ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ವಾಹನಗಳು ಮಾರಾಟವಾಗುತ್ತವೆ. ಆದರೆ ಆ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳನ್ನು ವಿಸ್ತರಿಸಲಾಗುತ್ತಿಲ್ಲ. ರಸ್ತೆಗಳ ಕಿರಿದಾಗುವಿಕೆ ಹಾಗೂ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ. ಇದು ಭಾರತದ ಯಾವುದೋ ಒಂದು ನಗರದ ಸಮಸ್ಯೆಯಲ್ಲ. ಬದಲಿಗೆ ಭಾರತದ ಬಹುತೇಕ ಎಲ್ಲಾ ನಗರಗಳಲ್ಲೂ ವಾಹನ ದಟ್ಟಣೆ ಉಂಟಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

ತೀವ್ರ ಸಂಚಾರ ದಟ್ಟಣೆಯ ನಡುವೆಯೇ ಹಲವಾರು ಜನರು ಪ್ರತಿ ನಿತ್ಯ ಬೈಕ್‌ನಲ್ಲಿ ಕಚೇರಿಗೆ ಹಾಗೂ ಇನ್ನಿತರ ಕೆಲಸಗಳಿಗೆ ತೆರಳುತ್ತಾರೆ. ವಾಹನ ದಟ್ಟಣೆಯ ಜೊತೆಗೆ ಪೆಟ್ರೋಲ್ ಬೆಲೆ ಏರಿಕೆಯಾಗಿರುವುದು ಸಹ ವಾಹನ ಸವಾರರನ್ನು ಕಂಗೆಡಿಸಿದೆ. ಟ್ರಾಫಿಕ್ ದಟ್ಟಣೆ ಹಾಗೂ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದ ದಿನ ನಿತ್ಯ ಬೈಕ್ ಬಳಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

ಈ ಹಿನ್ನೆಲೆಯಲ್ಲಿ ವಾಹನ ಸವಾರರು ಹೆಚ್ಚು ಮೈಲೇಜ್ ನೀಡುವ ಬೈಕುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಈ ಲೇಖನದಲ್ಲಿ ಭಾರತದ ರಸ್ತೆಗಳಲ್ಲಿ ಚಾಲನೆ ಮಾಡಲು ಸೂಕ್ತವಾದ ಬೈಕುಗಳು ಯಾವುವು ಎಂಬುದನ್ನು ನೋಡೋಣ. ಇವುಗಳಲ್ಲಿ ಸ್ವಲ್ಪ ಉತ್ತಮ ಎನ್ನಬಹುದಾದ ಮೈಲೇಜ್ ನೀಡುವ ಬೈಕ್‌ಗಳು ಸಹ ಸೇರಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಹೊಸ ಬೈಕ್ ಖರೀದಿಸಲು ಬಯಸುವವರು ಈ ಬೈಕುಗಳನ್ನು ಪರಿಗಣಿಸ ಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Hero Splendor

Hero Splendor ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಮಾರಾಟವಾಗುತ್ತಿದೆ. Hero Splendor ಬೈಕ್ ಇಂಧನ ಆರ್ಥಿಕತೆ ಹಾಗೂ ದೈನಂದಿನ ನಗರ ಬಳಕೆಗೆ ಸೂಕ್ತವಾಗಿದೆ. Hero Splendor, ದೇಶಿಯ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Hero Splendor, ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಗುರವಾದ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್'ಗೆ ಸುಮಾರು 60 ಕಿ.ಮೀಗಳಷ್ಟು ಮೈಲೇಜ್ ನೀಡುತ್ತದೆ. ಭಾರತದಲ್ಲಿ ಈಗ ಇರುವ ಪೆಟ್ರೋಲ್‌ ಬೆಲೆಯನ್ನು ಪರಿಗಣಿಸಿದರೆ, ಈ ಬೈಕ್ ಅತ್ಯುತ್ತಮ ಮೈಲೇಜ್ ನೀಡುವ ಬೈಕ್ ಆಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Hero HF Deluxe

Hero HF Deluxe ಬೈಕ್, 110 ಕೆ.ಜಿ ತೂಕವನ್ನು ಹೊಂದಿದೆ. ಇದೇ ವೇಳೆ ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 65 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಬೆಲೆ ಏರಿಕೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ Hero HF Deluxe ಬೈಕ್ ಅತ್ಯುತ್ತಮ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Honda Shine

Honda Shine ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ 114 ಕೆ.ಜಿ ತೂಕವನ್ನು ಹೊಂದಿದೆ. ದಟ್ಟಣೆಯಿರುವ ಭಾರತದ ರಸ್ತೆಗಳಲ್ಲಿ ಸವಾರಿ ಮಾಡಲು ಸೂಕ್ತವಾಗಿರುವ Honda Shine ಬೈಕಿನ ಮಾರಾಟವು ಸಹ ಉತ್ತಮವಾಗಿದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ ಸುಮಾರು 55 ಕಿ.ಮೀ ಮೈಲೇಜ್ ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Honda Unicorn

