ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಸ್ನೇಹಿತನ ನೆನಪಿಗಾಗಿ ವ್ಯಕ್ತಿಯೊಬ್ಬರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಹಾರ ಮೂಲದ 34 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ರಾಘವೇಂದ್ರ ಕುಮಾರ್ ಎಂಬುವವರು ಕಳೆದ 7 ವರ್ಷಗಳಲ್ಲಿ 49,000 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಅವರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲು ಹಣದ ಕೊರತೆ ಎದುರಾಗಿತ್ತು.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಆಗ ರಾಘವೇಂದ್ರ ಕುಮಾರ್ ರವರು ತಮ್ಮ ಪೂರ್ವಜರ ಮೂರು ಬಿಘಾಸ್ ಭೂಮಿ ಹಾಗೂ ಗ್ರೇಟರ್ ನೋಯ್ಡಾದಲ್ಲಿದ್ದ ಮನೆ ಮಾರಾಟ ಮಾಡಿ, ಬಂದ ಹಣದಲ್ಲಿ ಹೆಲ್ಮೆಟ್ ವಿತರಿಸಿದ್ದಾರೆ. ರಾಘವೇಂದ್ರ ಕುಮಾರ್ ಅವರ ಕಾರ್ಯಗಳಿಗಾಗಿ ಅವರಿಗೆ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದನ್ನು ನೀಡಲಾಗಿದೆ. ತಮ್ಮ ಈ ಕಾರ್ಯದ ಬಗ್ಗೆ ರಾಘವೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ತಮ್ಮ ಹೆಲ್ಮೆಟ್ ವಿತರಣೆಯ ಬಗ್ಗೆ ಮಾತನಾಡಿರುವ ಅವರು, 2014ರಲ್ಲಿ ಬಿಹಾರದ ಮಧುಬನಿ ಜಿಲ್ಲೆಯವರಾದ ನನ್ನ ಸ್ನೇಹಿತ ಕೆ.ಕೆ ಠಾಕೂರ್ ನೋಯ್ಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುತ್ತಿದ್ದರು. ಅವರು ಮೃತಪಟ್ಟ ನಂತರ ಅವರ ಸ್ಮರಣಾರ್ಥ ಹೆಲ್ಮೆಟ್‌ಗಳನ್ನು ವಿತರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಕಳೆದ ಏಳು ವರ್ಷಗಳಲ್ಲಿ ರಾಘವೇಂದ್ರ ಕುಮಾರ್ ಅವರು ದೆಹಲಿ, ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಹರಿಯಾಣ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ 22 ರಾಜ್ಯಗಳಲ್ಲಿ 49,272 ಹೆಲ್ಮೆಟ್‌ಗಳನ್ನು ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಹೆಲ್ಮೆಟ್ ರಹಿತ ಬೈಕ್ ಸವಾರರಿಗೆ 6500ಕ್ಕೂ ಹೆಚ್ಚು ಹೆಲ್ಮೆಟ್ ವಿತರಿಸಿದ್ದೇನೆ ಎಂದು ಹೇಳಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಇದರ ಜೊತೆಗೆ ಅವರು ತಮ್ಮ ತವರು ಜಿಲ್ಲೆ ಕೈಮೂರ್‌ನಲ್ಲಿ 4,000 ಜನರಿಗೆ ಹಾಗೂ ಬಿಹಾರದಲ್ಲಿ 13,000 ಜನರಿಗೆ ಹೆಲ್ಮೆಟ್‌ಗಳನ್ನು ವಿತರಿಸಿದ್ದಾರೆ. ಹೆಲ್ಮೆಟ್ ಖರೀದಿಸಲು ಹಣದ ಕೊರತೆ ಎದುರಾದಾಗ, ಗ್ರೇಟರ್ ನೋಯ್ಡಾದಲ್ಲಿದ್ದ ಮನೆ ಹಾಗೂ ಬಿಹಾರದಲ್ಲಿದ್ದ 3 ಬಿಘಾಸ್ ಭೂಮಿಯನ್ನು ಮಾರಾಟ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಅಷ್ಟೇ ಅಲ್ಲದೇ ಭಾರತವನ್ನು ಅಪಘಾತ ಮುಕ್ತವಾಗಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಹೆಲ್ಮೆಟ್ ದಾನ ಮಾಡುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಬ್ರಾಂಡೆಡ್ ಕಂಪನಿಗಳಿಂದ 49,272 ಹೆಲ್ಮೆಟ್‌ಗಳನ್ನು ಖರೀದಿಸಲು ನಾನು ಇಲ್ಲಿಯವರೆಗೆ ಸುಮಾರು ರೂ. 2 ಕೋಟಿ ಖರ್ಚು ಮಾಡಿದ್ದೇನೆ ಎಂದು ರಾಘವೇಂದ್ರ ಕುಮಾರ್ ಹೇಳಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಅಗಲಿದ ನನ್ನ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಂದೆಯೂ ಈ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ. ರಾಘವೇಂದ್ರ ಕುಮಾರ್ ಅವರು ಹೆಲ್ಮೆಟ್ ತಯಾರಿಸುವ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಹೆಲ್ಮೆಟ್‌ಮ್ಯಾನ್ ಹೆಸರಿನ ವೆಬ್‌ಸೈಟ್ ಅನ್ನು ಸಹ ರಚಿಸಿದ್ದಾರೆ. ಈ ಮೂಲಕ ಜನರಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ರಕ್ಷಾ ಬಂಧನದ ಸಂದರ್ಭದಲ್ಲಿ ರಾಘವೇಂದ್ರ ಕುಮಾರ್ ರವರು ಬಿಹಾರದ ಹುಡುಗಿಯರಿಗೆ 172 ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಅವರ ಸೇವೆಯಿಂದ ಪ್ರಭಾವಿತರಾದ ಬಾಲಿವುಡ್ ನಟ ಸೋನು ಸೂದ್ ರವರು ರಾಘವೇಂದ್ರ ಕುಮಾರ್ ರವರನ್ನು ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ ಎಂಬ ಖಾಸಗಿ ಚಾನೆಲ್‌ಗಾಗಿ ಸಂದರ್ಶನ ಮಾಡಿದ್ದರು. ಈ ಸಂದರ್ಶನವು ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2016 ರಲ್ಲಿ ಭಾರತದಲ್ಲಿ 3,00,000 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ 40% ನಷ್ಟು ಜನರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರು. ಅದೇ ರೀತಿ 2018 ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದ 43,614 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಬಹುತೇಕ ರಾಜ್ಯಗಳು ಬೈಕ್ ಸವಾರರ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿವೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಹೆಲ್ಮೆಟ್ ಬಳಕೆಯು ಬೈಕ್ ಸವಾರರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆಲ್ಮೆಟ್ ಧರಿಸದ ಸವಾರರಿಗೆ ಹಾಗೂ ಹಿಂಬದಿ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಾಹನ ಸವಾರರು ಕಳಪೆ ಹೆಲ್ಮೆಟ್‌ಗಳನ್ನು ಬಳಸುತ್ತಿದ್ದರೆ. ಇತ್ತೀಚಿಗೆ ಕಳಪೆ ಹೆಲ್ಮೆಟ್'ಗಳ ಬಳಕೆ ಹೆಚ್ಚುತ್ತಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲು ಅವರ ಪ್ರಾಣಕ್ಕೆ ಕುತ್ತು ತರುತ್ತಿವೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಈ ಹಿನ್ನೆಲೆಯಲ್ಲಿ ಕಳೆದ ಜೂನ್ 1ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಈ ವರ್ಷದ ಜೂನ್‌ 1 ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಉತ್ಪಾದಕರಿಗೆ ಹಾಗೂ ಮಾರಾಟಗಾರರಿಗೆ ಆದೇಶ ನೀಡಲಾಗಿದೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಈ ಹಿಂದೆಯೇ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹಲವಾರು ಹೆಲ್ಮೆಟ್ ಕಂಪನಿಗಳು ಕಡಿಮೆ ಬೆಲೆಯ ಹೆಲ್ಮೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಿದ್ದವು. ಈ ಹಿನ್ನೆಲೆಯಲ್ಲಿ ಉತ್ಪಾದಕರಿಗೆ ಹಾಗೂ ಬಳಕೆದಾರರಿಗೆ ಅನ್ವಯವಾಗುವ ಹೊಸ ನಿಯಮ ಜಾರಿಗೆ ತಂದಿರುವ ಸಾರಿಗೆ ಇಲಾಖೆಯು ಕಳಪೆ ಹೆಲ್ಮೆಟ್ ತಯಾಕರ ವಿರುದ್ಧ ಸಮರ ಸಾರಿದೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ಅಪಘಾತದ ವೇಳೆ ತಲೆಗೆ ತೀವ್ರ ಗಾಯಗಳಾಗುವುದನ್ನು ತಪ್ಪಿಸಬಹುದು. ಅಧ್ಯಯಗಳ ಪ್ರಕಾರ ಹೆಲ್ಮೆಟ್ ಧರಿಸುವುದರಿಂದ ತಲೆಗೆ ಪೆಟ್ಟಾಗುವ ಸಾಧ್ಯತೆಯನ್ನು 70% ನಷ್ಟು ಹಾಗೂ ಪ್ರಾಣಪಾಯವನ್ನು 42% ನಷ್ಟು ತಪ್ಪಿಸಬಹುದು. ಮಾರುಕಟ್ಟೆಯಲ್ಲಿ ಹಲವು ವಿಧದ ಹೆಲ್ಮೆಟ್ ಗಳನ್ನು ಮಾರಾಟ ಮಾಡಲಾಗುತ್ತದೆ.

