ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ ಬಿಎಸ್ಎ (BSA) ಯನ್ನು ಪುನರುಜ್ಜೀವನಗೊಳಿಸಿದೆ. ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು 2016 ರಲ್ಲಿ ಸುಮಾರು ರೂ. 28 ಕೋಟಿ ನೀಡಿ ಬಿಎಸ್ಎ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಐದು ವರ್ಷಗಳ ಪ್ರಯತ್ನದ ಭಾಗವಾಗಿ ಬಿಎಸ್ಎ ಗೋಲ್ಡ್ ಸ್ಟಾರ್ ಬೈಕ್ ಅನ್ನು ಪುನಃ ಆರಂಭಿಸಲಾಗಿದೆ. ಹೊಸ 650 ಸಿಸಿ ಬೈಕ್ ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಸಾರ್ವಜನಿಕವಾಗಿ ಅನಾವರಣಗೊಂಡಿದೆ. ಈ ಬೈಕ್ ಅನ್ನು ಇಂಗ್ಲೆಂಡಿನಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಈ ಕಾರಣಕ್ಕಾಗಿಯೇ ಈ ಬೈಕ್ ಅನ್ನು ಇಂಗ್ಲೆಂಡಿನಲ್ಲಿ ಅನಾವರಣಗೊಳಿಸಲಾಗಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

1938 - 1963 ರ ನಡುವೆ, ಬಿಎಸ್ಎ ಗೋಲ್ಡ್ ಸ್ಟಾರ್ ಬೈಕ್ ಅನ್ನು 350 ಸಿಸಿಯಿಂದ 500 ಸಿಸಿವರೆಗಿನ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಈ ಬೈಕ್ ತನ್ನ ಹಳೆಯ ರೆಟ್ರೊ ವಿನ್ಯಾಸ ಅಂಶಗಳನ್ನು ಉಳಿಸಿಕೊಂಡಿದೆ. ಆದರೆ ಹೆಚ್ಚು ಅತ್ಯಾಧುನಿಕ ಅಂಡರ್‌ಪಿನ್ನಿಂಗ್‌ ಹಾಗೂ ಹೊಸದಾಗಿ ಅಭಿವೃದ್ಧಿಪಡಿಸಿದ 650 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಗೋಲ್ಡ್ ಸ್ಟಾರ್‌ ಬೈಕಿನ ಹೊಸ ಪ್ರಚಾರದ ವೀಡಿಯೊವನ್ನು ಬಿಡುಗಡೆ ಮಾಡಿದೆ. ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಅನ್ನು ಡಬಲ್ ಕ್ರೇಡಲ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿರುವ ಸಾಂಪ್ರದಾಯಿಕ ಸರ್ಕ್ಯುಲರ್ ಸ್ಪೋರ್ಟ್ಸ್ ಹೆಡ್‌ಲ್ಯಾಂಪ್‌, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ ಹಾಗೂ ಎಲ್‌ಇಡಿ ಟೇಲ್ ಲ್ಯಾಂಪ್ ಈ ಬೈಕಿನ ಆಕರ್ಷಣೆಯನ್ನು ಹೆಚ್ಚಿಸಿವೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಈ ಬೈಕಿನಲ್ಲಿ ವಿಶಾಲವಾದ ಸೆಟ್ ಹ್ಯಾಂಡಲ್‌ಬಾರ್‌, ಟಿಯರ್‌ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್‌ ಹೊಂದಿರುವ ಅಗಲವಾದ ಫೆಂಡರ್‌, ಪಿರೆಲ್ಲಿ ಫ್ಯಾಂಟಮ್ಸ್ಪೋರ್ಟ್‌ಕಾಮ್ ಟಯರ್‌ಗಳೊಂದಿಗೆ ಅಳವಡಿಸಲಾದ ಸ್ಪೋಕ್ ವ್ಹೀಲ್‌ ಹಾಗೂ ಸಿಂಗಲ್ ಸೀಟ್ ಮೌಂಟಿಂಗ್ ಗಳನ್ನು ನೀಡಲಾಗಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಇದರ ಜೊತೆಗೆ ಕ್ರೋಮ್ ಅಸೆಂಟ್ ಗಳನ್ನು ಹೆಡ್‌ಲ್ಯಾಂಪ್ ಹೌಸಿಂಗ್, ಫ್ಯೂಯಲ್ ಟ್ಯಾಂಕ್ ಹಾಗೂ ಎಕ್ಸಾಸ್ಟ್ ಪೈಪ್‌ನ ಸುತ್ತಲೂ ನೀಡಲಾಗಿದೆ. ಈ ಬೈಕ್ ಅನಲಾಗ್ ಸ್ಪೀಡೋ ಮೀಟರ್, ಟ್ಯಾಕೋಮೀಟರ್ ಹಾಗೂ ಎಲ್‌ಸಿ‌ಡಿ ಮಲ್ಟಿ ಫಂಕ್ಷನ್ ಡಿಸ್ಪ್ಲೇ ಹೊಂದಿರುವ ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಈ ಗೋಲ್ಡ್ ಸ್ಟಾರ್‌ ಬೈಕ್ ತನ್ನ ಫೀಚರ್ ಹಾಗೂ ಎಂಜಿನ್ ಫೀಚರ್ ಗಳಿಂದ ಗಮನ ಸೆಳೆಯುತ್ತದೆ. ಈ ಬೈಕಿನಲ್ಲಿರುವ ಕೆಲವು ವಿನ್ಯಾಸಗಳು ಕ್ಲಾಸಿಕ್ ಬೊನೆವಿಲ್ಲೆ ಟ್ವಿನ್ ಬೈಕುಗಳಿಂದ ಪ್ರೇರಿತವಾಗಿವೆ. ವಿಶಾಲವಾದ ಹ್ಯಾಂಡಲ್‌ಬಾರ್‌ಗಳು ಹಾಗೂ ಮಿಡ್ ಸೆಟ್ ಫುಟ್‌ಪೇಜ್‌ಗಳನ್ನು ಹೊಂದಿರುವ ರೈಡಿಂಗ್ ಎರ್ಗೋನಾಮಿಕ್ಸ್ ಇನ್ನೂ ಉತ್ತಮವಾಗಿದೆ ಎಂದು ಭಾವಿಸಲಾಗಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಬಿಎಸ್ಎ ಗೋಲ್ಡ್ ಸ್ಟಾರ್ ಬೈಕ್ ಅನ್ನು ಇನ್ಸಿಗ್ನಿಯಾ ರೆಡ್, ಡಾನ್ ಸಿಲ್ವರ್, ಮಿಡ್ನೈಟ್ ಬ್ಲಾಕ್, ಹೈಲ್ಯಾಂಡ್ ಗ್ರೀನ್ ಹಾಗೂ ಸಿಲ್ವರ್ ಶೀನ್ (ಲೆಗಸಿ ಎಡಿಷನ್) ಸೇರಿದಂತೆ ಹಲವು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕ್ 213 ಕೆ.ಜಿ ತೂಕ, 1,425 ಎಂಎಂ ವ್ಹೀಲ್ ಬೇಸ್, 780 ಎಂಎಂ ಸೀಟ್ ಎತ್ತರ ಹಾಗೂ 12 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಹೊಸ ಬಿಎಸ್ಎ ಗೋಲ್ಡ್‌ಸ್ಟಾರ್ ಬೈಕ್ ಸಿಂಗಲ್ ಎಕ್ಸಾಸ್ಟ್ ಪೈಪ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಲಿದೆ. 652 ಸಿಸಿಯ ಈ ಸಿಂಗಲ್ ಸಿಲಿಂಡರ್ ಡಿ‌ಒಹೆಚ್‌ಸಿ ಎಂಜಿನ್ ಕೂಲಿಂಗ್ ಫಿನ್‌ಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಈ ಎಂಜಿನ್ 6,000 ಆರ್‌ಪಿ‌ಎಂನಲ್ಲಿ 45 ಬಿ‌ಹೆಚ್‌ಪಿ ಪವರ್ ಹಾಗೂ 4,000 ಆರ್‌ಪಿ‌ಎಂನಲ್ಲಿ 55 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕವಚದ ವಿನ್ಯಾಸವು BMW F650 Funduro ಅಡ್ವೆಂಚರ್ ಬೈಕ್‌ಗೆ ಪವರ್ ನೀಡುವ ರೋಟಾಕ್ಸ್ ಘಟಕವನ್ನು ಸ್ವಲ್ಪ ಮಟ್ಟಿಗೆ ನೆನಪಿಸುತ್ತದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಸಸ್ಪೆಂಷನ್ ಹಾಗೂ ಬ್ರೇಕಿಂಗ್‌ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಅಳವಡಿಸಲಾಗಿದ್ದರೆ, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ ಅಳವಡಿಸಲಾಗಿದೆ. ಬ್ರೇಕಿಂಗ್ ಗಾಗಿ ಬ್ರೆಂಬೊ ಕ್ಯಾಲಿಪರ್‌ ಹಾಗೂ ಕಾಂಟಿನೆಂಟಲ್ ಡ್ಯುಯಲ್ ಚಾನೆಲ್ ಎಬಿಎಸ್‌ ಹೊಂದಿರುವ ಸಿಂಗಲ್ ಡಿಸ್ಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

ಗೋಲ್ಡ್ ಸ್ಟಾರ್‌ 650 ಬೈಕಿನಲ್ಲಿರುವ ಸಾಂಪ್ರದಾಯಿಕ ವೈರ್ ಸ್ಪೋಕ್ ವ್ಹೀಲ್, ರಾಯಲ್ ಎನ್‌ಫೀಲ್ಡ್ 650 ಸಿಸಿ ಟ್ವಿನ್ ಮಾದರಿಗಳಲ್ಲಿ ಕಂಡು ಬರುವ ಅದೇ ಹಳೆಯ ಪಿರಾಲಿ ಫ್ಯಾಂಟಮ್ ಸ್ಪೋರ್ಟ್‌ಸ್ಕಾಂಬ್ ಟ್ಯೂಬ್ ಟಯರ್‌ಗಳೊಂದಿಗೆ ಅಳವಡಿಸಲ್ಪಟ್ಟಿದೆ.

ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ ಬೈಕ್ ಅನ್ನು ಬಿಡುಗಡೆಗೊಳಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಕಂಪನಿಯು ಇತ್ತೀಚಿಗೆ ಭಾರತದಲ್ಲಿ 650 ಸಿಸಿ ಬೈಕ್ ಅನ್ನು ಪರೀಕ್ಷಿಸಿತ್ತು. ಆದರೆ ಕಂಪನಿಯು ರಫ್ತು ಉದ್ದೇಶಗಳಿಗಾಗಿ ಮಾತ್ರ ಈ ಬೈಕ್ ಅನ್ನು ಭಾರತದಲ್ಲಿ ಉತ್ಪಾದಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾಯ್ತು BSA Gold Star 650 ಬೈಕಿನ ಟಿವಿಸಿ

2022ರ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಮೊದಲು ಇಂಗ್ಲೆಂಡಿನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ ಈ ಬೈಕ್ ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್, ಕವಾಸಕಿ ಡಬ್ಲ್ಯು800 ಹಾಗೂ ಟ್ರಯಂಫ್ ಸ್ಟ್ರೀಟ್ ಟ್ವಿನ್‌ ಬೈಕುಗಳಿಗೆ ಪೈಪೋಟಿ ನೀಡಲಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಹೊಸ ಗೋಲ್ಡ್ ಸ್ಟಾರ್ ಬೈಕ್ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Classic legends releases bsa gold star 650 bike tvc video details
Story first published: Monday, December 13, 2021, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X