ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಬಿಡುಗಡೆ
ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಡ್ರಮ್ ರೂಪಾಂತರದಲ್ಲಿ ಬೆಲೆಯು ರೂ.78,900 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.83,500 ಗಳಾಗಿದೆ. ಈ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳನ್ನು ಹೊಂದಿದೆ.

ಹೊಸ ಹೀರೋ ಗ್ಲಾಮರ್ ಎಕ್ಸ್‌ಟೆಕ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಜೊತೆಗೆ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಬ್ಯಾಂಕ್ ಆಂಗಲ್ ಸೆನ್ಸರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

ಈ ಬೈಕಿನಲ್ಲಿ ಕರೆ ಮತ್ತು ಎಸ್‌ಎಂಎಸ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ನೀಡುತ್ತದೆ ಮ್ಯಾಪ್ ಜೊತೆ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಿದೆ. ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್, ಇಕೋ ಮೋಡ್, ಟೆಕೋಮೀಟರ್ ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ (ಆರ್‌ಟಿಎಂಐ) ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಇದರೊಂದಿಗೆ ಕನ್ಸೋಲ್ ಸೈಡ್-ಸ್ಟ್ಯಾಂಡ್ ಸೂಚನೆಯನ್ನು ಸಹ ತೋರಿಸುತ್ತದೆ. ಈ ಬೈಕಿನ ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್, 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, ವೈಡ್ ರಿಯರ್ ಟೈರ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ, ಇದು ಒಟ್ಟಾರೆ ಸವಾರಿ ಸೌಕರ್ಯವನ್ನು ಸುಧಾರಿಸುತ್ತದೆ.

ಈ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ 3ಡಿ ಬ್ರ್ಯಾಂಡಿಂಗ್, ರಿಮ್ ಟೇಪ್‌ಗಳು ಮತ್ತು ಹೊಸ ಮ್ಯಾಟ್ ಬಣ್ಣಕ್ಕಾಗಿ ಬ್ಲೂ ಅಸ್ಸೆಂಟ್ ಗಳನ್ನು ಒಳಗೊಂಡಿದೆ. ಎಚ್-ಸಿಗ್ನೇಚರ್ ಪೊಸಿಷನ್ ಲ್ಯಾಂಪ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ವಿಭಾಗದ ಅತ್ಯುತ್ತಮ ಬೆಳಕನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ

ಈ ಹೊಸ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್-ಹೊಂದಾಣಿಕೆ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಈ ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕ್ 125 ಸಿಸಿ ಬಿಎಸ್‌ವಿಐ ಎಂಜಿನ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ ಎಕ್ಸ್‌ಸೆನ್ಸ್ ಪ್ರೋಗ್ರಾಮ್ಡ್ ಇಂಧನ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದ್ದು, ಇದು ಶೇ.7 ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ.

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಹೊಸ ಬೈಕಿನಲ್ಲಿ ಐ3 ಸ್ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ) ಅನ್ನು ಒಳಗೊಂಡಿದೆ.


Click it and Unblock the Notifications








