ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಇಂದಿನ ಕಾಲದಲ್ಲಿ ಬೈಕ್‌ಗಳು ಅಥವಾ ಸ್ಕೂಟರ್‌ಗಳು ಇಲ್ಲದೆ ಮನೆಗಳು ಬಹಳ ಅಪರೂಪವಾಗಿದೆ. ಕಾರುಗಳು ಇಲ್ಲದಿದ್ದರೂ ದ್ವಿಚಕ್ರ ವಾಹನಗಳಿರುತ್ತದೆ. ಇದಕ್ಕೆ ಕಾರಣ ಇವುಗಳ ನಿರ್ವಹಣೆ ವೆಚ್ಚ ಕಡಿಮೆ ಮತ್ತು ನಮ್ಮ ದೈನಂದಿನ ಅಗತ್ಯಗಳಿಗೆ ಸುಲುಭವಾಗಿ ಬಳಸಬಹುದು.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಅಲ್ಲದೇ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕೂಡ ಸುಲಭವಾಗಿದೆ. ದ್ವಿಚಕ್ರ ವಿಭಾಗದಲ್ಲಿ ಬೈಕ್‌ಗಳಿಗಿಂತ ಸ್ಕೂಟರ್‌ಗಳನ್ನು ಚಾಲನೆ ಮಾಡುವುದು ತುಂಬಾ ಸುಲಭವಾಗಿದೆ. ಸ್ಕೂಟರ್ ಆದರೆ ಎಲ್ಲಾ ವಯಸ್ಸಿನ ಜನರು ಮತ್ತು ಮಹಿಳೆಯರಿಗೂ ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಇದರಿಂದ ಮನೆಯಲ್ಲಿ ಸ್ಕೂಟರ್ ಇದ್ದರೆ ಮನೆಯ ಇತರ ಸದಸ್ಯರು ಕೂಡ ಸ್ಕೂಟರ್ ಅನ್ನು ಬಳಸಬಹುದು. ಇನ್ನು ನಿಮ್ಮ ಪೋಷಕರ ಅಗತ್ಯ ಓಡಾಟಕ್ಕಾಗಿ ಸ್ಕೂಟರ್ ಅನ್ನು ಖರೀದಿಸಲು ಬಯಸಿದ್ದರೆ, ಪೊಷಕರಿಗೆ ಬಳಕೆಗೆ ಅತ್ಯುತ್ತಮ ಟಾಪ್-5 ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್ ಸ್ಕೂಟರ್ ಅನ್ನು ಎಲ್ಲಾ ವಯೋಮಾನದವರು ಸುಲಭವಾಗಿ ಬಳಸಬಹುದು. ಈ ಟಿವಿಎಸ್ ಜೂಪಿಟರ್ ಸ್ಕೂಟರ್ ವಿಶೇಷವಾಗಿ ವಯಸ್ಸಾದವರಿಗೆ ಸುಲಭವಾಗಿ ಚಾಲನೆ ಮಾಡಬಹುದು ಮತ್ತು ಉತ್ತಮ ಕಂಫರ್ಟ್ ಅನ್ನು ಹೊಂದಿರುತ್ತದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಈ ಟಿವಿಎಸ್ ಜೂಪಿಟರ್ ಸ್ಕೂಟರ್‌ನಲ್ಲಿ 109 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.4 ಬಿಹೆಚ್‍ಪಿ ಪವರ್ ಮತ್ತು 8.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಹೋಂಡಾ ಆಕ್ಟಿವಾ 6ಜಿ

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ಉತ್ತಮ ಮೈಲೇಜ್ ನಿಂದ ಹೆಚ್ಚಿನ ಗ್ರಾಹಕರ ಗಮನಸೆಳೆದಿದೆ. ದೈನಂದಿನ ಬಳಕೆಗೆ ಎಲ್ಲಾ ವಯೋಮಾನದವರೆಗೂ ಈ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಈ ಸ್ಕೂಟರ್ ನಲ್ಲಿ ಹಲವಾರು ನೂತನ ಫೀಚರ್ಸ್ ಗಳನ್ನು ಹೊಂದಿವೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ 109ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಹೀರೋ ಮೆಸ್ಟ್ರೋ ಎಡ್ಜ್ 110

ಈ ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ಕೂಡ ಉತ್ತಮ ಆಯ್ಕೆಯಾಗಿದೆ. ಈ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿ ವಿಶಾಲವಾದ ಸೀಟನ್ನು ಹೊಂದಿದ್ದು, ಇಬ್ಬರು ಉತ್ತಮ ಕಂಫರ್ಟ್ ಆಗಿ ಕುಳಿತುಕೊಂಡು ಪ್ರಯಾಣಿಸಬಹುದಾಗಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಹೀರೋ ಮೆಸ್ಟ್ರೋ ಎಡ್ಜ್ 110 ಸ್ಕೂಟರ್‌ನಲ್ಲಿ 22 ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ, ಈ ಸ್ಕೂಟರ್‌ನಲ್ಲಿ 110.9 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8.75 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಸುಜುಕಿ ಆಕ್ಸೆಸ್ 125

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್ 125ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ. ಈ ಸ್ಕೂಟರ್ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಗಳ ಆಯ್ಕೆಯಲ್ಲಿಯು ಲಭ್ಯವುದೆ. ಅಲ್ಲದೇ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.6 ಬಿಹೆಚ್‍ಪಿ ಪವರ್ ಮತ್ತು 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಯಮಹಾ ಫ್ಯಾಸಿನೊ

ಯಮಹಾ ಫ್ಯಾಸಿನೊ ಸ್ಕೂಟರ್ ವಿಭಿನ್ನವಾದ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಸ್ಕೂಟರ್ ತೂಕ ಕೇವಲ 99 ಕೆಜಿ ತೂಕವನ್ನು ಹೊಂದಿದೆ. ಸ್ಟೈಲಿಷ್ ಸ್ಕೂಟರ್ ಅನ್ನು ಇಷ್ಟಪಡುವವರಿಗೆ ಯಮಹಾ ಫ್ಯಾಸಿನೊ ಉತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಕೂಟರ್ ಹೆಚ್ಚಿನ ಮೈಲೇಜ್ ಅನ್ನು ಒದಗಿಸುತ್ತದೆ.

ಪೋಷಕರಿಗಾಗಿ ಅತ್ಯುತ್ತಮ ಸ್ಕೂಟರ್ ಖರೀದಿಸಲು ಬಯಸುವವರಿಗೆ ಟಾಪ್-5 ಸ್ಕೂಟರ್‌ಗಳಿವು

ಯಮಹಾ ಫ್ಯಾಸಿನೊ ಸ್ಕೂಟರ್ 125 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.2 ಬಿಹೆಚ್‍ಪಿ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Best Scooters For Parents. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X