ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವಾರು ಯೋಜನೆಗಳನ್ನು ಘೋಷಿಸುತ್ತಿವೆ. ಆದರೆ ಎಲೆಕ್ಟ್ರಿಕ್ ಸೈಕಲ್ ಗಳನ್ನು ಈ ಎಲ್ಲಾ ಯೋಜನೆಗಳಿಂದ ಹೊರಗಿಡಲಾಗಿದೆ. ಇದರಿಂದ ಎಲೆಕ್ಟ್ರಿಕ್ ಸೈಕಲ್ ಕಂಪನಿಗಳು ಸಹಜವಾಗಿಯೇ ಆತಂಕಕ್ಕೀಡಾಗಿವೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಈ ಬಗ್ಗೆ ಮಾತನಾಡಿರುವ ಹೀರೋ ಸೈಕಲ್ಸ್‌ನ ಎಂಡಿ ಪಂಕಜ್ ಮುಂಜಾಲ್, ಎಲೆಕ್ಟ್ರಿಕ್ ಸೈಕಲ್ ಉದ್ಯಮವನ್ನು ಸರ್ಕಾರದ ಉತ್ಪಾದನೆ ಅಥವಾ ರಫ್ತು ಉತ್ತೇಜನ ನೀತಿಯಿಂದ ಹೊರಗಿಡಲಾಗಿದೆ. ಇದರಿಂದಾಗಿ ಉದ್ಯಮವು ನಷ್ಟವನ್ನು ಎದುರಿಸಬಹುದು ಎಂದು ಹೇಳಿದ್ದಾರೆ. ಎಲೆಕ್ಟ್ರಿಕ್ ಸೈಕಲ್ ಗಳ ಬಗ್ಗೆ ಸರ್ಕಾರಗಳು ದ್ವಂದ್ವ ನೀತಿಯನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಡಿಯಲ್ಲಿ ಇತ್ತೀಚೆಗೆ ಆರಂಭಿಸಲಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಸ್ಕೀಮ್ ಎಲೆಕ್ಟ್ರಿಕ್ ಸೈಕಲ್ ಉದ್ಯಮವನ್ನು ಒಳಗೊಂಡಿಲ್ಲ. ಜೊತೆಗೆ ಎಲೆಕ್ಟ್ರಿಕ್ ಸೈಕಲ್ ಉತ್ಪಾದಿಸುವ ಕಂಪನಿಗಳಿಗೆ ಯಾವುದೇ ಪ್ರೋತ್ಸಾಹವನ್ನು ಘೋಷಿಸಿಲ್ಲ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಹಲವು ದೇಶಗಳಿಂದ ಕಠಿಣ ಸವಾಲು

ಸರ್ಕಾರಗಳ ದ್ವಂದ್ವ ನೀತಿಯಿಂದಾಗಿ, ಮುಂದಿನ 5 ವರ್ಷಗಳಲ್ಲಿ ಭಾರತವು ಸುಮಾರು 10 ಸಾವಿರ ಕೋಟಿ ಎಲೆಕ್ಟ್ರಿಕ್ ಸೈಕಲ್ ರಫ್ತು ಆದೇಶಗಳನ್ನು ಕಳೆದುಕೊಳ್ಳಬಹುದು ಎಂದು ಅವರು ಹೇಳಿದರು. ಭಾರತೀಯ ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಗಳು ಹಲವು ದೇಶಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದ ಇ ಸೈಕಲ್ ಉದ್ಯಮಕ್ಕೆ ಕಾಲಿಡಲು ಬಯಸುತ್ತಿರುವ ಚೀನಾದಿಂದ ದೊಡ್ಡ ಸವಾಲು ಎದುರಾಗಿದೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ತಪ್ಪು ನೀತಿಯಿಂದಾಗಿ ನಾವು ಯುರೋಪಿಯನ್ ಒಕ್ಕೂಟದ ಸೈಕಲ್ ಪೂರೈಕೆಯನ್ನು ಚೀನಾ ಹಾಗೂ ಇತರ ದೇಶಗಳಿಂದ ಕಳೆದು ಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ಸೈಕಲ್ ಉದ್ಯಮದ ಮೇಲಿನ ಆಮದು ಸುಂಕವನ್ನು ಸರ್ಕಾರಗಳು ಅಭಿವೃದ್ಧಿ ಹೊಂದಿದ ದೇಶಗಳ ರೀತಿಯಲ್ಲಿ ಶೂನ್ಯಕ್ಕೆ ಇಳಿಸಬೇಕು ಅಥವಾ ದೇಶಗಳ ಸಾಮಾನ್ಯ ಉಲ್ಲೇಖದಂತೆ ಶೇ 14ಕ್ಕೆ ನಿಗದಿಪಡಿಸ ಬೇಕು ಎಂದು ಹೇಳಿದರು.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಹೀರೋ ಸೈಕಲ್ಸ್ ನಿಂದ ರೂ. 1000 ಕೋಟಿ ಹೂಡಿಕೆ

