Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- News
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ಮರು ಬಳಕೆ ಮಾಡಲಿದೆ ಈ ಸ್ಟಾರ್ಟ್ ಅಪ್ ಕಂಪನಿ
ಎಲೆಕ್ಟ್ರಿಕ್ ತ್ಯಾಜ್ಯವನ್ನು ಸುರಕ್ಷಿತವಾಗಿ ನಾಶಪಡಿಸುವುದು ನಿಜಕ್ಕೂ ದೊಡ್ಡ ಸವಾಲು. ಎಲೆಕ್ಟ್ರಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಡೆಲಿವರಿ ಸ್ಟಾರ್ಟ್ಅಪ್ ಕಂಪನಿಯಾದ ಇ-ಬೈಕ್ ಗೋ ಬ್ಯಾಟರಿಗಳ ಮರುಬಳಕೆಯನ್ನು ಆರಂಭಿಸಿದೆ.

ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಹಳೆಯ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಮರುಬಳಕೆ ಮಾಡುತ್ತಿದೆ. ಕಂಪನಿಯು ಶೀಘ್ರದಲ್ಲೇ ಲೆಡ್ ಆಸಿಡ್ ಬ್ಯಾಟರಿಗಳನ್ನುಮರುಬಳಕೆ ಮಾಡಲಿದೆ. ಕಂಪನಿಯ ಪ್ರಕಾರ, ದೇಶದ ಹೆಚ್ಚಿನ ತ್ರಿಚಕ್ರ ವಾಹನಗಳಲ್ಲಿ ಲೆಡ್ ಆಸಿಡ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.

ಈ ತಂತ್ರದ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಅವುಗಳ ಸಾಮರ್ಥ್ಯದ ಸುಮಾರು 25%ನಷ್ಟು ಕಡಿಮೆಗೊಳಿಸಿದಾಗ ಆ ಬ್ಯಾಟರಿಗಳನ್ನು ವಾಹನಗಳಿಂದಹೊರತೆಗೆಯಬಹುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉದಾಹರಣೆಗೆ ಒಂದು ವಾಹನವು 1,000 ವ್ಯಾಟ್ ಬ್ಯಾಟರಿಯನ್ನು ಬಳಸಿದರೆ, ನಿರ್ದಿಷ್ಟ ಅವಧಿಯ ಬಳಕೆಯ ನಂತರ ತನ್ನ ಸಾಮರ್ಥ್ಯದ 750 ವ್ಯಾಟ್'ಗಳನ್ನು ಮಾತ್ರ ಸಂಗ್ರಹಿಸಿದರೆ, ಮರುಬಳಕೆಗಾಗಿ ಬ್ಯಾಟರಿಯನ್ನು ವಾಹನದಿಂದ ಹೊರತೆಗೆಯಬಹುದು.

ಲಿಥಿಯಂ ಐಯಾನ್ ಬ್ಯಾಟರಿಗಳಲ್ಲಿ ಮರುಬಳಕೆಗಾಗಿ 99%ಕ್ಕಿಂತ ಹೆಚ್ಚು ಲಿಥಿಯಂ ಅನ್ನು ಹೊರತೆಗೆಯಬಹುದು. ಈ ಲಿಥಿಯಂ ಅನ್ನು ಹೊಸ ಬ್ಯಾಟರಿಗಳನ್ನುತಯಾರಿಸಲು ಬಳಸಬಹುದು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದರ ಜೊತೆಗೆ ಬಳಸಿದ ಬ್ಯಾಟರಿಗಳನ್ನು ಸೌರ ಸ್ಥಾವರಗಳಲ್ಲಿ ಅಥವಾ ಇತರ ಉದ್ದೇಶಗಳಿಗಾಗಿ ಸಹ ಬಳಸಬಹುದು. ಮರುಬಳಕೆ ಪ್ರಕ್ರಿಯೆಯಲ್ಲಿ ಎಲೆಕ್ಟ್ರಿಕ್ ತ್ಯಾಜ್ಯವು ಉತ್ಪಾದನೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಇ-ಬೈಕ್ ಗೋ ಹೇಳಿದೆ.

1ನೇ ಹಂತದ ಹಾಗೂ 2ನೇ ಹಂತದ ನಗರಗಳಲ್ಲಿ ಮರುಬಳಕೆ ಹಕ್ಕುಗಳನ್ನು ಪಡೆಯಲಾಗಿದೆ. ಬ್ಯಾಟರಿಗಳನ್ನು ಮರುಬಳಕೆ ಮಾಡುವುದರಿಂದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆಯನ್ನು ಕಡಿಮೆ ಮಾಡಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಯಾವುದೇ ಎಲೆಕ್ಟ್ರಿಕ್ ವಾಹನದ ಒಟ್ಟು ವೆಚ್ಚದ 50%ನಷ್ಟು ಮೊತ್ತವನ್ನು ಬ್ಯಾಟರಿಗಳ ಮೇಲೆ ಖರ್ಚು ಮಾಡಲಾಗುತ್ತದೆ. ಭಾರತದಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳು ಕಡಿಮೆ ಸಂಖ್ಯೆಯಲ್ಲಿ ಉತ್ಪಾದನೆಯಾಗುವುದರಿಂದ ಅವುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚುತ್ತಿದೆ. 2020ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ 27,260 ಯುನಿಟ್ ಹೈಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, 2019ರ ಹಣಕಾಸು ವರ್ಷದಲ್ಲಿ 27,224 ಯುನಿಟ್‌ಗಳು ಮಾರಾಟವಾಗಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇ-ಬೈಕ್ ಗೋ 2020ರ ಹಣಕಾಸು ವರ್ಷದಲ್ಲಿ 1,400 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದೆ. ಈ ಪ್ರಮಾಣವು ಒಟ್ಟಾರೆ ಮಾರಾಟದಲ್ಲಿ 5%ನಷ್ಟಿದೆ.

ಬ್ಯಾಟರಿ ಮರುಬಳಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಇ-ಬೈಕ್ ಗೋ ಸಂಸ್ಥಾಪಕ ಸಹ-ಸಿಇಒ ಇರ್ಫಾನ್ ಖಾನ್, ಈ ಪ್ರಕ್ರಿಯೆಯು ಪರಿಸರಕ್ಕೆ ಮಾರಕವಾಗಿರುವ ಲಿಥಿಯಂ ಗಣಿಗಾರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರಿಂದಾಗಿ ಬ್ಯಾಟರಿಗಳ ಮೇಲೆ ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆಯುವುದಲ್ಲದೆ, ಸಮಾಜಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.