ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಎಲ್ಲಾ ರೀತಿಯ ಜನರಿಗಾಗಿ ವಿಭಿನ್ನ ರೀತಿಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಕಡಿಮೆ ಬೆಲೆಯ ಬೈಕ್‌ಗಳಿಂದ ಹಿಡಿದು ದುಬಾರಿ ಬೆಲೆಯ ಪ್ರೀಮಿಯಂ ಬೈಕ್‌ಗಳವರೆಗೆ ಹಲವು ರೀತಿಯ ಬೈಕ್‌ಗಳನ್ನು ಮಾರಾಟ ಮಾಡುತ್ತದೆ.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಕಂಪನಿಯು ಈಗ ತನ್ನ ಮಾರಾಟದ ನಂತರದ ಸೇವೆಯನ್ನು ವಿಸ್ತರಿಸಲು ವಾಟ್ಸಾಪ್ ಸೇವೆಯನ್ನು ಆರಂಭಿಸಿದೆ ಎಂದು ವರದಿಯಾಗಿದೆ. ಅಂದರೆ ಕಂಪನಿಯು ವಾಟ್ಸಾಪ್ ಮೆಸೇಜಿಂಗ್ ಮೂಲಕ ನಿರ್ದಿಷ್ಟ ಸೇವೆಗಳನ್ನು ಪಡೆಯುವ ಸೌಲಭ್ಯವನ್ನು ನೀಡಲಿದೆ.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ವಾಟ್ಸಾಪ್ ಮೂಲಕ ಲಭ್ಯವಿರುವ ಸೇವೆಗಳು:

ವಾಹನವನ್ನು ಸರ್ವೀಸ್ ಮಾಡಿಸಲು ಸಮಯವನ್ನು ನಿಗದಿಪಡಿಸಬಹುದು

ಸರ್ವೀಸ್ ಆದ ವಾಹನದ ಸ್ಥಿತಿಯನ್ನು ತಿಳಿಯಬಹುದು

ಹತ್ತಿರವಿರುವ ಸರ್ವೀಸ್ ಸೆಂಟರ್ ಹಾಗೂ ಶೋರೂಂಗಳ ಬಗ್ಗೆ ಮಾಹಿತಿ ಪಡೆಯಬಹುದು

ಸರ್ವೀಸ್ ಬಗೆಗಿನ ಜಾಬ್ ಕಾರ್ಡ್ ಪಡೆಯಬಹುದು

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ವಾಹನದ ಬಗೆಗೆ ವಿಚಾರಣೆ ಹಾಗೂ ಬುಕ್ಕಿಂಗ್ ಸೌಲಭ್ಯ:

ಸರ್ವೀಸ್ ಹಾಗೂ ಮೆಂಟೆನೆನ್ಸ್ ನಿಗದಿಪಡಿಸುವ ಸೌಲಭ್ಯ

ಸರ್ವೀಸ್ ಹಾಗೂ ಇತರ ಬಿಲ್‌ಗಳನ್ನು ಡಿಜಿಟಲ್ ರಸೀದಿಗಳಾಗಿ ಸ್ವೀಕರಿಸುವ ಸೌಲಭ್ಯ

ವಾಹನ ನಿರ್ವಹಣೆ ಸೂಚನೆಗಳು, ಸುರಕ್ಷತಾ ಸಲಹೆಗಳು ಹಾಗೂ ಹೊಸ ಮಾದರಿಗಳ ಬಗೆಗಿನ ಮಾಹಿತಿಯನ್ನು ವಾಟ್ಸಾಪ್ ಸೇವೆಯ ಮೂಲಕ ನೀಡಲು ಹೀರೋ ಮೋಟೊಕಾರ್ಪ್ ನಿರ್ಧರಿಸಿದೆ.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್'ನ ಈ ಸೇವೆಗಳನ್ನು ಪಡೆಯಲು ಮೊಬೈಲ್ ಫೋನ್‌ನಲ್ಲಿರುವ ವಾಟ್ಸಾಪ್ ಪ್ರೊಸೆಸರ್ ಮೂಲಕ +91 83677 96950 ನಂಬರಿಗೆ ಕರೆ ಮಾಡಬೇಕಾಗುತ್ತದೆ. ಆಗ ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಹೀರೋ ಮೋಟೊಕಾರ್ಪ್ ತನ್ನ ಶೋರೂಂಗಳಲ್ಲಿ ಕ್ಯೂಆರ್ ಕೋಡ್ ಸೌಲಭ್ಯವನ್ನು ಒದಗಿಸಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ನೇರವಾಗಿ ಹೀರೋ ಮೋಟೊಕಾರ್ಪ್'ನ ವಾಟ್ಸಾಪ್ ಸೇವೆಗೆ ಹೋಗಬಹುದು.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ನಂತರ ಮೇಲೆ ತಿಳಿಸಿದ ಎಲ್ಲಾ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಹೀರೋ ಕಂಪನಿಯು ತನ್ನ ಈ ವಾಟ್ಸಾಪ್ ಸೇವೆಯ ಬಗ್ಗೆ ಹೊಸ ಟಿವಿ ಜಾಹೀರಾತುಗಳ ಮೂಲಕ ಜನರಿಗೆ ಮಾಹಿತಿ ನೀಡಲು ಸಜ್ಜಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಕಂಪನಿಯು ಈ ವಾಟ್ಸಾಪ್ ಸೇವೆಯನ್ನು 24x7 ನೀಡಲು ನಿರ್ಧರಿಸಿದೆ. ಇದರಿಂದಾಗಿ ಗ್ರಾಹಕರು ಯಾವುದೇ ಸಮಯದಲ್ಲಿ ವಾಹನದ ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ಕೇಳಿ ಪಡೆಯಬಹುದು.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ನಿನ್ನೆಯಷ್ಟೇ ಭಾರತದಲ್ಲಿ ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಹೆಚ್‌ಎಫ್ 100 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.49,400ಗಳಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಕಡಿಮೆ ಬೆಲೆಯನ್ನು ಹೊಂದಿರುವ ಈ ಬೈಕ್ ದೇಶದ ಅಗ್ಗದ ಬೈಕ್'ಗಳಲ್ಲಿ ಒಂದಾಗಿದೆ. ಪ್ರತಿ ದಿನ ಬೈಕ್ ಬಳಸುವವರನ್ನು ಹಾಗೂ ಗ್ರಾಮೀಣ ಜನರನ್ನು ಆಕರ್ಷಿಸುವ ಸಲುವಾಗಿ ಕಂಪನಿಯು ಈ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ವಾಟ್ಸಾಪ್ ಮೆಸೇಜಿಂಗ್ ಮೂಲಕ ಹಲವು ಸೇವೆಗಳನ್ನು ನೀಡಲಿದೆ ಹೀರೋ ಮೋಟೊಕಾರ್ಪ್

ಈ ತಿಂಗಳ ಆರಂಭದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸಿತು. ಬೆಲೆ ಏರಿಕೆಯು ತನ್ನ ಮಾರಾಟದ ಮೇಲೆ ಪರಿಣಾಮ ಬೀರದಂತೆ ಮಾಡುವ ಉದ್ದೇಶದಿಂದ ಕಂಪನಿಯು ದೇಶದಲ್ಲಿ ಕಡಿಮೆ ಬೆಲೆಯ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
Hero Motocorp to give new services through Whatsapp messaging. Read in Kannada.
Story first published: Friday, April 16, 2021, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X