ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ತನ್ನ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಮೊದಲ ಬ್ಯಾಚ್ ಅನ್ನು ಜರ್ಮನಿಗೆ ಕಳುಹಿಸಿದೆ. ಮೊದಲ ಬ್ಯಾಚ್'ನಲ್ಲಿ 200 ಯುನಿಟ್ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಕಳುಹಿಸಲಾಗಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಭವಿಷ್ಯದಲ್ಲಿ ಯುರೋಪ್ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ಗಳನ್ನು ರವಾನಿಸುವ ಮೂಲಕ ಯುರೋಪಿಯನ್ ಯೂನಿಯನ್ (ಇಯು) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿ ಉದ್ದೇಶಿಸಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

2025ರ ವೇಳೆಗೆ ಯುರೋಪಿಯನ್ ಮಾರುಕಟ್ಟೆಯಿಂದ 300 ಮಿಲಿಯನ್ ಯುರೋ ಅಂದರೆ ಸುಮಾರು ರೂ.2,600 ಕೋಟಿ ಗಳಿಸುವುದಾಗಿ ಹೀರೋ ಸೈಕಲ್ಸ್ ನಂಬಿದೆ. ಹೀರೋ ತನ್ನ ಅಂತರರಾಷ್ಟ್ರೀಯ ಬ್ರಾಂಡ್ ಹೆಚ್‌ಎನ್‌ಎಫ್ ಅಡಿಯಲ್ಲಿ ಯುರೋಪಿನಲ್ಲಿ ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಈ ಸಾಗಣೆಯು ಹೆಚ್‌ಎಂಸಿಯನ್ನು ಯುರೋಪಿನ ಅತಿದೊಡ್ಡ ಸಂಪೂರ್ಣ ಸಂಯೋಜಿತ ಇ-ಸೈಕಲ್ ಕಂಪನಿಯಾಗಿ ಸ್ಥಾಪಿಸುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

2030ರ ವೇಳೆಗೆ ಯುರೋಪಿನಲ್ಲಿ ಇ-ಸೈಕಲ್ ಮಾರಾಟವು ಸುಮಾರು 15 ಮಿಲಿಯನ್ ಯೂನಿಟ್‌ಗಳನ್ನು ತಲುಪಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ. ಈ ರೀತಿ ರಫ್ತು ಹಾಗೂ ಇ-ಸೈಕಲ್‌ಗಳ ಮಾರಾಟವನ್ನು ಹೆಚ್ಚಿಸುವ ಮೂಲಕ ಈ ವಿಭಾಗದಲ್ಲಿ ಮಾರುಕಟ್ಟೆ ಪ್ರಾಬಲ್ಯ ಸಾಧಿಸಬಹುದು.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಇಂಟರ್‌ನ್ಯಾಷನಲ್‌ನ ಸಿಇಒ ಜೆಫ್ ವೈಸ್ ಮಾತನಾಡಿ, ಉತ್ತಮ ಗುಣಮಟ್ಟದ ಇ-ಸೈಕಲ್‌ಗಳನ್ನು ಉತ್ಪಾದಿಸಲು ಹೀರೋ ಉತ್ಪಾದನಾ ಸಾಮರ್ಥ್ಯವನ್ನು ಹೆಚ್‌ಎನ್‌ಎಫ್‌ನ ಎಂಜಿನಿಯರಿಂಗ್ ಹಾಗೂ ವಿನ್ಯಾಸ ಪರಿಣತಿಯೊಂದಿಗೆ ಸಂಯೋಜಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಲುಧಿಯಾನದಲ್ಲಿರುವ 100 ಎಕರೆ ಸೈಕಲ್ ವ್ಯಾಲಿ ಇದಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ. ಕರೋನಾ ಸಾಂಕ್ರಾಮಿಕದಿಂದಾಗಿ ಸರಬರಾಜು ಸರಪಳಿಯು ಅಸ್ತವ್ಯಸ್ತಗೊಂಡಿದೆ ಎಂದು ಹೀರೋ ಸೈಕಲ್ಸ್ ಕಂಪನಿ ಹೇಳಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಕರೋನಾ ವೈರಸ್ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಆದರೆ ಕಂಪನಿಯು ಪೂರೈಕೆ ಸರಪಳಿಯನ್ನು ನವೀಕರಿಸಿದ್ದು, ಬೇಡಿಕೆಯನ್ನು ವೇಗವಾಗಿ ಪೂರೈಸುತ್ತಿದೆ. ಕರೋನಾ ಅವಧಿಯಲ್ಲಿ ಸೈಕಲ್‌ಗಳು ಹಾಗೂ ಇ-ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಇ-ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೀರೋ ಸೈಕಲ್ಸ್ ಕಂಪನಿಯು ಲಾಜಿಸ್ಟಿಕ್ಸ್ ನಿರ್ವಹಣೆ ಮತ್ತು ಡಿಜಿಟಲ್ ರೂಪಾಂತರದಲ್ಲಿ ಪರಿಣತಿ ಪಡೆದಿರುವ ಡಿಜಿಟಲ್ ಪೂರೈಕೆ ಸರಪಳಿ ಕಂಪನಿಯಾದ ಹೀರೋ ಸಪ್ಲೈ ಚೈನ್ (ಹೆಚ್‌ಎಸ್‌ಸಿ)ಯನ್ನು ಸ್ಥಾಪಿಸಿದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ವರ್ಷಕ್ಕೆ 60 ಲಕ್ಷ ಯುನಿಟ್ ಸೈಕಲ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಪಂಜಾಬಿನ ಲುಧಿಯಾನ, ಉತ್ತರ ಪ್ರದೇಶದ ಗಾಜಿಯಾಬಾದ್ ಹಾಗೂ ಬಿಹಾರದ ಬಿಹ್ತಾಗಳಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಸೈಕಲ್‌ಗಳನ್ನು ಉತ್ಪಾದಿಸುತ್ತದೆ.

ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಫ್ತು ಮಾಡಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ ಕಂಪನಿಯು ಇಂಗ್ಲೆಂಡಿನಲ್ಲಿ ವಿನ್ಯಾಸ ಕೇಂದ್ರವನ್ನು ಸಹ ಹೊಂದಿದೆ. ಇದರ ಜೊತೆಗೆ ಶ್ರೀಲಂಕಾದಲ್ಲಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸಹ ಹೊಂದಿದೆ.

Most Read Articles

Kannada
English summary
Hero Cycles exports electric bicycles first batch to Germany. Read in Kannada.
Story first published: Monday, June 28, 2021, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X