ಮನೆ, ಜಮೀನು ಮಾರಾಟ ಮಾಡಿ ಉಚಿತವಾಗಿ ಹೆಲ್ಮೆಟ್ ವಿತರಿಸುತ್ತಿರುವ ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ

ಇವುಗಳಲ್ಲಿ ಫುಲ್ ಫೇಸ್, ಆಫ್ ರೋಡ್, ಮೊಟೊ ಕ್ರಾಸ್, ಪ್ಲಿಪ್ ಆನ್, ಓಪನ್ ಫೇಸ್ ಹಾಗೂ ಹಾಲ್ಪ್ ಹೆಲ್ಮೆಟ್ ಎಂಬ ಹಲವು ವಿಧಗಳಿವೆ. ಇವುಗಳಲ್ಲಿ ಫುಲ್ ಫೇಸ್ ಹೆಲ್ಮೆಟ್ ಗಳು ವಾಹನ ಸವಾರರಿಗೆ ಹೆಚ್ಚು ಸುರಕ್ಷತೆಯನ್ನು ನೀಡುವುದರಿಂದ ಫುಲ್ ಫೇಸ್ ಹೆಲ್ಮೆಟ್ ಬಳಸುವುದು ಸೂಕ್ತ.

Most Read Articles

Kannada
English summary
Bihar man sells his house and land to distribute free helmets details
Story first published: Wednesday, November 10, 2021, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X