ ಬಜಾಜ್ ಆಟೋ

ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕವಾಗಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

Article Published On: Wednesday, May 5, 2021, 8:45 [IST]
English summary
Bajaj Auto Pledges Rs 200 Crores To Help India Fight Against Covid-19 Pandemic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+