ಶೀಘ್ರದಲ್ಲೇ ದೇಶಾದ್ಯಂತ ಇವಿ ಸ್ಕೂಟರ್ ಮಾರಾಟ ಮಳಿಗೆಗಳನ್ನು ಹೆಚ್ಚಿಸಲಿದೆ ಹೀರೋ ಎಲೆಕ್ಟ್ರಿಕ್
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ನೂರರ ಸನಿಹದಲ್ಲಿದ್ದು, ಇಂಧನಗಳ ಬೆಲೆ ಏರಿಕೆಯ ಪರಿಣಾಮ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಮುಖ ಮಾಡುತ್ತಿರುವುದು ಇವಿ ವಾಹನಗಳ ಉತ್ಪಾದನಾ ಕಂಪನಿಗಳಿಗೆ ಭಾರೀ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದು, ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಕಳೆದ ವರ್ಷ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯೂ ಕೂಡಾ ಹೆಚ್ಚಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

2020ರಲ್ಲಿನ ಇವಿ ಸ್ಕೂಟರ್ ಮಾರಾಟ ವರದಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ವರ್ಷ ಒಟ್ಟು 50 ಸಾವಿರ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದ್ದು, ಇದು ಈ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿನ ಇವಿ ವಾಹನ ಮಾರಾಟಕ್ಕೆ ಸಮವಾಗಿದೆ.

ಹೀಗಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಇವಿ ವಾಹನಗಳ ಮಾರಾಟವನ್ನು ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟ ಮಳಿಗೆಗಳನ್ನು ಹೊಂದಿರುವ ನಗರಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 600ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿರುವ ಕಂಪನಿಯು ಹೈ ರೇಂಜ್ ಸ್ಕೂಟರ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಅಂದಾಜಿನ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಇವಿ ಸ್ಕೂಟರ್ ಮಾರಾಟವು ಶೇಕಡಾ 15ರಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿದ್ದು, 12 ವರ್ಷಗಳ ಇವಿ ವಾಹನ ಮಾರಾಟದಲ್ಲಿ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 50 ಸಾವಿರ ಯುನಿಟ್ ಮಾರಾಟವಾಗಿದೆ.

ಇವಿ ಸ್ಕೂಟರ್ ಉತ್ಪಾದನೆಯಲ್ಲಿ ಸುಮಾರು 12 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ 3 ಲಕ್ಷ ಯುನಿಟ್ ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಇವಿ ಉತ್ಪನ್ನಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇನ್ನು ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಮೈಲೇಜ್ ರೇಂಜ್ ಪಡೆದುಕೊಳ್ಳಲು ಸಹಕಾರಿಯಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಸಿಟಿ ಸೆಗ್ಮೆಂಟ್ ಅಭಿವೃದ್ದಿಪಡಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್, ಎಕ್ಸೆಂಡ್ ರೇಂಜ್ ಮಾದರಿಗಳೊಂದಿಗೆ ಇದೀಗ ಸಿಟಿ ಸ್ಪೀಡ್ ಮಾದರಿಗಳನ್ನು ಅಭಿವೃದ್ದಿಗೊಳಿಸಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸಿಟಿ ಸೆಗ್ಮೆಂಟ್‌ನಲ್ಲಿ ಆಪ್ಟಿಮಾ-ಹೆಚ್ಎಕ್ಸ್, ನೆಕ್ಸ್-ಹೆಚ್ಎಕ್ಸ್ ಮತ್ತು ಫೋಟಾನ್-ಹೆಚ್ಎಕ್ಸ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಸೆಗ್ಮೆಂಟ್ ಸ್ಕೂಟರ್‌ಗಳು ರೂ. 57,570ರಿಂದ ಆರಂಭಗೊಳ್ಳಲಿವೆ.


Click it and Unblock the Notifications