ಹೀರೋ ಸೈಕಲ್ಸ್ ಮೂರು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಸೈಕಲ್ ಗಳ ಉತ್ಪಾದನೆಯನ್ನು ಆರಂಭಿಸಿತು. ಕಂಪನಿಯು ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಇ ಸೈಕಲ್‌ಗಳ ಉತ್ಪಾದನೆಗೆ ಹೊಸ ಘಟಕದಲ್ಲಿ ರೂ. 300 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಇದಲ್ಲದೇ, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಬಲಪಡಿಸಲು ಇಂಗ್ಲೆಂಡಿನಲ್ಲಿ ರಫ್ತು ಹಬ್ ಸ್ಥಾಪಿಸಲು ಹಾಗೂ ಮಾರಾಟಗಾರರಿಗೆ ನೆಲೆಯನ್ನು ನಿರ್ಮಿಸಲು ಕಂಪನಿಯು ಕ್ರಮವಾಗಿ ರೂ. 400 ಕೋಟಿ ಹಾಗೂ ರೂ. 300 ಕೋಟಿ ಹೂಡಿಕೆ ಮಾಡಿದೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಆಮದು ಸುಂಕ ಕಡಿಮೆ ಮಾಡಲು ಬೇಡಿಕೆ

ಅಂಕಿ ಅಂಶಗಳನ್ನು ಹಂಚಿಕೊಂಡ ಪಂಕಜ್ ಮುಂಜಾಲ್, ಯುರೋಪಿಯನ್ ಒಕ್ಕೂಟದಲ್ಲಿ ಇ ಸೈಕಲ್ ವ್ಯವಹಾರವು ವರ್ಷಕ್ಕೆ 5 ಬಿಲಿಯನ್ ಯೂರೋಗಳಾಗಿದ್ದು, ಇದು ಭಾರತಕ್ಕಿಂತ 50 ಪಟ್ಟು ಹೆಚ್ಚು ಎಂದು ಹೇಳಿದರು. ಮುಂದಿನ 10 ವರ್ಷಗಳಲ್ಲಿ ಯುರೋಪಿನಲ್ಲಿ ಇ ಸೈಕಲ್ ಮಾರುಕಟ್ಟೆ 5 ಪಟ್ಟು ಬೆಳೆಯುತ್ತದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಸೈಕಲ್ ಉತ್ಪಾದಕ ರಾಷ್ಟ್ರವಾಗಿದೆ. ನಾವು ಆಮದು ಸುಂಕವನ್ನು ಕಡಿಮೆ ಮಾಡಿದರೆ, ಯುರೋಪಿನಲ್ಲಿ ಸೈಕಲ್ ಗಳ ರಫ್ತು ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿದರು.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಹೀರೋ ಸೈಕಲ್ಸ್ ಕಂಪನಿಯು ಕೆಲ ತಿಂಗಳ ಹಿಂದಷ್ಟೇ ತನ್ನ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಮೊದಲ ಬ್ಯಾಚ್ ಅನ್ನು ಜರ್ಮನಿಗೆ ಕಳುಹಿಸಿತ್ತು. ಮೊದಲ ಬ್ಯಾಚ್'ನಲ್ಲಿ 200 ಯುನಿಟ್ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಕಳುಹಿಸಲಾಗಿತ್ತು. ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಭವಿಷ್ಯದಲ್ಲಿ ಯುರೋಪ್ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ಗಳನ್ನು ರವಾನಿಸುವ ಮೂಲಕ ಯುರೋಪಿಯನ್ ಯೂನಿಯನ್ (ಇಯು) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿ ಉದ್ದೇಶಿಸಿದೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

