ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಬೈಕುಗಳ ಮತ್ತು ಸ್ಕೂಟರ್‌ಗಳ ಬೆಲೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಹೀರೋ ಸರಣಿಯಲ್ಲಿರುವ ಜನಪ್ರಿಯ ಗ್ಲ್ಯಾಮರ್ ಬೈಕ್ ಕೂಡ ದುಬಾರಿಯಾಗಿದೆ.

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಗ್ಲ್ಯಾಮರ್ ಬೈಕಿನ ಬೆಲೆಯನ್ನು ರೂ.900 ಗಳವರೆಗೆ ಹೆಚ್ಚಿಸಿದೆ. ಹೀರೋ ಗ್ಲ್ಯಾಮರ್ ನಾಲ್ಕು ವೆರಿಯೆಂಟ್ ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಲೆ ಏರಿಲೆಯ ಬಳಿಕ ವೆರಿಯೆಂಟ್ ಗಳ ಪ್ರಕಾರ ಹೇಳುವುದಾದರೆ, ಗ್ಲ್ಯಾಮರ್ ಡ್ರಮ್ ವೆರಿಯೆಂಟ್ ಬೆಲೆಯು ರೂ.71,900 ಗಳಾದರೆ ಗ್ಲ್ಯಾಮರ್ ಬ್ಲೆಜ್ ಡ್ರಮ್ ವೆರಿಯೆಂಟ್ ಬೆಲೆಯು ರೂ.73,100 ಗಳಾಗಿದೆ.

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇನ್ನು ಗ್ಲ್ಯಾಮರ್ ಡಿಸ್ಕ್ ವೆರಿಯೆಂಟ್ ಬೆಲೆಯು ರೂ.75,400 ಗಳಾದರೆ, ಗ್ಲ್ಯಾಮರ್ ಬ್ಲೆಜ್ ಡಿಸ್ಕ್ ವೆರಿಯೆಂಟ್ ಬೆಲೆಯು ರೂ.76,600ಗಳಾಗಿದೆ. ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರಯಾಣಿಕರ ಬೈಕುಗಳಲ್ಲಿ ಒಂದಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಗ್ಲ್ಯಾಮರ್ ಬೈಕನ್ನು ಬಿಎಸ್-6 ಆಗಿ ಬಿಡುಗಡೆಗೊಳಿಸವಾಗ ಕೆಲವು ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಬೈಕ್ ಫ್ರಂಟ್ ಎಂಡ್, ಫ್ಯೂಯಲ್ ಟ್ಯಾಂಕ್, ಮತ್ತು ಟ್ಯಾಲ್ ಲ್ಯಾಂಪ್ ಗಳ ವಿನ್ಯಾಸವನ್ನು ನವೀಕರಿಸಿದ್ದರು.

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇದು ಮೊದಲಿಗಿಂತ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಇನ್ನು ಈ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಗ್ಲ್ಯಾಮರ್ ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ) ಅನ್ನು ಹೊಂದಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅನ್ನು ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇನ್ನು ಹೀರೋ ಗ್ಲ್ಯಾಮರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ನೋಡುವುದಾದರೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಗ್ಲ್ಯಾಮರ್ ಬೈಕಿನ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಈ ಹೀರೋ ಗ್ಲ್ಯಾಮರ್ ಬೈಕ್ ಹೋಂಡಾ ಶೈನ್ ಮತ್ತು ಎಸ್‌ಪಿ 125 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, January 7, 2021, 19:07 [IST]
English summary
Hero Glamour Prices Marginally Increased. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+