ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬೆನೆಲ್ಲಿ ಇಂಡಿಯಾ ಕಂಪನಿಯು ತನ್ನ ಹೊಸ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬೆನೆಲ್ಲಿ ಕಂಪನಿಯು ಇದೀಗ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಗಾಗಿ ಹೊಸ ಬಣ್ಣದ ಆಯ್ಕೆಯನ್ನು ಸೇರಿಸಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಡ್ವೆಂಚರ್ ಟೂರರ್ ಬೈಕ್ ಮೆಟಾಲಿಕ್ ಡಾರ್ಕ್ ಗ್ರೇ, ರೆಡ್ ಮತ್ತು ಪ್ಯೂರ್ ವೈಟ್ ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರೊಂದಿಗೆ ಈ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಹೊಸ ಅಡ್ವೆಂಚರ್ ಯೆಲ್ಲೋ ಬಣ್ಣವನ್ನು ಹೊಂದಿದೆ, ಈ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ.5,19,900 ಆಗಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಶ್ರೇಣಿಯ ಎರಡನೇ ಮಾದರಿಯಾಗಿದೆ ಮತ್ತು ಹೆಚ್ಚು ಮೀಸಲಾದ ಆಫ್-ರೋಡ್ ಕಿಟ್‌ನೊಂದಿಗೆ ಬರುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಮೊದಲಿಗೆ ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ 499 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 46.8 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, ಅಲ್ಯೂಮಿನಿಯಂ-ಫ್ರೇಮ್ ನಕಲ್ ಗಾರ್ಡ್‌ಗಳು, ಮರುವಿನ್ಯಾಸಗೊಳಿಸಲಾದ ಮೀರರ್ ಮತ್ತು ಹೊಸ ಹ್ಯಾಂಡಲ್‌ಬಾರ್ ಅನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇದರೊಂದಿಗೆ ಹೆಚ್ಚುವರಿಯಾಗಿ ಈ ಬೈಕಿನಲ್ಲಿ ವಿಭಿನ್ನ ವಿನ್ಯಾಸದ ಎಲ್ಸಿಡಿ ಮತ್ತು ಬಿಳಿ ಬ್ಯಾಕ್ಲಿಟ್ ಅನಲಾಗ್ ಟ್ಯಾಕೋಮೀಟರ್ ನೊಂದಿಗೆ ಪರಿಷ್ಕೃತ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಪಡೆಯುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕಿನ ಮುಂಭಾಗ 19 ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವೀಲ್ ಅನ್ನು ಅಳವಡಿಸಿದೆ. ಇನ್ನು ಈ ಅಡ್ವೆಂಚರ್ ಟೂರರ್ ಬೈಕ್ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇನ್ನು ಈ ಬೈಕಿನಲ್ಲಿ ದೊಡ್ಡ 20-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಲಾಂಗ್ ರೈಡ್ ತೆರಳುವಾಗ ಇದರಲ್ಲಿ ದೊಡ್ಡ ಪ್ಯೂಯಲ್ ಟ್ಯಾಂಕ್ ನೀಡಿರುವುದು ಉತ್ತಮ ಸಹಕಾರಿಯಾಗಿರುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇನ್ನು ಗಾಳಿಯ ರಕ್ಷಣೆಗೆ ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಹೊಸ ಅಲ್ಯೂಮಿನಿಯಂ ರೇರ್ ಬಾಕ್ಸ್ ಬ್ರ್ಯಾಕೆಟ್ ಅನ್ನು ನೀಡಿದೆ. ಈ ಹೊಸ ಬೈಕ್ 2,220 ಎಂಎಂ ಉದ್ದ, 915 ಎಂಎಂ ಅಗಲ ಮತ್ತು 1,505 ಎಂಎಂ ವ್ಜೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕಿನ ಸೀಟ್ 840 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಅನ್ನು ಪಡೆಯುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಇದರೊಂದಿಗೆ ಬೆನೆಲ್ಲಿ ಕಂಪನಿಯು ತನ್ನ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.51 ಲಕ್ಷವಾಗಿದೆ. ಬೆನೆಲ್ಲಿ ಕಂಪನಿಯು ಈ ಹೊಸ ಟಿಆರ್‌ಕೆ 251 ಅಡ್ವೆಂಚರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಎಂಟ್ರಿ-ಲೆವೆಲ್ ಅಡ್ವೆಂಚರ್ ಟೂರರ್ ಬೈಕ್ ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.6,000 ಪಾವತಿಸಿ ಆನ್‌ಲೈನ್ ಅಥವಾ ಭಾರತದಾದ್ಯಂತ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

ಈ ಹೊಸ ಅಡ್ವೆಂಚರ್ ಬೈಕ್ ಪ್ರಸ್ತುತ ಭಾರತದಲ್ಲಿ ಬೆನೆಲ್ಲಿಯ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಸಾಕಷ್ಟು ಸ್ಟೈಲಿಂಗ್ ಅಂಶವು ಟಿಆರ್‌ಕೆ 502 ಮಾದರಿಯಿಂದ ಎರವಲು ಪಡೆದುಕೊಂಡಿದೆ. ಇದು ದೊಡ್ಡ ವಿಂಡ್‌ಸ್ಕ್ರೀನ್, ಫ್ರಂಟ್ ಹೆವಿ ಕ್ವಾರ್ಟರ್ ಫೇರಿಂಗ್, ತೆರೆದ ಟ್ರೆಲ್ಲಿಸ್ ಫ್ರೇಮ್ ಮತ್ತು ಸ್ಕಲಪಟಡ್ ಫ್ಯೂಯಲ್ ಟ್ಯಾಂಕ್‌ನಂತಹ ಸಿಗ್ನೇಚರ್ ಅಡ್ವೆಂಚರ್ ಸ್ಟೈಲಿಂಗ್ ಅಂಶಗಳನ್ನು ಪಡೆಯುತ್ತದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಬಲ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್ ಟೈಲ್-ಲ್ಯಾಂಪ್‌ಗಳು ಹೊಂದಿದೆ. ಈ ಬೈಕಿನಲ್ಲಿ ಸಂಪೂರ್ಣವಾದ ಡಿಜಿಟಲ್ ಟಿಎಫ್ ಡಿಸ್ ಪ್ಲೇಯನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Benelli TRK 502X ಬೈಕ್ ಬಿಡುಗಡೆ

2021ರ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ, ಕವಾಸಕಿ ವರ್ಸಿಸ್ 650 ಮತ್ತು ಹೊಸ ಹೋಂಡಾ ಸಿಬಿ500ಎಕ್ಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅಡ್ವೆಂಚರ್ ಟೂರರ್ ಬೈಕುಗಳಲ್ಲಿ ಇದು ಕೂಡ ಒಂದಾಗಿದೆ.

More from DriveSpark

Article Published On: Monday, December 20, 2021, 12:35 [IST]
English summary
Benelli introduced new colour option for trk 502x in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+