ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪ್ಲಾಟಿನಾ 110 ಇಎಸ್ (ಎಲೆಕ್ಟ್ರಿಕ್ ಸ್ಟಾರ್ಟ್) ಬೈಕನ್ನು ಹೊಸ ಬಣ್ಣಗಳೊಂದಿಗೆ ಬಿಡುಗಡೆಗೊಳಿಸಲಿದೆ. ಈ ಹೊಸ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್ ಡ್ರಮ್ ಮತ್ತು ಡಿಸ್ಕ್ ರೂಪಾಂತರಗಳಲ್ಲಿ ಬರುತ್ತದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

2022ರ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್ 6 ಹೊಸ ಬಣ್ಣಗಳನ್ನು ಪಡೆದಿದೆ, ಎರಡೂ ರೂಪಾಂತರಗಳಿಗೆ ತಲಾ ಮೂರು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಈ ಬೈಕಿನ ಡ್ರಮ್ ರೂಪಾಂತರವು ಎಬೊನಿ ಬ್ಲ್ಯಾಕ್/ಬ್ಲೂ, ಕಾಕ್ಟೈಲ್ ವೈನ್ ರೆಡ್/ಆರೆಂಜ್ ಮತ್ತು ಎಬೊನಿ ಬ್ಲ್ಯಾಕ್/ರೆಡ್ ಅನ್ನು ಬಣ್ಣಗಳಾದರೆ, ಡಿಸ್ಕ್ ರೂಪಾಂತರವು ವಾಲ್ಕನಿಕ್ ಮ್ಯಾಟ್ ರೆಡ್, ಬೀಚ್ ಬ್ಲೂ ಮತ್ತು ಚಾರ್ಕೋಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಪ್ಲಾಟಿನಾ 110 ಇಎಸ್ ಬೈಕಿನ ಎರಡೂ ರೂಪಾಂತರಗಳನ್ನು ಮತ್ತಷ್ಟು ಪ್ರತ್ಯೇಕಿಸುವ ಅಂಶವೆಂದರೆ ಕಪ್ಪು-ಬಣ್ಣದ ಅಲಾಯ್ ವ್ಹೀಲ್ ಗಳು, ಇವುಗಳನ್ನು ಡ್ರಮ್ ರೂಪಾಂತರದಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಡಿಸ್ಕ್ ರೂಪಾಂತರದ ಬಿಳಿ ಬಣ್ಣದ ರಿಮ್ ನೊಂದಿಗೆ ಬರುತ್ತದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಈ ಬೈಕಿನ ನಕಲ್ ಗಾರ್ಡ್‌ಗಳು ಈಗ ಬಜಾಜ್ ಪ್ಲಾಟಿನಾ 110 ಇಎಸ್‌ನಲ್ಲಿ ಸ್ಟ್ಯಾಂಡರ್ಡ್ ಆಗಿದೆ. ಇವುಗಳನ್ನು ಸಾಮಾನ್ಯವಾಗಿ ಡರ್ಟ್ ಬೈಕ್‌ಗಳಲ್ಲಿ ಅಥವಾ ಆನ್/ಆಫ್ ರೋಡ್ ಬೈಕ್‌ಗಳಲ್ಲಿ ನೀಡಲಾಗುತ್ತದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

2022ರ ಬಜಾಜ್ ಪ್ಲಾಟಿನಾ 110 ಇಎಸ್‌ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಬೈಕಿನಲ್ಲಿ 115 ಸಿಸಿ, ಸಿಂಗಲ್ ಸಿಲಿಂಡರ್, ಫೋರ್-ಸ್ಟ್ರೋಕ್, ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಈ ಎಂಜಿನ್7000 ಆರ್‌ಪಿಎಂನಲ್ಲಿ 8.4 ಬಿಹೆಚ್‌ಪಿ ಮತ್ತು 500 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಕೆಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕಾಯಿಲ್-ಸ್ಪ್ರಿಂಗ್ಸ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಬಜಾಜ್ ಪ್ಲಾಟಿನಾ 110 ಬೈಕ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಎಲೆಕ್ಟ್ರಾನಿಕ್ ನಿಯಂತ್ರಕದೊಂದಿಗೆ ಬರುತ್ತದೆ. ಟ್ಯೂಬ್ ರಹಿತ ಟೈರ್, ಕ್ವಿಲ್ಟೆಡ್ ಸೀಟ್, ಮತ್ತು ನೈಟ್ರಾಕ್ಸ್ ಸ್ಪ್ರಿಂಗ್-ಆನ್-ಸ್ಪ್ರಿಂಗ್ ಸಸ್ಪೆಂಕ್ಷನ್ ಸೇರಿದಂತೆ ಕಂಫರ್ಟೆಕ್ ಪ್ಯಾಕೇಜ್ ಸಹ ಈ ಬೈಕ್ ನೊಂದಿಗೆ ಬರುತ್ತದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕಾಣಿಸಿಕೊಂಡ ಬಜಾಜ್ ಪ್ಲಾಟಿನಾ 110 ಇಎಸ್ ಬೈಕ್

ಇನ್ನು ಈ ಬೈಕಿನಲ್ಲಿ ಹೊಸ ಮೀರರ್ಸ್, ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್, ಹ್ಯಾಂಡ್ ಗಾರ್ಡ್ ಮತ್ತು ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಪೀಚರ್ಸ್ ಗಳನ್ನು ಒಳಗೊಂಡಿದೆ. ಈ ಹೊಸ ಬಜಾಜ್ ಪ್ಲಾಟಿನಾ 110 ಬೈಕ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Image Courtesy: The Bengal Rider

Most Read Articles

Kannada
English summary
Bajaj Platina 110 ES With New Colours. Read In Kannada.
Story first published: Tuesday, July 20, 2021, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X