2025ರ ವೇಳೆಗೆ ಯುರೋಪಿಯನ್ ಮಾರುಕಟ್ಟೆಯಿಂದ 300 ಮಿಲಿಯನ್ ಯುರೋ ಅಂದರೆ ಸುಮಾರು ರೂ. 2,600 ಕೋಟಿ ಗಳಿಸಲು ಹೀರೋ ಸೈಕಲ್ಸ್ ಮುಂದಾಗಿದೆ. ಹೀರೋ ತನ್ನ ಅಂತರರಾಷ್ಟ್ರೀಯ ಬ್ರಾಂಡ್ ಹೆಚ್‌ಎನ್‌ಎಫ್ ಅಡಿಯಲ್ಲಿ ಯುರೋಪಿನಲ್ಲಿ ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ. ಹೀರೋ ಸೈಕಲ್ಸ್ ಈ ಸಾಗಣೆಯು ಹೆಚ್‌ಎಂಸಿಯನ್ನು ಯುರೋಪಿನ ಅತಿದೊಡ್ಡ ಸಂಪೂರ್ಣ ಸಂಯೋಜಿತ ಇ-ಸೈಕಲ್ ಕಂಪನಿಯಾಗಿ ಸ್ಥಾಪಿಸುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

2030ರ ವೇಳೆಗೆ ಯುರೋಪಿನಲ್ಲಿ ಇ-ಸೈಕಲ್ ಮಾರಾಟವು ಸುಮಾರು 15 ಮಿಲಿಯನ್ ಯೂನಿಟ್‌ಗಳನ್ನು ತಲುಪಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ. ಈ ರೀತಿ ರಫ್ತು ಹಾಗೂ ಇ-ಸೈಕಲ್‌ಗಳ ಮಾರಾಟವನ್ನು ಹೆಚ್ಚಿಸುವ ಮೂಲಕ ಈ ವಿಭಾಗದಲ್ಲಿ ಮಾರುಕಟ್ಟೆ ಪ್ರಾಬಲ್ಯ ಸಾಧಿಸಬಹುದು. ಉತ್ತಮ ಗುಣಮಟ್ಟದ ಇ-ಸೈಕಲ್‌ಗಳನ್ನು ಉತ್ಪಾದಿಸಲು ಹೀರೋ ಉತ್ಪಾದನಾ ಸಾಮರ್ಥ್ಯವನ್ನು ಹೆಚ್‌ಎನ್‌ಎಫ್‌ನ ಎಂಜಿನಿಯರಿಂಗ್ ಹಾಗೂ ವಿನ್ಯಾಸ ಪರಿಣತಿ ವಿಭಾಗ ಮುಂದಾಗಿದೆ.

ಎಲೆಕ್ಟ್ರಿಕ್ ಸೈಕಲ್ ಉದ್ಯಮ ಸಂಕಷ್ಟದಲ್ಲಿದೆ ಎಂದ ಹೀರೋ ಸೈಕಲ್ಸ್ ಎಂಡಿ

ಲುಧಿಯಾನದಲ್ಲಿರುವ 100 ಎಕರೆ ಸೈಕಲ್ ವ್ಯಾಲಿ ಇದಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ. ಕರೋನಾ ಸಾಂಕ್ರಾಮಿಕದಿಂದಾಗಿ ಸರಬರಾಜು ಸರಪಳಿಯು ಅಸ್ತವ್ಯಸ್ತಗೊಂಡಿದೆ ಎಂದು ಹೀರೋ ಸೈಕಲ್ಸ್ ಕಂಪನಿ ಹೇಳಿದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Electric bicycle business in india is at risk says hero cycles md details
Story first published: Thursday, October 7, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X