2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಜಾಗತಿಕವಾಗಿ ಡುಕಾಟಿ ಪಾನಿಗಲೆ ವಿ4 ಈಗಾಗಲೇ ಜನಪ್ರಿಯ ಸ್ಪೋರ್ಟ್‌ಬೈಕ್‌ಗಳಲ್ಲಿ ಒಂದಾಗಿದೆ. ಇದೀಗ ಇಟಾಲಿಯನ್ ಬ್ರ್ಯಾಂಡ್ ಡುಕಾಟಿ ತನ್ನ ಪಾನಿಗಲೆ ವಿ4 2022ರ ಮಾದರಿಯ ಸಮಗ್ರವಾದ ನವೀಕರಣವನ್ನು ನಡೆಸಿದೆ. ನಡೆಯುತ್ತಿರುವ ಡುಕಾಟಿ ವರ್ಲ್ಡ್ ಪ್ರೀಮಿಯರ್‌ನಲ್ಲಿ 2022ರ ಪ್ಯಾನಿಗೇಲ್ ವಿ4 ಮಾದರಿಯನ್ನು ಅನಾವರಣಗೊಳಿಸಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಒಟ್ಟಾರೆ ಶೈಲಿಯು ಮೂಲಭೂತವಾಗಿ ಒಂದೇ ಆಗಿದ್ದರೂ, ಫೇರಿಂಗ್‌ನಲ್ಲಿ ಅಳವಡಿಸಲಾದ ವ್ಹೀಂಗ್ ಗಳ ವಿನ್ಯಾಸವು ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ಇದು 300 ಕಿ.ಮೀ ಸ್ಪೀಡ್ ನಲ್ಲಿ ಡೌನ್‌ಫೋರ್ಸ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸಿದೆ. ತಂಪಾಗಿಸುವಿಕೆಯನ್ನು ಸುಧಾರಿಸುವ ಸಲುವಾಗಿ, ಕೆಳಗಿನ ಫೇರಿಂಗ್‌ನಲ್ಲಿನ ವೆಂಟ್ ಗಳನ್ನು ಸಹ ಟ್ವೀಕ್ ಮಾಡಲಾಗಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ 1,103 ಸಿಸಿ ಮೋಟರ್ ಕೋರ್‌ನಲ್ಲಿ ಬದಲಾಗಿಲ್ಲ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಆದರೆ ಸೂಕ್ಷ್ಮ ಬದಲಾವಣೆಗಳು ಸುಮಾರು 1.5 ಬಿಹೆಚ್‌ಪಿ ಪವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ ಮತ್ತು ಬೈಕ್ ಈಗ 215 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸಾಸ್ಟ್ ಬ್ಯಾಕ್ ಒತ್ತಡವನ್ನು ಕಡಿಮೆ ಮಾಡಲು ದೊಡ್ಡ ಎಕ್ಸಾಸ್ಟ್ ಒಳಗೊಂಡಂತೆ ಆಯಿಲ್ ಪಂಪ್ ಮತ್ತು ಲೂಬ್ರಿಕೇಶನ್ ಸಿಸ್ಟಮ್ ಅನ್ನು ನವೀಕರಿಸುವ ಮೂಲಕ ಇದನ್ನು ಸಾಧಿಸಲಾಗಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಇದಕ್ಕಿಂತ ಹೆಚ್ಚಾಗಿ, ವೇಗವರ್ಧನೆಯು ಈಗಾಗಲೇ ಅಗ್ರೇಸಿವ್ ಆದರೂ ಡುಕಾಟಿಯು ವೇಗವರ್ಧಕವನ್ನು ಸುಧಾರಿಸಲು ಗೇರ್ ಅನುಪಾತಗಳನ್ನು ಪರಿಷ್ಕರಿಸಿದೆ. ಡುಕಾಟಿಯು ಎಲೆಕ್ಟ್ರಾನಿಕ್ಸ್‌ನೊಂದಿಗೆ ಟಿಂಕರ್ ಮಾಡಿದೆ ಮತ್ತು ಅದರ ರೈಡ್-ಬೈ-ವೈರ್ ಸೆಟಪ್‌ಗೆ ಬದಲಾವಣೆಗಳನ್ನು ಮಾಡಿದೆ. ಪರಿಣಾಮವಾಗಿ, ಈಗ ಫುಲ್, ಹೈ, ಮೀಡಿಯಂ ಮತ್ತು ಲೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿವೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಇನ್ನು ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ 43 ಎಂಎಂ ಶೋ ಬಿಗ್ ಪಿಸ್ಟನ್ ಫೋರ್ಕ್‌ಗಳನ್ನು ಪಡೆಯುವುದನ್ನು ಮುಂದುವರೆಸಿದೆ. ಆದರೆ SP ವೇರಿಯಂಟ್‌ನ NIX30 ಈಗ ಹೊಸ Ohlins NPX 25/30 ಎಲೆಕ್ಟ್ರಾನಿಕ್ ಫೋರ್ಕ್‌ಗಳಿಗೆ ದಾರಿ ಮಾಡಿಕೊಟ್ಟಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಹಿಂಭಾಗದಲ್ಲಿ, ಸ್ಟ್ಯಾಂಡರ್ಡ್ ಸ್ಯಾಕ್ಸ್ ಮೊನೊ-ಶಾಕ್‌ನೊಂದಿಗೆ ಮುಂದುವರಿಯುತ್ತದೆ ಮತ್ತು TTX36 ಸ್ಪ್ರಿಂಗ್ ಅನ್ನು ಉಳಿಸಿಕೊಂಡಿದೆ. ಎಲ್ಲಾ ಮಾಹಿತಿಯನ್ನು ಪ್ರದರ್ಶಿಸುವ ಐದು ಇಂಚಿನ ಬಣ್ಣದ TFT ಡಿಸ್ ಪ್ಲೇಯನ್ನು ಮುಂದುವರಿಸಲಾಗುತ್ತದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಹೊಸದೇನಿದ್ದರೂ ಟ್ರ್ಯಾಕ್ EVO ಮೋಡ್ ಆಗಿದ್ದು ಅದು ಡೇಟಾದ ಒಟ್ಟಾರೆ ಥೀಮ್ ಅನ್ನು ಬದಲಾಯಿಸುತ್ತದೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ಸ್ಲೈಡ್ ಕಂಟ್ರೋಲ್, ಇಂಜಿನ್ ಬ್ರೇಕ್ ಕಂಟ್ರೋಲ್, ಪವರ್ ಲಾಂಚ್ ಮತ್ತು ಬೈ-ಡೈರಕ್ಷನ್ ಕ್ವಿಕ್ ಶಿಫ್ಟರ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳು ಇನ್ನೂ ಪ್ಯಾಕೇಜ್‌ನ ಭಾಗವಾಗಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಇನ್ನು ಭಾರತದಲ್ಲಿ ಡುಕಾಟಿ ಇಂಡಿಯಾ ತನ್ನ ಹೊಸ ಪಾನಿಗಲೆ ವಿ4 ಎಸ್‌ಪಿ ಸೂಪರ್‌ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಈ ಸೂಪರ್‌ಬೈಕ್ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ. 36,07,000 ಲಕ್ಷಗಳಾಗಿದೆ. ಕಂಪನಿಯು ಭಾರತದಲ್ಲಿರುವ ತನ್ನ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಹೊಸ ಪಾನಿಗಲೆ ವಿ4 ಎಸ್‌ಪಿ ಬೈಕಿನ ಬುಕ್ಕಿಂಗ್ ಗಳನ್ನು ಆರಂಭಿಸಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ಅದರ ಸ್ಟಾಂಡರ್ಡ್ ಮಾದರಿಗಿಂತ ಹೆಚ್ಚು ರೇಸ್ ಟ್ಯೂನ್ ಹಾಗೂ ಕಾರ್ಯಕ್ಷಮತೆ ಆಧಾರಿತ ಸ್ಪೋರ್ಟ್ಸ್ ಬೈಕ್ ಆಗಿದೆ. ಕಂಪನಿಯು ಈ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚು ಫೀಚರ್ ಗಳನ್ನು ನೀಡಿದೆ. ಈ ಬೈಕ್ ಮೋಟೋಜಿಪಿ ಹಾಗೂ ಎಸ್‌ಬಿಕೆ ಚಾಂಪಿಯನ್‌ಶಿಪ್‌ಗಳ ಪೂರ್ವ ಋತು ಪರೀಕ್ಷೆಗಳಲ್ಲಿ ಬಳಸಲಾದ ಡುಕಾಟಿ ಕೋರ್ಸ್ ಬೈಕ್‌ನಿಂದ ಸ್ಫೂರ್ತಿ ಪಡೆಯುವ ಹೊಸ ವಿಂಟರ್ ಟೆಸ್ಟ್ ಲೈವರಿಯನ್ನು ಒಳಗೊಂಡಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಈ ಬೈಕ್ ಸ್ಟಾಂಡರ್ಡ್ ಪಾನಿಗಲೆ V4S ಬೈಕಿಗಿಂತ ಭಿನ್ನವಾಗಿದ್ದು, ಮ್ಯಾಟ್ ಬ್ಲಾಕ್ ಪೇಂಟೆಡ್ ಫೇರಿಂಗ್, ಮಾರ್ಚೆಸಿನಿ ಫೋರ್ಜ್ಡ್ ಮೆಗ್ನೀಸಿಯಮ್ ವ್ಹೀಲ್, ಬ್ರಷ್ಡ್ ಅಲ್ಯೂಮಿನಿಯಂ ಫ್ಯೂಯಲ್ ಟ್ಯಾಂಕ್‌ನಲ್ಲಿ ರೆಡ್ ಅಸೆಂಟ್ ಗಳನ್ನು ಹೊಂದಿದೆ. ಈ ಬೈಕ್ ಕಾರ್ಬನ್ ಫ್ರಂಟ್ ಮಡ್‌ಗಾರ್ಡ್‌, ಬಿಲ್ಲೆಟ್ ಅಲ್ಯೂಮಿನಿಯಂ ಅಡ್ಜಸ್ಟಬಲ್ ರೈಡರ್ ಫುಟ್‌ಪೆಗ್‌ಗಳನ್ನು ಕೂಡ ಹೊಂದಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಇವುಗಳನ್ನು ಸವಾರನ ಆದ್ಯತೆಯ ಸ್ಥಾನಕ್ಕೆ ಅನುಗುಣವಾಗಿ ಅಡ್ಜಸ್ಟ್ ಮಾಡಬಹುದು. ಈ ಬೈಕಿನಲ್ಲಿ ಓಪನ್ ಕಾರ್ಬನ್ ಕ್ಲಚ್ ಕವರ್, ಲೈಸೆನ್ಸ್ ಪ್ಲೇಟ್ ಹೋಲ್ಡರ್, ಮಿರರ್ ರಿಮೂವಲ್ ಕ್ಯಾಪ್, ಡುಕಾಟಿ ಡೇಟಾ ಅನಾಲೈಸರ್ + (ಡಿಡಿಎ+) ಟೆಲಿಮೆಟ್ರಿ ಕಿಟ್ ಜೊತೆಗೆ ಜಿಪಿಎಸ್ ಮಾಡ್ಯೂಲ್ ಗಳಂತಹ ಹಲವಾರು ಟ್ರ್ಯಾಕ್ ಡೇಸ್ ಆಧಾರಿತ ಅಕ್ಸೆಸರೀಸ್ ಅನ್ನು ಕೂಡ ನೀಡಲಾಗಿದೆ.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕಿನಲ್ಲಿ 1,103 ಸಿಸಿಯ ಡೆಸ್ಮೊಸೆಡಿಸಿ ಸ್ಟ್ರಾಡೇಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 13,000 ಆರ್‌ಪಿ‌ಎಂನಲ್ಲಿ 214 ಬಿ‌ಹೆಚ್‌ಪಿ ಪವರ್ ಹಾಗೂ 9,500 ಆರ್‌ಪಿ‌ಎಂ ನಲ್ಲಿ 12.6 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಡುಕಾಟಿ ಇಂಡಿಯಾ ತನ್ನ ಡುಕಾಟಿ ಸ್ಟ್ರೀಟ್‌ ಫೈಟರ್ ವಿ2 ಬೈಕ್ ಅನ್ನು ಅನಾವರಣಗೊಳಿಸಿತ್ತು.

2022ರ Ducati Panigale V4 ಸ್ಪೋರ್ಟ್ ಬೈಕ್ ಅನಾವರಣ

ಇನ್ನು ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಮುಂದಿನ ತಿಂಗಳು 2022ರ ಡುಕಾಟಿ ಪಾನಿಗಲೆ ವಿ4 ಬೈಕ್ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಸ್ಪೋರ್ಟ್ ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಡುಕಾಟಿ ducati
English summary
Ducati unveiled 2022 panigale v4 find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X