ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ತನ್ನ ಜನಪ್ರಿಯ ದ್ವಿಚಕ್ರ ವಾಹನವಾದ ಹಿಮಾಲಯನ್ ಅಡ್ವೆಂಚರ್ ಬೈಕ್‌ಗಳನ್ನು ಜಪಾನ್‌ನಲ್ಲಿ ಮಾರಾಟ ಮಾಡುವುದಾಗಿ ತಿಳಿಸಿತ್ತು. ಕಂಪನಿಯು ಈಗಾಗಲೇ ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‌ಸೆಪ್ಟರ್ 650 ಟ್ವಿನ್ ಬೈಕ್'ಗಳನ್ನು ಜಪಾನ್‌ನಲ್ಲಿ ಮಾರಾಟ ಮಾಡುತ್ತಿದೆ. ಈಗ ಆ ಸಾಲಿಗೆ ಹಿಮಾಲಯನ್ ಬೈಕ್ ಸಹ ಸೇರ್ಪಡೆಯಾಗಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಈ ಮೂಲಕ ರಾಯಲ್ ಎನ್‌ಫೀಲ್ಡ್ ಕಂಪನಿಯು ಜಪಾನ್‌ನಲ್ಲಿ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ. ಈಗ ಮತ್ತೊಂದು ಭಾರತೀಯ ಕಂಪನಿ ಜಪಾನ್‌ಗೆ ಕಾಲಿಟ್ಟಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಪುಣೆ ಮೂಲದ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ ಅಪ್ ಕಂಪನಿಯಾದ ಇಮೊಟೊರಾಡ್ ಜಪಾನ್‌ನಲ್ಲಿ ಮೂರು ಪ್ರಮುಖ ಇ-ಬೈಸಿಕಲ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಈ ಮೂರು ಇ-ಬೈಸಿಕಲ್'ಗಳು ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಎಂಬುದು ವಿಶೇಷ. ಇದರ ಬೆನ್ನಲ್ಲೇ ಕಂಪನಿಯು ಜಪಾನ್'ನಲ್ಲಿ ನಾಲ್ಕನೇ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಜಪಾನ್‌ನಲ್ಲಿ ಇ-ವಾಹನ ವಿಭಾಗದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಸ್ವಲ್ಪ ಹೆಚ್ಚು ಆಕ್ರಮಣಕಾರಿಯಾಗಿ ತನ್ನ ವಾಹನಗಳನ್ನು ಬಿಡುಗಡೆಗೊಳಿಸಲು ಮುಂದಾಗುತ್ತಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಇಮೊಟೊರಾಡ್ ಕಂಪನಿಯು ಜಪಾನ್‌ನಲ್ಲಿ ಮಾತ್ರವಲ್ಲದೆ ನೇಪಾಳದಲ್ಲೂ ಹೊಸ ವ್ಯಾಪಾರ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಟಿ-ರೆಕ್ಸ್ ಹಾಗೂ ಇಎಂಎಕ್ಸ್ ಎಂಬ ಎರಡು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಕಂಪನಿಯು ನೇಪಾಳಕ್ಕೆ ಮೊದಲ ಬಾರಿಗೆ ಕಾಲಿಟ್ಟಿದೆ. ಭಾರತದಲ್ಲಿ ಇಮೊಟೊರಾಡ್ ಕಂಪನಿಯು ಎರಡು ಇ-ಬೈಸಿಕಲ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಕಂಪನಿಯು ಜಪಾನ್‌ನಲ್ಲಿ ಎಕ್ಸ್‌ಪ್ಲೋರರ್, ಗ್ಲೈಡರ್ ಹಾಗೂ ಡಾಲ್ಫಿನ್ ಎಂಬ ಮೂರು ಇ-ಬೈಸಿಕಲ್ ಗಳನ್ನು ಪರಿಚಯಿಸಿದೆ. ಕಂಪನಿಯು ಶೀಘ್ರದಲ್ಲೇ ಈ ಸಾಲಿಗೆ ಇನ್ನೂ ಕೆಲವು ಇ-ಸೈಕಲ್ ಗಳನ್ನು ಸೇರಿಸಲು ನಿರ್ಧರಿಸಿದೆ. ಈಗ ಬಿಡುಗಡೆಗೊಳಿಸಲಾದ ಎಲ್ಲಾ ಮೂರು ಇ-ಬೈಸಿಕಲ್ ಗಳನ್ನು ನಿರ್ದಿಷ್ಟವಾಗಿ ಜಪಾನಿನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಭಾರತ ಹಾಗೂ ಜಪಾನ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಇ-ಬೈಸಿಕಲ್ ಗಳು ಸ್ವಲ್ಪ ವ್ಯತ್ಯಾಸವನ್ನು ಹೊಂದಿವೆ. ಈ ಹಿಂದೆ ಭಾರತದಲ್ಲಿ ವಹಿವಾಟು ಆರಂಭಿಸಿದ್ದ ಕಂಪನಿ ಅರಬ್ ದೇಶಗಳಲ್ಲೂ ತನ್ನ ಎಲೆಕ್ಟ್ರಿಕ್ ಬೈಸಿಕಲ್ ಗಳನ್ನು ಮಾರಾಟ ಮಾಡಲಿದೆ. ಇಮೊಟೊರಾಡ್ ತನ್ನ ಸಾಗರೋತ್ತರ ವ್ಯವಹಾರವನ್ನು ವಿಸ್ತರಿಸಲು ಜಪಾನ್ ಹಾಗೂ ನೇಪಾಳದಲ್ಲಿ ತನ್ನ ಇ-ಬೈಸಿಕಲ್ ಗಳನ್ನು ಬಿಡುಗಡೆಗೊಳಿಸಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಆದರೆ ಯಾವ ರೀತಿಯ ಇ-ಬೈಸಿಕಲ್ ಗಳನ್ನು ಪರಿಚಯಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ. ನೇಪಾಳದಲ್ಲಿ ಪರಿಚಯಿಸಲಾದ ಇ-ಬೈಸಿಕಲ್ ಹಾಗೂ ಭಾರತದಲ್ಲಿ ಮಾರಾಟವಾಗುವ ಇ-ಬೈಸಿಕಲ್ ಬಹುತೇಕ ಒಂದೇ ಆಗಿರುವುದರಿಂದ ಅವುಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ಬೈಕ್‌, ಎಲೆಕ್ಟ್ರಿಕ್ ಸ್ಕೂಟರ್‌, ಎಲೆಕ್ಟ್ರಿಕ್ ಆಟೋ ಹಾಗೂ ಎಲೆಕ್ಟ್ರಿಕ್ ಕಾರುಗಳ ನಂತರ ಎಲೆಕ್ಟ್ರಿಕ್ ಮಿನಿ ಲೋಡ್ ವ್ಯಾನ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರ ಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಎಲೆಕ್ಟ್ರಿಕ್ ಸೈಕಲ್ ಗಳು ದಿನ ನಿತ್ಯ ದ್ವಿಚಕ್ರ ವಾಹನ ಬಳಸುವವರಿಗೆ ವರದಾನವಾಗಿವೆ ಎಂದೇ ಹೇಳಬಹುದು. ಎಲೆಕ್ಟ್ರಿಕ್ ಸೈಕಲ್ ಗಳು ಎಲೆಕ್ಟ್ರಿಕ್ ಸ್ಕೂಟರ್‌ ಹಾಗೂ ಎಲೆಕ್ಟ್ರಿಕ್ ಬೈಕ್‌ಗಳಿಗೆ ಸರಿ ಸಮಾನವಾಗಿ ಮಾರಾಟವಾಗುತ್ತಿವೆ. ಈ ಲೇಖನದಲ್ಲಿ ಭಾರತದ ಅತ್ಯುತ್ತಮ ಎಲೆಕ್ಟ್ರಿಕ್ ಸೈಕಲ್ ಗಳೆಂದು ಪರಿಗಣಿಸಬಹುದಾದ ಕೆಲವು ಎಲೆಕ್ಟ್ರಿಕ್ ಸೈಕಲ್‌ಗಳು ಯಾವುವು ಎಂಬುದನ್ನು ನೋಡುವುದಾದರೆ...

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

Hero Lectro E-Zephyr TX 700C SS

ಬೆಲೆ: ರೂ. 21,000

ಪ್ರಮುಖ ಸೈಕಲ್ ತಯಾರಕ ಕಂಪನಿಯಾದ Hero Lectro ಹಲವು ಎಲೆಕ್ಟ್ರಿಕ್ ಸೈಕಲ್ ಗಳನ್ನು ಮಾರಾಟ ಮಾಡುತ್ತದೆ. ಅವುಗಳಲ್ಲಿ E-Zephyr TX 700C SS ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ಒಂದಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಕಳೆದ ಕೆಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸೈಕಲ್ ಬಯಸುವವರಿಗೆ E-Zephyr TX 700C SS ಉತ್ತಮ ಆಯ್ಕೆಯಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ 250 ವ್ಯಾ, 36 ವೋಲ್ಟ್ ಹಬ್ ಮೋಟರ್ ಹೊಂದಿದೆ. ಈ ಮೋಟರ್ ಗರಿಷ್ಠ 40 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 5.8 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 25 ರಿಂದ 45 ಕಿ.ಮೀಗಳವರೆಗೆ ಚಲಿಸಬಹುದು. ಈ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಸೈಕಲ್ ಹಲವು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

Nuze i1

ಬೆಲೆ: ರೂ. 30,616

Nuze i1 ಎಲೆಕ್ಟ್ರಿಕ್ ಬೈಕ್ ಎಲ್ಲಾ ರೀತಿಯ ಬಳಕೆದಾರರಿಗೆ ಸೂಕ್ತವಾಗಿದೆ. Nuze i1 ಎಲೆಕ್ಟ್ರಿಕ್ ಸೈಕಲ್ ನಲ್ಲಿ 5.2 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ಅಳವಡಿಸಲಾಗಿದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 25 ಕಿ.ಮೀಗಳಿಂದ 30 ಕಿ.ಮೀಗಳವರೆಗೆ ಚಲಿಸಬಹುದು.

ಜಪಾನ್, ನೇಪಾಳಗಳಲ್ಲಿಯೂ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಪುಣೆ ಮೂಲದ ಕಂಪನಿ

ಈ ಬ್ಯಾಟರಿಯನ್ನು 3 ರಿಂದ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. Nuze i1 ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಸಸ್ಪೆಂಷನ್, ಹಗುರವಾದ ಫ್ರೇಮ್ ಸೇರಿದಂತೆ ಎರಡೂ ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

Article Published On: Saturday, December 18, 2021, 16:35 [IST]
English summary
Emotorad launches e bicycles in japan and nepal details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+