ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಎಚ್‌ಎಂಎಸ್‌ಐ) ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್6 ಪ್ರೇರಿತ ಗೋಲ್ಡ್ ವಿಂಗ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಆದರೆ ಹೋಂಡಾ ಈ ಐಷಾರಾಮಿ ಬೈಕಿನ ಬಿಡುಗಡೆಯ ದಿನಾಂಕದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟದಲ್ಲಿರುವ 2021ರ ಹೋಂಡಾ ಗೋಲ್ಡ್ ವಿಂಗ್ ಸಾಕಷ್ಟು ನವೀಕರಣಗಳನ್ನು ಒಳಗೊಂಡಿದೆ. ಈ ಬೈಕಿನಲ್ಲಿ 1,833 ಸಿಸಿ, ಲಿಕ್ವಿಡ್-ಕೂಲ್ಡ್, ಇನ್ಲೈನ್ -6 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 126.4 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಮತ್ತು ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

2021ರ ಹೋಂಡಾ ಗೋಲ್ಡ್ ವಿಂಗ್ ಬಹಳಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದೆ. ಇದರಲ್ಲಿ 7.0-ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಇದರೊಂದಿಗೆ ಗೈರೊಕಾಂಪಾಸ್ ನ್ಯಾವಿಗೇಷನ್, ಸ್ಮಾರ್ಟ್ ಕೀ, ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹಿಲ್ ಸ್ಟಾರ್ಟ್ ಅಸಿಸ್ಟ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ (ಡಿಸಿಟಿ ಮಾತ್ರ) ಮತ್ತು ಆಲ್-ಎಲ್ಇಡಿ ಲೈಟಿಂಗ್ ಅನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಈ ಐಷಾರಾಮಿ ಹೋಂಡಾ ಗೋಲ್ಡ್ ವಿಂಗ್ ಬೈಕ್ ಟ್ರೈವೇಲ್, ಸ್ಪೋಟ್ಸ್, ರೈನ್ ಮತ್ತು ಇಕಾನ್ ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿರಲಿದೆ. 2021ರ ಗೋಲ್ಡ್ ವಿಂಗ್ ಅತ್ಯಂತ ಬೃಹತ್ ಗಾತ್ರದ ಬೈಕ್ ಆಗಿದೆ.

ಇನ್ನು ಈ ಬೈಕ್ ಸ್ಟೆಪ್ಡ್ ಸೀಟುಗಳನ್ನು ಸಹ ಪಡೆಯುತ್ತದೆ, ಇದು ದೀರ್ಘ ಸವಾರಿಗಳಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ. ಈ ಹೋಂಡಾ ಗೋಲ್ಡ್ ವಿಂಗ್ ಬೈಕ್ ಅಲ್ಟ್ರಾ ಪ್ರೀಮಿಯಂ ಬೈಕ್ ಆಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಹೊಸ ಹೋಂಡಾ ಗೋಲ್ಡ್ ವಿಂಗ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್-ವಿಷ್ಬೋನ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಸೆಟಪ್ ಅನ್ನು ಹೊಂದಿದೆ. ಇದನ್ನು ಎಲೆಕ್ಟ್ರಿಕ್ ಕಂಟ್ರೋಲ್ ಜೊತೆ ಸಸ್ಪೆಂಕ್ಷನ್-ಡ್ಯಾಂಪಿಂಗ್ ಹೊಂದಾಣಿಕೆಯನ್ನು ಸಹ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಇನ್ನು ಈ ಐಷಾರಾಮಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆರು-ಪಿಸ್ಟನ್ ಕಾಲಿಪರ್‌ಗಳನ್ನು ಹೊಂದಿರುವ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಮೂರು ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಸಿಂಗಲ್ 316 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ. ಸುಧಾರಿತ ಸುರಕ್ಷತೆಗಾಗಿ ಎಬಿಎಸ್‌ನೊಂದಿಗೆ ಎಲೆಕ್ಟ್ರಿಕ್ ಕಂಟ್ರೋಲ್ ಸಂಯೋಜಿತ ಬ್ರೇಕಿಂಗ್ ಸಿಸ್ಟ ಸಹ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್

ಹೊಸ ಹೋಂಡಾ ಗೋಲ್ಡ್ ವಿಂಗ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಫ್ರಿಕಾ ಟ್ವಿನ್, ಸಿಬಿಆರ್ 650 ಆರ್, ಸಿಬಿ 500 ಎಕ್ಸ್, ಸೇರಿದಂತೆ ಬ್ರ್ಯಾಂಡ್‌ನ ಇತರ ಪ್ರೀಮಿಯಂ ಬೈಕ್ ಗಳಂತೆಯೇ ಇದು ಹೋಂಡಾದ ಬಿಗ್‌ವಿಂಗ್ ಡೀಲರುಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತದೆ.

Article Published On: Thursday, June 10, 2021, 21:35 [IST]
English summary
Honda Gold Wing BS6 India, Launch Expected Soon. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+