100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ವಿಶ್ವದ ಮುಂಚೂಣಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಇತ್ತೀಚೆಗೆ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಮೂಲಕ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸಿದ್ದು, ಹೊಸ ಮೈಲಿಗಲ್ಲು ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡುತ್ತಿದೆ.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಾಗುತ್ತಿದೆ.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

10 ಕೋಟಿ ಬೈಕ್ ಉತ್ಪಾದನಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಸ್ಪೆಷಲ್ ಎಡಿಷನ್‌ ಬೈಕ್ ಮಾದರಿಗಳು ಸೆಲೆಬ್ರಿಟಿ ಎಡಿಷನ್‌ಗಳಾಗಿ ಮಾರಾಟವಾಗಲಿದ್ದು, ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾದ ಪೇಟಿಂಗ್ ಆಯ್ಕೆ ಮತ್ತು ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಪಡೆದುಕೊಳ್ಳಲಿವೆ.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ಪೇಟಿಂಗ್ ಮತ್ತು ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಾಗಲಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ಇನ್ನುಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, 1984ರಲ್ಲಿ ಹೀರೋ ಹೋಂಡಾ ಮೋಟಾರ್ ಸೈಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಂಪನಿಯು ಜಪಾನ್ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಜೊತೆಗೂಡಿ ಆಟೋ ಉತ್ಪಾದನಾ ವಲಯದಲ್ಲಿ ಮೊದಲ ಕಾರ್ಯಾಚರಣೆ ಆರಂಭಿಸಿತ್ತು.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

2000ನೇ ಇಸವಿ ಹೊತ್ತಿಗೆ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದ ಹೀರೋ-ಹೋಂಡಾ ಕಂಪನಿಯು ಬರೋಬ್ಬರಿ 26 ವರ್ಷಗಳ ನಂತರ 2010ರಲ್ಲಿ ಸಹಭಾಗಿತ್ವ ಯೋಜನೆಯಿಂದ ಹಿಂದೆ ಸರಿದು ಸ್ವತಂತ್ರ ಕಾರ್ಯಾಚರಣೆ ಆರಂಭಿಸಿದ್ದವು.

1985ರಲ್ಲಿ ಹರಿಯಾಣದ ಧರುಹೆರ ಎಂಬಲ್ಲಿ ಮೊದಲ ಬೈಕ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದ ಹೀರೋ-ಹೋಂಡಾ ಕಂಪನಿಯು ಸಹಭಾಗಿತ್ವದ ಯೋಜನೆಯ ಅಡಿಯಲ್ಲಿ ಮೊದಲ ಬೈಕ್ ಮಾದರಿಯಾಗಿ ಸಿಡಿ100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ಹೊಸ ಬೈಕ್ ಉತ್ಪಾದನೆ ಆರಂಭಿಸಿ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡ ಹೀರೋ ಹೋಂಡಾ ಕಂಪನಿಗಳು 1987ರ ಹೊತ್ತಿಗೆ 1 ಲಕ್ಷ ಯುನಿಟ್ ಮಾರಾಟ ಗುರಿ ಸಾಧಿಸಿದವು. ತದನಂತರ ಬೈಕ್ ಉತ್ಪಾದನೆಯಲ್ಲಿ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದ ಸಹಭಾಗಿತ್ವ ಕಂಪನಿಗಳು 2004ರ ಹೊತ್ತಿಗೆ 1 ಕೋಟಿ ಬೈಕ್ ಉತ್ಪಾದನೆ ಗುರಿ ತಲುಪುವ ಮೂಲಕ ವಿಶ್ವದ ಮುಂಚೂಣಿ ಬೈಕ್ ಕಂಪನಿಯಾಗಿ ಹೊರಹೊಮ್ಮಿದವು.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ತದನಂತರ ಬೈಕ್ ಮಾರಾಟದಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾದ ಸಹಭಾಗಿತ್ವ ಕಂಪನಿಗಳಾದ ಹೀರೋ ಹೋಂಡಾ ಕಂಪನಿಗಳು ಕಾರಣಾಂತರಗಳಿಂದ 2010ರಲ್ಲಿ ಸ್ವತಂತ್ರ ಕಾರ್ಯಾಚರಣೆ ಆಂಭಿಸಿದವು. ಸಹಭಾಗಿತ್ವದ ಯೋಜನೆಯಿಂದ ಹಿಂದೆ ಸರಿದ ನಂತರ ಹೀರೋ ಮೋಟೋಕಾರ್ಪ್ ಕಂಪನಿಯಾಗಿ ಸ್ವತಂತ್ರ ಕಾರ್ಯಾಚರಣೆ ಆರಂಭಿಸಿ 2013ರ ಹೊತ್ತಿಗೆ 5 ಕೋಟಿ ಬೈಕ್ ಉತ್ಪಾದನಾ ಗುರಿ ಸಾಧಿಸಿತು.

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

2014 ರಿಂದ ಇತ್ತೀಚೆಗೆ ವಿವಿಧ ಹೊಸ ಬೈಕ್ ಮಾದರಿಗಳ ಮೂಲಕ ಕೇವಲ 7 ವರ್ಷಗಳಲ್ಲಿ 5 ಕೋಟಿ ಬೈಕ್‌ಗಳನ್ನು ಉತ್ಪಾದನೆ ಮಾಡಿದೆ. ಒಟ್ಟು 34 ವರ್ಷಗಳಲ್ಲಿ 10 ಕೋಟಿ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ 40 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲ ಹೊಂದಿದ್ದು, ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುವಷ್ಟು ಅತಿ ದೊಡ್ಡ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

100 ಮಿಲಿಯನ್ ಸಂಭ್ರಮ: ಸ್ಲೈಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಬಿಡುಗಡೆಗೆ ಸಜ್ಜಾದ ಹೀರೋ ಮೋಟೊಕಾರ್ಪ್

ಕಳೆದ 20 ವರ್ಷಗಳಿಂದ ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿ ಎಂಬ ಜನಪ್ರಿಯತೆಯನ್ನು ಕಾಯ್ದಕೊಂಡಿರುವ ಬಂದಿರುವ ಹೀರೋ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಮುಂಚೂಣಿ ಸಾಧಿಸುವ ತವಕದಲ್ಲಿದೆ.

More from DriveSpark

Article Published On: Monday, February 8, 2021, 22:58 [IST]
English summary
Hero Splendor Plus 100 Million Special Edition Specs And Features Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+