ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ನಂತರ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿನ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಬೈಕ್ ಮಾರಾಟ ಪ್ರಮಾಣದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದಲೇ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬಂದಿದ್ದು, ಕಳೆದ 20 ವರ್ಷಗಳಲ್ಲಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬರೋಬ್ಬರಿ 1.70 ಕೋಟಿಗೂ ಹೆಚ್ಚು ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

2001ರಿಂದ 2016ರ ಅವಧಿಯಲ್ಲಿ 75 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಂಪನಿಯು 2017ರಿಂದ ಇದುವರೆಗೆ ಅಂದರೆ ಕಳೆದ 5 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಬೇಡಿಕೆಯೊಂದಿಗೆ 1.70 ಕೋಟಿ ಯುನಿಟ್ ಮಾರಾಟ ಮೈಲಿಗಲ್ಲು ಸಾಧಿಸಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಅದರಲ್ಲೂ ಕರ್ನಾಟದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಹೋಂಡಾ ಕಂಪನಿಯು ಇದುವರೆಗೆ ಸುಮಾರು 40 ಲಕ್ಷ ಯುನಿಟ್ ಮಾರಾಟ ಗುರಿಸಾಧಿಸಿದ್ದು, ಹೊಸ ಉತ್ಪನ್ನಗಳು ಹೆಚ್ಚಿನ ಬೇಡಿಕೆ ತಂದುಕೊಡುತ್ತಿವೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ದ್ವಿಚಕ್ರ ವಾಹನ ಮಾರಾಟದಲ್ಲಿ ದೇಶಾದ್ಯಂತ 5 ಕೋಟಿ ಯುನಿಟ್ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮೊದಲ 2.5 ಕೋಟಿ ದ್ವಿಚಕ್ರ ವಾಹನಗಳ ಮಾರಾಟವನ್ನು 16 ವರ್ಷಗಳ ಕಾರ್ಯಾಚರಣೆಯಲ್ಲಿ ಸಾಧಿಸಲಾಗಿದ್ದರೆ ಇನ್ನುಳಿದ 2.5 ಕೋಟಿ ಯುನಿಟ್‌ಗಳನ್ನು ಕಳೆದ 5 ವರ್ಷಗಳಲ್ಲಿ ಮಾರಾಟಗೊಳಿಸಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಎರಡು ಮಾದರಿಯ ಡೀಲರ್ ನೆಟ್‌ವರ್ಕ್‌ಗಳ ಮೂಲಕ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ರೆಡ್‌ವಿಂಗ್ ಮೂಲಕ ಸಾಮಾನ್ಯ ದ್ವಿಚಕ್ರ ವಾಹನಗಳನ್ನು ಮತ್ತು ಬಿಗ್‌ವಿಂಗ್ ಮೂಲಕ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ರೆಡ್‌ವಿಂಗ್ ನೆಟ್‌ವರ್ಕ್‌ ಮೂಲಕ ಆಕ್ಟಿವಾ, ಗ್ರಾಜಿಯಾ, ಹಾರ್ನೆಟ್ 2.0, ಸಿಬಿ200ಎಕ್ಸ್ ಮಾದರಿಗಳ ಮಾರಾಟ ಹೊಂದಿದ್ದರೆ ಬಿಗ್‌ವಿಂಗ್ ನೆಟ್‌ವರ್ಕ್‌ ನಲ್ಲಿ ಸಿಬಿ350ಆರ್‌ಎಸ್, ಹೈನಸ್ ಸಿಬಿ350, ಸಿಬಿಆರ್650ಆರ್, ಸಿಬಿ500ಎಕ್ಸ್, ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್-ಆರ್, ಆಫ್ರಿಕಾ ಟ್ವಿನ್, ಗೋಲ್ಡ್ ವಿಂಗ್ ಪ್ರೀಮಿಯಂ ಮಾದರಿಗಳನ್ನು ಮಾರಾಟ ಮಾಡುತ್ತದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಇದೀಗ ಆಕ್ಟಿವಾ ಸರಣಿ ಸ್ಕೂಟರ್ ಹೆಚ್ಚಿನ ಬೇಡಿಕೆ ಹೊಂದಿದ್ದು, ಇತ್ತೀಚೆಗೆ ಆಕ್ಟಿವಾ ಸ್ಕೂಟರ್ ಮಾದರಿಯು ದೇಶಾದ್ಯಂತ 2.50 ಕೋಟಿ ಯುನಿಟ್ ಮಾರಾಟದ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೀಗಾಗಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟವನ್ನು ಸಹ ಹೆಚ್ಚಿಸುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಶೋರೂಂಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಸಾಮಾನ್ಯ ಶೋರೂಂ ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಜಾಲ ಹೊಂದಿದ್ದರೂ ಬಿಗ್‌ವಿಂಗ್ ಮಾರಾಟ ಮಳಿಗೆಗಳು ಕೇವಲ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿವೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ ಹೈನೆಸ್ ಸಿಬಿ 350 ಬಿಡುಗಡೆಯೊಂದಿಗೆ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಶೋರೂಂಗೆ ಚಾಲನೆ ನೀಡಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೊಸ ಬಿಗ್‌ವಿಂಗ್ ಶೋರೂಂ ಅನ್ನು ಇಂದಿರಾನಗರದ ಡಿಫೆನ್ಸ್ ಕಾಲೋನಿಯ ಫಸ್ಟ್ ಸ್ಟೇಜ್‌ನಲ್ಲಿ ಆರಂಭಗೊಂಡಿದ್ದು, ಮೊದಲ ಬಿಗ್‌ವಿಂಗ್ ಶೋರೂಂ ಬೆಂಗಳೂರು ಸೆಂಟ್ರಲ್ ಲಾವೆಲ್ಲೆ ರಸ್ತೆಯಲ್ಲಿ ತೆರೆಯಲಾಗಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲೂ ಎರಡು ಮಾದರಿಯ ಮಾರಾಟ ಸೌಲಭ್ಯಗಳನ್ನು ಪರಿಚಯಿಸಿದ್ದು, ಬಿಗ್‌ವಿಂಗ್ ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ 350 ಸಿಸಿಯಿಂದ 500 ಸಿಸಿ ಬೈಕ್ ಮಾದರಿಗಳನ್ನು ಮತ್ತು ಬಿಗ್‌ವಿಂಗ್ ಟಾಪ್‌ಲೈನ್ ಮಾರಾಟ ಮಳಿಗೆಗಳಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ ಬಿಗ್‌ವಿಂಗ್ ಶೋರೂಂನಲ್ಲಿ ಕಡಿಮೆ ಸಿಸಿ ಸಾಮರ್ಥ್ಯದ ಪ್ರೀಮಿಯಂ ಬೈಕ್ ಖರೀದಿಗೆ ಲಭ್ಯವಿದ್ದಲ್ಲಿ ಲಾವೆಲ್ಲೆ ರಸ್ತೆಯಲ್ಲಿರುವ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂನಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಸೂಪರ್ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ಕರ್ನಾಟಕದಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಹೊಸ ಮೈಲಿಗಲ್ಲು

ದೇಶದ ಪ್ರಮುಖ ಮಾಹಾನಗರಗಳಲ್ಲಿ ಕೆಲವೇ ಕೆಲವು ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂ ತೆರೆದಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ಪ್ರೀಮಿಯಂ ಬೈಕ್ ಮಾರಾಟ ಮಾಡುವ ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ದೇಶಾದ್ಯಂತ ಈ ವರ್ಷಾಂತ್ಯಕ್ಕೆ 50 ಹೊಸ ಬಿಗ್‌ವಿಂಗ್ ಶೋರೂಂಗಳು ಆರಂಭಗೊಳ್ಳುತ್ತಿವೆ.

Most Read Articles

Kannada
English summary
Hmsi two wheeler sales cross 40 lakh units milestone in karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X