Honda Unicorn ಬೈಕ್ ಭಾರತದಲ್ಲಿ ಬಿಡುಗಡೆಯಾಗಿ ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. Honda Unicorn ವಿಶ್ವಾಸಾರ್ಹ ಹಾಗೂ ಬಾಳಿಕೆ ಬರುವಂತಹ ಬೈಕ್ ಆಗಿದೆ. 10 ವರ್ಷ ಹಳೆಯದಾದ Honda Unicorn ಬೈಕ್ ಅನ್ನು ಈಗಲೂ ಸಹ ಭಾರತದ ರಸ್ತೆಗಳಲ್ಲಿ ಕಾಣಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

ಹಳೆಯ ಬೈಕ್ ಈಗಲೂ ಸಹ ಬೈಕಿನಂತೆ ಕಾಣುತ್ತದೆ. Honda Unicorn ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 45 ಕಿ.ಮೀ ಮೈಲೇಜ್ ನೀಡುತ್ತದೆ ಎಂದು Honda ಕಂಪನಿ ಹೇಳಿ ಕೊಂಡಿದೆ. Honda Unicorn ಉತ್ತಮ ಕಾರ್ಯಕ್ಷಮತೆಯ ಜೊತೆಗೆ ಅತ್ಯುತ್ತಮ ಮೈಲೇಜ್ ನೀಡುವ ಬೈಕ್ ಆಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Bajaj Platina

Bajaj Platina ಬೈಕ್ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಧಿಕ ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 75 ಕಿ.ಮೀ ಮೈಲೇಜ್ ನೀಡುತ್ತದೆ. ಕೆಲವರು ಇದಕ್ಕಿಂತ ಹೆಚ್ಚು ಮೈಲೇಜ್ ಪಡೆಯುವುದಾಗಿ ಹೇಳಿಕೊಳ್ಳುತ್ತಾರೆ. ಪೆಟ್ರೋಲ್ ಬೆಲೆ ಏರಿಕೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಬೈಕ್ ಅನ್ನು ಖರೀದಿಸ ಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Bajaj CT 100

Bajaj CT 100 ಕೂಡ ಅತ್ಯುತ್ತಮ ಮೈಲೇಜ್ ನೀಡಬಲ್ಲ ಬೈಕ್ ಆಗಿದೆ. Bajaj Platina ಬೈಕಿನಂತೆ Bajaj CT 100 ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 75 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕ್‌ 115 ಕೆ.ಜಿ ತೂಕವನ್ನು ಹೊಂದಿದೆ. ಪ್ರತಿ ದಿನ ದೂರದ ಪ್ರಯಾಣ ಮಾಡುವವರಿಗೆ Bajaj CT 100 ಬೈಕ್ ನಿಜಕ್ಕೂ ಉತ್ತಮ ಆಯ್ಕೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

Bajaj Pulsar 150

ಭಾರತದ ಮೊದಲ ಸ್ಪೋರ್ಟ್ಸ್ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ Bajaj Pulsar 2001ರಲ್ಲಿ ಬಿಡುಗಡೆಯಾಯಿತು. ಅಂದಿನಿಂದ Bajaj Pulsar ಸರಣಿಯ ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಅದರಲ್ಲೂ ವಿಶೇಷವಾಗಿ Bajaj Pulsar 150 ಬೈಕ್ ಹಲವರನ್ನು ತನ್ನತ್ತ ಆಕರ್ಷಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಿವು

ಆಕರ್ಷಕ ನೋಟ ಹಾಗೂ ಶಕ್ತಿಶಾಲಿ ಎಂಜಿನ್ ಹೊಂದಿರುವ Bajaj Pulsar 150 ಬೈಕ್ ಇತರ ಬೈಕುಗಳ ನಡುವೆ ಎದ್ದು ಕಾಣುತ್ತದೆ. Pulsar 150 ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 50 ಕಿ.ಮೀಗಳಿಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು Bajaj ಕಂಪನಿ ಹೇಳಿಕೊಂಡಿದೆ. ಆದರೆ ಪ್ರಾಯೋಗಿಕ ಬಳಕೆಯಲ್ಲಿ ಮೈಲೇಜ್ ಅಂಕಿ ಅಂಶಗಳು ಬದಲಾಗಬಹುದು.

Most Read Articles

Kannada
English summary
Commuter bikes with more mileage in domestic market details
Story first published: Friday, October 29, 2021, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X