ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೈದರಾಬಾದ್ ಮೂಲದ ಇವಿ ಸ್ಟಾರ್ಟ್ ಅಪ್ ಗ್ರಾವ್ಟನ್ ಮೋಟಾರ್ಸ್ ಕ್ವಾಂಟಾ ಎಂಬ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,99,000 ಗಳಾಗಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಈ ಹೊಸ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕಿನ ವಿತರಣೆಯನ್ನು ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಪ್ರಾರಂಭಿಸಬಹುದು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ರೇಮ್, ಮೋಟಾರ್ ಕೇಸಿಂಗ್ ಮತ್ತು ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಕ್ವಾಂಟಾ ಮಾದರಿ 2016 ರಿಂದ ಅಭಿವೃದ್ಧಿಯಲ್ಲಿತ್ತು. ಮೋಟರ್‌ನ ಸೆಲ್ಸ್ ಮತ್ತು ಮ್ಯಾಗ್ನೆಟ್ ಅನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ನಗರಗಳ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿನ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು ಈ ವಿನ್ಯಾಸ ಹೊಂದಿದೆ ಎಂದು ಕಂಪನಿ ಹೇಳಿದೆ. ಕ್ವಾಂಟಾ ಮಾರಾಟದಲ್ಲಿರುವ 100 ಸಿಸಿ ಪ್ರಯಾಣಿಕರ ಬೈಕ್ ಗಳಿಗೆ ಸಮನಾಗಿರುತ್ತದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬ್ಯಾಟರಿ ವಿಭಾಗಕ್ಕೆ ಚುರುಕುತನ ಮತ್ತು ಸುರಕ್ಷತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಕ್ವಾಂಟಾ ವಿಶ್ವದ ಮೊದಲ ರಿಬ್-ಕ್ಯಾಜಿಡ್ ಚಾಸಿಸ್ ಅನ್ನು ಪಡೆಯುತ್ತದೆ ಎಂದು ಗ್ರಾವ್ಟನ್ ಮೋಟಾರ್ಸ್ ಹೇಳಿದೆ. ಸಸ್ಪೆಂಕ್ಷನ್ ಸೆಟಪ್ ಅನ್ನು ಆರಾಮವಾಗಿ ಹೊಂದುವಂತೆ ಮಾಡಲಾಗಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಕ್ವಾಂಟಾದಲ್ಲಿನ 3 ಕಿ.ವ್ಯಾಟ್ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, ಇದು 170 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಕ್ವಾಂಟಾವನ್ನು ಭಾರತೀಯ ಗ್ರಾಮೀಣ ರಸ್ತೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದ್ದು, ಬ್ಯಾಟರಿ ನಿಯೋಜನೆಯು ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಬೈಕಿನಲ್ಲಿ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಅದನ್ನು ಮನೆಯಲ್ಲಿ ಚಾರ್ಜ್ ಮಾಡಬಹುದು. ಇದು 3 ಕಿಲೋವ್ಯಾಟ್ ಲಿಥಿಯಂ-ಅಯಾನ್ ಯುನಿಟ್ ಆಗಿದ್ದು, ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದನ್ನು ಇಕೋ ಮೋಡ್ ನಲ್ಲಿ 320 ಕಿ.ಮೀ.ವರೆಗೂ ವಿಸ್ತರಿಸಬಹುದು ಎಂದು ಕಂಪನಿ ಹೇಳಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇದಲ್ಲದೆ ಗ್ರಾವ್ಟನ್‌ನ ಎಸ್‌ಇಎಸ್ (ಸ್ವಾಪ್ ಇಕೋ ಸಿಸ್ಟಮ್) ಬಳಕೆದಾರರು ತಮ್ಮ ಖಾಲಿ ಬ್ಯಾಟರಿಗಳನ್ನು ಗ್ರ್ಯಾವ್ಟನ್‌ನ ಬ್ಯಾಟರಿ ಸ್ಟೇಷನ್ ನಲ್ಲಿ ರೀಚಾರ್ಚ್ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ. ಕಂಪನಿಯು ಮೊದಲು ತೆಲಂಗಾಣದಾದ್ಯಂತ ಬ್ಯಾಟರಿ ಕೇಂದ್ರಗಳನ್ನು ಸ್ಥಾಪಿಸಲಿದೆ, ನಂತರ ಇತರ ಮಾರುಕಟ್ಟೆಗಳಿಗೆ ವಿಸ್ತರಿಸಲಿದೆ.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಗ್ರಾವ್ಟನ್ ಕ್ವಾಂಟಾದ ಇತರ ವೈಶಿಷ್ಟ್ಯಗಳು ಎರಡು-ಮೋಡ್ ಚಾರ್ಜಿಂಗ್ ಅನ್ನು ಒಳಗೊಂಡಿವೆ, ಇದು ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿರುತ್ತದೆ, ಈ ಬ್ಯಾಟರಿ ಚಾರ್ಜ್ ಆಗಲು ಮೂರು ಗಂಟೆಗಳ ಅವಧಿಯನ್ನು ತೆಗೆದುಕೊಳ್ಳಬಹುದು.

ಅಧಿಕ ರೇಂಜ್ ಹೊಂದಿರುವ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇನ್ನು ರಿಮೋಟ್ ಲಾಕ್/ಅನ್ಲಾಕ್, ಲ್ಯಾಂಪ್ ಗಳು, ರೋಡ್ ಅಸಿಸ್ಟ್, ಮ್ಯಾಪಿಂಗ್ ಸ್ಟೇಷನ್ ಮತ್ತು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಸಹ ಇರುತ್ತದೆ. ಕ್ವಾಂಟಾ ಎಲೆಕ್ಟ್ರಿಕ್ ಬೈಕಿಗೆ ಕಂಪನಿಯು ಐದು ವರ್ಷಗಳ ವಾರಂಟಿಯನ್ನು ನೀಡುತ್ತದೆ. ಇದರ ಪೇಲೋಡ್ ಸಾಮರ್ಥ್ಯ 250 ಕೆ.ಜಿಯಾಗಿದೆ.

Most Read Articles

Kannada
English summary
Gravton Quanta EV launched in India. Read In Kannada.
Story first published: Tuesday, June 29, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X