ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಬಿಎಂಡಬ್ಲ್ಯು ಹೊಸ ಮ್ಯಾಕ್ಸಿ ಸ್ಕೂಟರ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಮೊದಲ ಮ್ಯಾಕಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್‌ನ ಹೆಸರು ಮತ್ತು ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸದಿದ್ದರೂ, ಬಿಎಂಡಬ್ಲ್ಯು ಹೊಸ ಮಾಕ್ಸಿ ಸ್ಕೂಟರ್ ಸಿ 400 ಜಿಟಿ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಜಾಗತಿಕ ಪೋರ್ಟ್ಫೋಲಿಯೊದಲ್ಲಿರುವ ಕಂಪನಿಯ ಸಿ 400 ಜಿಟಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸೌವ ಸಾಧ್ಯತೆಯಿದೆ. ಸಿ400 ಜಿಟಿ ಮಿಡ್ ಸೈಜ್ ಸ್ಕೂಟರ್ ಆರಾಮದಾಯಕವಾದ ಮಾದರಿಯಾಗಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಜಾಗತಿಕವಾಗಿ ಮಾರಾಟವಾಗುವ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ನಲ್ಲಿ 350 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ, ಈ ಎಂಜಿನ್ ಎಂಜಿನ್‌ನೊಂದಿಗೆ ಹೊಸ 'ಇ-ಗ್ಯಾಸ್' ತಂತ್ರಜ್ಞಾನದಿಂದ (ನವೀಕರಿಸಿದ ಥ್ರೊಟಲ್-ಬೈ-ವೈರ್ ಸಿಸ್ಟಂ) ಪ್ರಯೋಜನವನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಇನ್ನು ಇದರಲ್ಲಿ ಆಕ್ಸಿಜನ್ ಸೆನ್ಸರ್ ಮತ್ತು ನವೀಕರಿಸಿದ ಎಕ್ಸಾಸ್ಟ್ ಸಿಸ್ಟಂ ಸಹ ಹೊಂದಿದೆ. ಈ ಎಲ್ಲಾ ನವೀಕರಣಗಳು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ಇನ್ನು ಈ ಎಂಜಿನ್ 33.5 ಬಿಹೆಚ್‍ಪಿ ಪವರ್ ಮತ್ತು 139 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಈ ಬಿಎಂಡಬ್ಲ್ಯು ಸಿ 400 ಜಿಟಿ 139 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೊಸ ಕ್ಲಚ್ ಸ್ಪ್ರಿಂಗ್‌ಗಳೊಂದಿಗೆ ನವೀಕರಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಬಿಎಂಡಬ್ಲ್ಯು ಸಿ 400 ಜಿಟಿಯನ್ನು ಆಲ್ಪೈನ್ ವೈಟ್, ಮೂನ್ವಾಲ್ಕ್‌ಗ್ರೇ ಮೆಟಾಲಿಕ್ ಮತ್ತು ಬ್ಲಾಕ್‌ಸ್ಟಾರ್ಮ್ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ನಲ್ಲಿ ಎಲ್‌ಇಡಿ ಲೈಟಿಂಗ್ ಸಿಸ್ಟಂ, ಸ್ಪೋರ್ಟಿ ವಿ-ಆಕಾರದ ಟ್ರಿಮ್ ಪ್ಯಾನಲ್ ಯುನಿಟ್ ಗಳು, ದೊಡ್ಡ-ಸ್ವರೂಪದ ವಿಂಡ್‌ಸ್ಕ್ರೀನ್, ಏರೋಡೈನಾಮಿಕ್ ವಿನ್ಯಾಸಗೊಳಿಸಲಾದ ಸೀಟ್ ಮತ್ತು ಹೆಚ್ಚಿನವು ಇದರ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಇತ್ತೀಚೆಗೆ ವೀಕರಿಸಿದ ಮಾದರಿಯು ಹೊಸ ಬ್ರೇಕ್‌ಗಳು ಮತ್ತು ಪರಿಷ್ಕೃತ ಆಟೋಮ್ಯಾಟಿಕ್ ಸ್ಟಿಬಿಲಿಟಿ ಕಂಟ್ರೋಲ್ (ಎಎಸ್‌ಸಿ) ಯೊಂದಿಗೆ ಬರುತ್ತದೆ. ಎರಡನೆಯದು ಲೋಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆ

ಭಾರತದಲ್ಲಿ ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದರೆ, ಈ ಮ್ಯಾಕಿ ಸ್ಕೂಟರ್ ಅನ್ನು ಎಕ್ಸ್ ಶೋರೂಂ ಪ್ರಕಾರ ರೂ,6 ಲಕ್ಷಕ್ಕೆ ಬಿಡುಗಡೆಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಪಡಿಸಬಹುದು.

More from DriveSpark

Article Published On: Saturday, July 17, 2021, 12:25 [IST]
English summary
BMW’s First Maxi Scooter For India Teased. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+