ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಎಕ್ಸ್‌ಟ್ರಿಮ್ 160ಆರ್ ಬೈಕ್ ಸೇರಿ ಹಲವು ಬೈಕ್‍ಗಳ ಬೆಲೆಯನ್ನು ಹೆಚ್ಚಿಸಿದೆ, ಹೀರೋ ಸರಣಿಯಲ್ಲಿ ಎಕ್ಸ್‌ಟ್ರಿಮ್ 160ಆರ್(Hero Xtreme 160R) ಮಾದರಿಯು ಜನಪ್ರಿಯ ಬೈಕ್‍ಗಳಲ್ಲಿ ಒಂದಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.2,370 ಗಳವರೆಗೂ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಬೆಲೆ ಏರಿಕೆ ಪಡೆದುಕೊಂಡ ಬಳಿಕ, ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಫ್ರಂಟ್ ಡಿಸ್ಕ್ ರೂಪಾಂತರದ ಬೆಲೆಯು ರೂ.1,11,610, ಡಬಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1,14,660 ಗಳಾದರೆ 100 ಮಿಲಿಯನ್ ಎಡಿಷನ್ ಬೆಲೆಯು ರೂ.1,16,460 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಎಕ್ಸ್‌ಟ್ರಿಮ್ 160ಆರ್ ಬೈಕ್ ಕಂಪನಿಯ ಪ್ರೀಮಿಯಂ ಬೈಕ್ ಆಗಿದ್ದರೂ ಎಂಟ್ರಿ ಲೆವೆಲ್ ಮಾದರಿಯಂತೆ ಉತ್ತಮವಾಗಿ ಮಾರಾಟವಾಗುತ್ತಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕನ್ನು ರಾಜಸ್ಥಾನದ ಜೈಪುರದಲ್ಲಿರುವ ಆರ್&ಡಿ ಘಟಕದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರ್ಯಾಂಡ್‌ನಿಂದ ಪ್ರೀಮಿಯಂ 160 ಸಿಸಿ ಬಿಎಸ್ 6 ಎಂಜಿನ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಈ ಹೊಸ ಬೈಕಿಗೆ ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಬಿಎಸ್ 6 ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ 163 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ,. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಈ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೀರೋ ಹೇಳಿಕೊಂಡಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬೇಸ್ ಸ್ಪೆಕ್ ಮಾದರಿಯು 138.5 ಕೆಜಿ ತೂಕವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಬಿಎಸ್ 6 ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಬೈಕ್ ಹಲವಾರು ಹೊಸ ಪ್ರೀಮಿಯಂ ಫೀಚರುಗಳನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಡಿಆರ್‌ಎಲ್‌ ಇಂಡೀಕೆಟರ್ ಮತ್ತು ಟೇಲ್ ಲೈಟ್ ಮತ್ತು ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಇನ್ನು ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿತು. ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ ಈ ಹೊಸ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಯಿತು.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಈ 100 ಮಿಲಿಯನ್ ಎಡಿಷನ್ ಬಣ್ಣದಲ್ಲಿ ಇತರ 5 ಮಾದರಿಗಳನ್ನು ಕೂಡ ಹೀರೋ ಮೋಟೊಕಾರ್ಪ್ ಬಿಡುಗಡೆಗೊಳಿಸಿದ್ದರು. ಇನ್ನು ಬಿಡುಗಡೆಗೊಂಡ ಸ್ಪೆಷಲ್ ಎಢಿಷನ್ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬೈಕ್ ಕೆಂಪು ಮತ್ತು ಬಿಳಿ ಬಣ್ಣದ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಈ ಬೈಕಿನ ಹೆಡ್ ಲೈಟ್ ಮಾಸ್ಕ್, ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗದ ಬಾಡಿ ಪ್ಯಾನೆಲ್‌ಗಳಲ್ಲಿ ಕೆಂಪು ಬಣ್ಣವನ್ನು ಹೊಂದಿರುವ 100 ಮಿಲಿಯನ್ ಎಡಿಷನ್ ಮಾದರಿಗಳಲ್ಲಿ ಮಾತ್ರ ಈ ವಿಶೇಷ ಬಣ್ಣವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳ ಸೆಟಪ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ರೈಡರ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ Hero Xtreme 160R ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್ ಗಳೊಂದಿಗೆ ಎಬಿಎಸ್ ಅನ್ನು ನೀಡಿದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್ 160 ಮತ್ತು ಸುಜುಕಿ ಜಿಕ್ಸರ್ 150 ಬೈಕ್ ಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Tuesday, September 28, 2021, 8:45 [IST]
English summary
Hero motocorp hiked the prices of xtreme 160r in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+