Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಡಿಗೆಗಾಗಿ ಹೊಸ ತಲೆಮಾರಿನ ಬೈಸಿಕಲ್‌ಗಳನ್ನು ಬಿಡುಗಡೆಗೊಳಿಸಿದ ಸ್ಮಾರ್ಟ್ ಬೈಕ್
ಭಾರತದ ಅತಿದೊಡ್ಡ ಬೈಕ್ ಬಾಡಿಗೆ ಕಂಪನಿಯಾದ ಸ್ಮಾರ್ಟ್ ಬೈಕ್ ಚೆನ್ನೈನಲ್ಲಿ ವಿಶ್ವ ದರ್ಜೆಯ ಎಲೆಕ್ಟ್ರಿಕ್ ಬೈಸಿಕಲ್ ಹಾಗೂ ಹೊಸ ತಲೆಮಾರಿನ ಬೈಸಿಕಲ್‌ಗಳನ್ನು ಬಾಡಿಗೆಗೆ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.

ಕಂಪನಿಯ ಬಾಡಿಗೆ ವಾಹನಗಳು ಚೆನ್ನೈನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರಲಿವೆ. ಕಚೇರಿಗೆ ತೆರಳುವವರ ಹಾಗೂ ಇತರರ ಅಗತ್ಯವನ್ನು ಪರಿಗಣಿಸಿ ಈ ಹಿಂದೆ ಈ ಸೇವೆಯನ್ನು ಆರಂಭಿಸಲಾಗಿತ್ತು. ಈ ಸೇವೆಯನ್ನು ವಿಸ್ತರಿಸುವ ಸಲುವಾಗಿ ಸ್ಮಾರ್ಟ್ ಬೈಕ್ ಈಗ ಚೆನ್ನೈನಲ್ಲಿ ಹೊಸ ಸರಣಿಯ ವಾಹನಗಳನ್ನು ಬಿಡುಗಡೆಗೊಳಿಸಿದೆ.

ಈ ವಾಹನಗಳು ಕಳೆದ 28 ದಿನಗಳಿಂದ ಸೇವೆಯನ್ನು ನೀಡುತ್ತಿವೆ. ಈ ವಾಹನಗಳಿಗೆ ಮರೀನಾ ಬೀಚ್‌ನ ಕಾಮರಾಜ್ ರಸ್ತೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಚಾಲನೆ ನೀಡಿದ್ದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಹಲವು ಸಚಿವರು ಹಾಗೂ ಚೆನ್ನೈನ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಸದ್ಯಕ್ಕೆ ಈ ವಾಹನಗಳನ್ನು ಚೆನ್ನೈನ 10 ಪ್ರಮುಖ ಸ್ಥಳಗಳಲ್ಲಿ ಮಾತ್ರ ಸೇವೆಗೆ ನಿಯೋಜಿಸಲಾಗಿದೆ.

90ಕ್ಕೂ ಹೆಚ್ಚು ಹೊಸ ವಾಹನಗಳು ಶೀಘ್ರದಲ್ಲೇ ನಗರದ ಇತರ ಭಾಗಗಳಲ್ಲಿ ಸೇವೆಗೆ ಲಭ್ಯವಾಗಲಿವೆ. ಇದಕ್ಕಾಗಿ 1000ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈಗ ಬಳಕೆಯಲ್ಲಿರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್'ಗಳನ್ನು ಗಂಟೆಗೆ 25 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದು. ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 50 ಕಿ.ಮೀಗಳವರೆಗೆ ಚಲಿಸುತ್ತದೆ.

ಈ ವಾಹನಗಳಿಗೆ ಅತ್ಯಂತ ಕಡಿಮೆ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ. ಹೊಸ ತಲೆಮಾರಿನ ವಾಹನವಾಗಿ ಪರಿಚಯಿಸಲಾದ ಬೈಸಿಕಲ್‌ಗಳು ಚೈನ್'ಗಳಿಲ್ಲದೆ ಚಲಿಸಬಲ್ಲ ಬೈಸಿಕಲ್‌ಗಳಾಗಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇವುಗಳು ಮೆಗ್ನೀಸಿಯಮ್ ಅಲಾಯ್ ವ್ಹೀಲ್, ಟ್ಯೂಬ್ ಲೆಸ್ ಟಯರ್‌ಗಳಂತಹ ವಿವಿಧ ಫೀಚರ್'ಗಳನ್ನು ಹೊಂದಿವೆ. ಸ್ಮಾರ್ಟ್ ಬೈಕ್ ಕಂಪನಿಯ ಈ ಸೇವೆಯನ್ನು ಕೇವಲ ಸ್ಮಾರ್ಟ್ ಬೈಕ್ ಎಂಬ ಮೊಬೈಲ್ ಅಪ್ಲಿಕೇಷನ್ ಮೂಲಕ ನೀಡಲಾಗುತ್ತದೆ.

ಈ ಅಪ್ಲಿಕೇಷನ್ ಮೂಲಕವೇ ವಾಹನಗಳನ್ನು ಬಾಡಿಗೆಗೆ ಪಡೆಯುವುದು, ಬಳಕೆಯ ನಂತರ ಅವುಗಳನ್ನು ಹಸ್ತಾಂತರಿಸುವುದು, ಬಿಲ್ ಪಾವತಿಸುವುದನ್ನು ಮಾಡಬಹುದಾಗಿದೆ. ಈ ಮೂಲಕ ಪೇಪರ್ ಲೆಸ್ ವಹಿವಾಟಿಗೆ ಆದ್ಯತೆ ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಮಾರ್ಟ್ ಬೈಕ್ ಈ ಸೇವೆಯನ್ನು ಚೆನ್ನೈ ಮಾತ್ರವಲ್ಲದೆ ಭಾರತದ ಇತರ ನಗರಗಳಲ್ಲಿಯೂ ನೀಡುತ್ತದೆ. ಸ್ಮಾರ್ಟ್ ಬೈಕ್ ಕಂಪನಿಯ ಬಾಡಿಗೆ ವಾಹನಗಳುದೆಹಲಿ, ಹೈದರಾಬಾದ್ ಹಾಗೂ ಚಂಡೀಗಢಗಳಲ್ಲಿಯೂ ಸೇವೆಯನ್ನು ನೀಡುತ್ತಿವೆ.

ಶೀಘ್ರದಲ್ಲೇ ಇನ್ನಷ್ಟು ನಗರಗಳಲ್ಲಿ ಸೇವೆಯನ್ನು ನೀಡಲು ಕಂಪನಿಯು ಬಯಸಿದೆ. ಚೆನ್ನೈನಲ್ಲಿ ಸೇವೆ ನೀಡುತ್ತಿರುವ ಹೊಸ ತಲೆಮಾರಿನ ಸೈಕಲ್ ಹಾಗೂ ಎಲೆಕ್ಟ್ರಿಕ್ಬೈಸಿಕಲ್‌ಗಳಿಂದ ಐಟಿ ಉದ್ಯೋಗಿಗಳಿಗೆ ಹಾಗೂ ಇತರ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಬಹುದೆಂದು ನಿರೀಕ್ಷಿಸಲಾಗಿದೆ.