ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಆಕ್ಟಿವಾ 125 ಸ್ಕೂಟರ್ ಖರೀದಿ ಮೇಲೆ ದೀಪಾವಳಿ ಹಬ್ಬದ ಪ್ರಯುಕ್ತ ಕೊಡುಗೆಗಳನ್ನು ನೀಡುತ್ತಿದೆ. ಈ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗುತ್ತಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಈ ಹಬ್ಬದ ಸೀಸನ್ ನಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಿದರೆ ರೂ.5,000 ವರೆಗೆ ಹಣವನ್ನು ಉಳಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ ಕಂಪನಿಯು ಈ ಕೊಡುಗೆಯನ್ನು ನೀಡುತ್ತಿದೆ. ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ನಿಂದ ಇಎಂಐನಲ್ಲಿ ಆಕ್ಟಿವಾ ಸ್ಕೂಟರ್ ಖರೀದಿಸುವಾಗ, ಸ್ಕೂಟರ್‌ನ ವೆಚ್ಚದ 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದು ಗರಿಷ್ಠ ರೂ.5,000 ವರೆಗೆ ಆಗಿದೆ. ಈ ಕ್ಯಾಶ್‌ಬ್ಯಾಕ್ ಆಫರ್ ಈ ತಿಂಗಳ 30ರವರೆಗೂ ಲಭ್ಯವಿರುತ್ತದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ವಾಹನ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕಂಪನಿಯು ಡೌನ್‌ಪೇಮೆಂಟ್ ಮತ್ತು ಹೈಪೋಥೆಕೇಶನ್ ಅನ್ನು ಸರಳಗೊಳಿಸಿದೆ. ಈಗ ನೀವು ಯಾವುದೇ ದಾಖಲೆಯ ಯಾವುದೇ ಹಾರ್ಡ್ ಕಾಪಿಯನ್ನು ಸಲ್ಲಿಸದೆಯೇ ಸ್ಕೂಟರ್ ಖರೀದಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹೋಂಡಾ ದ್ವಿಚಕ್ರ ವಾಹನಗಳ ವಿತರಕರು ಯಾವುದೇ ಭೌತಿಕ ದಾಖಲೆಯನ್ನು (ಹಾರ್ಡ್ ಕಾಪಿ) ಇಲ್ಲದೆ ಆನ್‌ಲೈನ್ ಮತ್ತು ಡಿಜಿಟಲ್ ಮೂಲಕ ಎಲ್ಲಾ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಕಂಪನಿಯು ತನ್ನ ವಾಹನಗಳನ್ನು 0% ಡೌನ್ ಪೇಮೆಂಟ್‌ನಲ್ಲಿ ನೀಡುತ್ತಿದೆ ಕಂಪನಿಯು ವಾಹನಗಳಿಗೆ 100% ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ. ಇದಲ್ಲದೆ, ಕಂಪನಿಯು ವಾಹನಗಳ ಆನ್‌ಲೈನ್ ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಹೋಂಡಾ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡನೇ ಸ್ಕೂಟರ್ ಮತ್ತು ಪ್ರತಿ ಮೂರನೇ ದ್ವಿಚಕ್ರ ವಾಹನವು ಆಕ್ಟಿವಾ ಆಗಿರುತ್ತದೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ 125 ಸ್ಕೂಟರ್ ಸ್ಟ್ಯಾಂಡರ್ಡ್, ಅಲಾಯ್ ಮತ್ತು ಡಿಲಕ್ಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ವಿಶ್ವಾಸಾರ್ಹವಾದ ಹಾಗೂ ಹೆಚ್ಚು ಮೈಲೇಜ್ ನೀಡುವ ಈ ಸ್ಕೂಟರ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ನಲ್ಲಿ 124 ಸಿಸಿ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.18 ಬಿಹೆಚ್‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಸ್ಕೂಟರಿನಲ್ಲಿ ಪರಿಷ್ಕರಿಸಿದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಮುಂಭಾಗ ಹಾಗೂ ಸೈಡ್‍‍ನಲ್ಲಿ ಕ್ರೋಮ್ ಟ್ರಿಮ್ ಹಾಗೂ ಮುಂಭಾಗದಲ್ಲಿ ಹೊಸ ಎಪ್ರಾನ್‍‍ಗಳನ್ನು ಒಳಗೊಂಡಿವೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಈ ಬಿಎಸ್-6 ಹೋಂಡಾ ಆಕ್ಟಿವಾ 125 ಸ್ಕೂಟರ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಭಾಗದಲ್ಲಿ ಮೂರು-ಹಂತದ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಹೈಡ್ರಾಲಿಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಬಿಎಸ್-6 ಹೋಂಡಾಆಕ್ಟಿವಾ 125 ಸ್ಕೂಟರ್ ಸ್ಕೂಟರ್ ನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಸಿಜಿ ಸ್ಟಾರ್ಟರ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ನಂತಹ ಫೀಚರ್ ಗಳನ್ನು ಹೊಂದಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಅಕ್ಟೋಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 4,32,207 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಹೋಂಡಾ ಕಂಪನಿಯು ಒಟ್ಟು 5,27,180 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಇನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 3,94,623 ಯುನಿಟ್‌ಗನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 4,94,459 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.20 ರಷ್ಟು ಕುಸಿತವಾಗಿದೆ. ಹೋಂಡಾ ಟೂ-ವೀಲರ್ಸ್ ಇಂಡಿಯಾ ಕಳೆದ ತಿಂಗಳಿನಲ್ಲಿ 37,584 ಯುನಿಟ್‌ಗಳನ್ನು ರಫ್ಟು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಂಡಾ ಕಂಪನಿಯು 32,721 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಹೋಂಡಾ ಕಂಪನಿಯು ಶೇ.15 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ Honda Activa 125 ಸ್ಕೂಟರ್ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಪಟ್ಟಿಯಲ್ಲಿ ಬಿಎಸ್-6 ಆಕ್ಟಿವಾ 125 ಅಗ್ರಸ್ಥಾನದಲ್ಲಿ. ಈ ಸ್ಕೂಟರ್ ಮೇಲೆ ಬಂಪರ್ ಕ್ಯಾಶ್ ಬ್ಯಾಕ್ ಆಫರ್ ಅನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

Article Published On: Thursday, November 4, 2021, 12:45 [IST]
English summary
Honda activa 125 scooter diwali cashback offer details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+